Breaking News

ಗೃಹಲಕ್ಷ್ಮಿಯೋಜನೆ ಅನುಷ್ಠಾನ: ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ

Implementation of Grilahakshmi Yojana: Chief Minister Siddaramaiah did as promised

ಜಾಹೀರಾತು
ಜಾಹೀರಾತು


ಗಂಗಾವತಿ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಮಹಿಳೆಯರಿಗೆ ನೀಡಿದ್ದ ಭರವಸೆಯಂತೆ ಗ್ರಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಕುಟುಂಬದ ಯಜಮಾನಿಗೆ ೨೦೦೦ ರೂ. ಹಣ ಅವರ ಖಾತೆಗೆ ಜಮಾ ಮಾಡುವ ಮೂಲಕ ನುಡಿದಂತೆ ನಡೆದಿದ್ದಾರೆಂದು ಕಾಂಗ್ರೆಸ್ ಮಹಿಳಾ ಮುಖಂಡರಾದ ಗೀತ ವಿಕ್ರಂ ಹೇಳಿದರು.
ಅವರು ನಗರದ ೨೫ನೇ ವಾರ್ಡ್ ಪಾಂಡುರಂಗ ಗುಡಿಯಲ್ಲಿ ನಗರಸಭೆ ಆಯೋಜಿಸಿದ ಗ್ರಹಲಕ್ಷ್ಮಿ ಯೋಜನೆಯ ನೇರ ಪ್ರಸಾರ ವೀಕ್ಷಣೆಯ ನಂತರ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಅಗ್ರಸ್ಥಾನ ನೀಡಿದ್ದು ಉಚಿತ ಬಸ್ ಪಾಸ್, ಅನ್ನ ಭಾಗ್ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಮನೆಗಳಿಗೆ ಉಚಿತವಾಗಿ ವಿದ್ಯುತ್ ನೀಡುವ ಮೂಲಕ ಬಡವರು ಮುಖ್ಯವಾಹಿನಿಲು ಬರಲು ಬೇಕಾಗುವ ಯೋಜನೆ ಅನುಷ್ಠಾನ ಮಾಡಿ ದೇಶದಲ್ಲಿ ಮಾದರಿಯಾಗಿದೆ .
ಕೇಂದ್ರ ಸರ್ಕಾರ ಕೂಡ ಜನಪರವಾದ ಯೋಜನೆಗಳನ್ನು ಅನುಷ್ಠಾನ ಮಾಡಿ ಬಡವರು ಮತ್ತು ದೀನ ದಲಿತರು ಮುಖ್ಯವಾಹನಿಗೆ ಬರುವ ಯೋಜನೆಗಳನ್ನು ಜಾರಿ ಮಾಡಬೇಕು. ಅದನ್ನು ಬಿಟ್ಟು ರಾಜ್ಯ ಸರ್ಕಾರಗಳ ವಿರುದ್ಧ ಸೇಡಿನ ಮನೋಭಾವ ಬಿಡಬೇಕೆಂದರು.
ವಾರ್ಡಿನ ಮಹಿಳೆಯರಾದ ಕೆ.ವರಲಕ್ಷ್ಮಿ, ವಾಣಿ ಹಾಗೂ ನಗರಸಭೆ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರಿದ್ದರು.

About Mallikarjun

Check Also

ನ್ಯಾಯಾಲಯಗಳಲ್ಲಿ ಕನ್ನಡ ಭಾಷಾ ಅನುಷ್ಠಾನ ರಾಜ್ಯ ಸಮಿತಿ ಉದ್ಘಾಟನಾ ಸಮಾರಂಭ.

Inaugural ceremony of the State Committee for Implementation of Kannada Language in Courts. ಬೆಂಗಳೂರು ಮಾರ್ಚ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.