The government is going to take away the land of the Scheduled Tribes. Appeal to the Gratu Tehsildar
ತಿಪಟೂರು. ತಾಲ್ಲೂಕಿನ ಹೊನವಳ್ಳಿ ಹೋಬಳಿ ಬಿ ಗೌಡನಕಟ್ಟೆ ಮಜರೆ ಮರಿಸಿದ್ದಯ್ಯನಪಾಳ್ಯ ಗ್ರಾಮದಲ್ಲಿ ಸರ್ವೆ ನಂಬರ್ 52 ರಲ್ಲಿ ದಲಿತ ಕುಟುಂಬಗಳು ಸುಮಾರು 70 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದು ಇವಾಗ ಸರ್ಕಾರ ಹೇಳುತ್ತಿದೆ ನಾವು ಯಾವುದೇ ಕಾರಣಕ್ಕೂ ದಲಿತರ ಜಮೀನನ್ನು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ ಕಾರಣ ಗ್ರಾಮದಲ್ಲಿ ಸ್ಮಶಾಣ ಇಲ್ಲ ಸ್ಮಶಾನ ನಿರ್ಮಾಣ ಮಾಡುವುದಕ್ಕೆ ನಾವು ದಲಿತರು ಸಾಗುವಳಿ ಮಾಡಿಕೊಂಡು ಬರುತ್ತಿರುವ ಭೂಮಿಯನ್ನು ಹುಡುಕಿ ಹುಡುಕಿ ಸರ್ಕಾರ ಮುಟ್ಟಗೋಲು ಹಾಕಿಕೊಳ್ಳುತ್ತಿದೆ ದಲಿತರಿಗೆ ಅನ್ಯಾಯ ಮಾಡುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಎ ಸಿ ಹಾಗೂ ತಹಸಿಲ್ದಾರ್ ಅವರ ಗಮನಕ್ಕೆ ತಂದಿದ್ದೇವೆ ಇದರ ಬಗ್ಗೆ ಸರ್ಕಾರ ಗಮನ ಹರಿಸದಿದ್ದರೆ ಇದೇ ತಾಲ್ಲೂಕು ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಕರ್ನಾಟಕ ಭೀಮಸೇನೆ ರಾಜ್ಯಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ ಎಚ್ಚರಿಕೆ ನೀಡಿದ್ದಾರೆ..
ಈ ಸಂದರ್ಭದಲ್ಲಿ. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ. ಜಿಲ್ಲಾ ಮುಖಂಡ ಶೆಟ್ಟಿಹಳ್ಳಿ ಕಲ್ಲೇಶ್ .ವಿ.ಅಧ್ಯಕ್ಷ ಅಶೋಕ್ ಗೌಡನಕಟ್ಟೆ. ಭೀಮ ಸೇನೆ ಅಧ್ಯಕ್ಷ ಮಂಜುನಾಥ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎನ್.ಮೂರ್ತಿ ಸ್ಥಾಪಿತ ತಾಲೂಕು ಅಧ್ಯಕ್ಷ ಟಿ ರಾಜು. ಯುವ ಮುಖಂಡ ಗುರುಗದಹಳ್ಳಿ ಮಂಜು. ತಾಲೂಕು ಸಂಚಾಲಕ ಹರಚನಹಳ್ಳಿ ಮಂಜು. ಲಕ್ಷ್ಮಯ್ಯ ಸೇರಿದಂತೆ ಪ್ರಮುಖ ಮುಖಂಡರುಗಳು ಹಾಜರಿದ್ದರು.