Buses parked on the road caused inconvenience to the public and other vehicles.

ವರದಿ : ಬಂಗಾರಪ್ಪ .ಸಿ .
ಹನೂರು : ಪಟ್ಟಣದ ಖಾಸಗಿ ಬಸ್ಸು ನಿಲ್ದಾಣದಲ್ಲಿ ಇದ್ದಕ್ಕಿದ್ದಹಾಗೆ ಖಾಸಗಿ ಬಸ್ಸೊಂದು ಕೆಲಕಾಲ ಸ್ಥಗಿತಗೊಂಡು ನಿಂತಿರುವ ಘಟನೆ ಜರುಗಿದೆ .
ಹನೂರಿನಿಂದ ಕೊಳ್ಳೆಗಾಲ ಮಾರ್ಗವಾಗಿ ಸಂಚಾರ ಮಾಡಲು ಪ್ರಯಾಣಿಕರನ್ನು ಕರೆದೊಯ್ಯುವ ಸಮಯದಲ್ಲಿ ಸ್ಥಗಿತಗೊಂಡ ಪರಿಣಾಮವಾಗಿ ಕೆಲಕಾಲ ದೂರದ ಪ್ರಯಾಣ ಮಾಡುವವರಿಗೆ ತೊಂದರೆಯುಂಟಾಯಿತು ಇದರಿಂದಾಗಿ ಸುತ್ತ ಮುತ್ತಲಿನ ಗ್ರಾಮಗಳಿಗೆ ಸಂಚಾರ ಮಾಡುವ ಕೆಲವಾಹನ ಸವಾರರಿಗೆ ಬಹಳ ಕಿರಿಕಿರಿಯಾಗಿದ್ದುಂಟು .ಅಲ್ಲದೆ ಅರಕಲು ಮುರುಕಲು ರಸ್ತೆ ಯಿಂದಾಗಿ ಹಲವಾರು ವರ್ಷಗಳಿಂದ ಬಹಳಷ್ಟು ಜನರು ತೊಂದರೆ ಅನುಭವಿಸುವಂತಾಗಿತ್ತು ಆದರೆ ಉತ್ತಮ ರಸ್ತೆ ಗಳಾಗಿದ್ದ ಸಮಯದಲ್ಲಿ ಹಲವಾರು ಬಾರಿ ಖಾಸಗಿ ವಾಹನಗಳು ಎಲ್ಲೆಂದರಲ್ಲಿ ರೀಪೇರಿಯಾಗಿ ನಿಲ್ಲುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು .