Applications are invited for grant-in-aid from the City Council

ಗಂಗಾವತಿ,29:ಈ ನಗರಸಭೆಯಿಂದ 2023-24 ನೇ ಸಾಲಿನ ಶೇ. 5% ರ ಯೋಜನೆಯಡಿಯಲ್ಲಿ ವಿಕಲಚೇತನರಿಗೆ ಸಣ್ಣ ಉದ್ದಿಮೆದಾರರಿಗೆ ಸ್ವಯಂ ಉದ್ಯೋಗಕ್ಕಾಗಿ, ಬುದ್ಧಿಮಾಂಧ್ಯ ವಿಕಲಚೇತರನ ಆರೈಕೆಗಾಗಿ, ಸಾಧನ ಸಲಕರಣೆಗಳ ವಿತರಣೆಗಾಗಿ ಹಾಗೂ ಶಸ್ತ್ರಚಿಕಿತ್ಸೆಗಾಗಿ ಸಹಾಯ ಧನ ನೀಡುವ ಬಗ್ಗೆ ಮತ್ತು ಶೇ. 2% ರ ಯೋಜನೆಯಡಿಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳಿಗಾಗಿ ಸಹಾಯ ಧನ ನೀಡುವ ಬಗ್ಗೆ ಅರ್ಜಿಗಳನ್ನು

ಆಹ್ವಾನಿಸಲಾಗಿದ್ದು, ಅರ್ಹ ಅರ್ಜಿದಾರರು ಸದರಿ ಸೌಲಭ್ಯಗಳಿಗೆ ವಿಕಲಚೇತನ ಪ್ರಮಾಣ ಪತ್ರ, ಆಧಾರ ಕಾರ್ಡ್, ಐಡಿ ಕಾರ್ಡ್, ಬ್ಯಾಂಕ ಪಾಸ ಬುಕ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಇತರೆ ದಾಖಲಾತಿಗಳನ್ನು ಲಗತ್ತಿಸಿ ದಿನಾಂಕ: 28-02- 2024 ರಿಂದ 20-03-2024 ರೊಳಗಾಗಿ ಈ ಕಚೇರಿಗೆ ಸಲ್ಲಿಸುವಂತೆ ನಗರ ಸಭೆ ಪೌರಾಯುಕ್ತರು ತಿಳಿಸಿರುತ್ತಾರೆ .
,
.