Breaking News

ಇಂದಿನ ಮಕ್ಕಳೇನಾಳಿನ ಪ್ರಜೆಗಳು: ಸಂಗಮೇಶ ಎನ್ ಜವಾದಿ.

Today’s children are tomorrow’s citizens: Sangamesh N Javadi.

ಚಿಟಗುಪ್ಪ : ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಹೆಮ್ಮೆಯ ಪ್ರಜೆಗಳು, ಹತ್ತು ಹಲವು ಕನಸುಗಳನ್ನು ಹೊತ್ತು ಸಾಗುತ್ತಿರುವ ದೇವ ಸ್ವರೂಪವೇ ಮಕ್ಕಳು ಎಂದು ಸಾಹಿತಿ, ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಂಗಮೇಶ ಎನ್ ಜವಾದಿ ನುಡಿದರು.

ನಗರದ ಕನ್ಯಾ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜವಾಹರಲಾಲ್ ನೆಹರು ರವರು ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ಅವರ ಮುಖ್ಯ ಧ್ಯೇಯ ಆಗಿತ್ತು. ಚಾಚಾ ನೆಹರು ರವರ ಸವಿನೆನಪಿಗಾಗಿ ಅವರ ಜನ್ಮ ದಿನಾಂಕದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಕ್ಕಳು ಸಮಾಜದ ಅಡಿಪಾಯ, ಮಕ್ಕಳೇ ಆಧುನಿಕ ಸಮಾಜದ ನಿರ್ಮಾಪಕರು, ಮಕ್ಕಳೇ ಮುಂದಿನ ಅಭಿವೃದ್ಧಿಯ ಹರಿಕಾರರು, ಮಕ್ಕಳಲ್ಲಿ ಯಾವುದೇ ರೀತಿಯ ಭೇದಭಾವಗಳಿಲ್ಲದೆ ಎಲ್ಲರೂ ನಮ್ಮವರು ಎಂದು ಅವರ ಬಾಲ್ಯ ಜೀವನವನ್ನು ಕಳೆಯುತ್ತಾರೆ. ಅದಕ್ಕಾಗಿಯೇ ಮಕ್ಕಳೇ ದೇವರೆಂದು ಕರೆಯುವುದುಂಟು.
ಮಕ್ಕಳ ಹಕ್ಕುಗಳು, ಯೋಗಕ್ಷೇಮ ಮತ್ತು ಸಮಗ್ರ ಬೆಳವಣಿಗೆಗಾಗಿ ಮಕ್ಕಳ ದಿನಾಚರಣೆ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಅಸ್ಲಾಂಮಿಯಾ ಆಜಾಮ್ ಸ್ಪೀಟ್ ಹೌಸ್ ಮಾತನಾಡಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ. ‘ಚಾಚಾ ನೆಹರು’ ಎಂದು ಜನಪ್ರಿಯರಾಗಿದ್ದ ಪಂಡಿತ್ ನೆಹರು ಅವರನ್ನು ಮಕ್ಕಳ ಮೇಲಿನ ಪ್ರೀತಿ ಮತ್ತು ಯುವ ಮನಸ್ಸುಗಳನ್ನು ಪೋಷಿಸುವ ಅವರ ಸಮರ್ಪಣೆಗಾಗಿ ಈ ದಿನವನ್ನು ಆಚರಿಸಲಾಗುತ್ತೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಮಾರುತಿ ರೆಡ್ಡಿ ಮಾತನಾಡಿ ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಕಲ್ಯಾಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಲ್ಲಿ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಪ್ರತಿ ವರ್ಷ ನವೆಂಬರ್ 14 ರಂದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಆಚರಿಸಲಾಗುತ್ತದೆ ಎಂದರು.

ಇದೆ ಸಂದರ್ಭದಲ್ಲಿ ವಿಧ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸಮಾರಂಭದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗದವರು, ವಿದ್ಯಾರ್ಥಿನಿಯರು, ಗಣ್ಯರು ಉಪಸ್ಥಿತರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.