Breaking News

ನ್ಯಾಯವಾದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಭಿರ.

Free health checkup camp for lawyers.

ಜಾಹೀರಾತು

ಗಂಗಾವತಿ: ಸ್ಥಳೀಯ ನ್ಯಾಯವಾದಿಗಳ ಸಂಘದಲ್ಲಿ ಕಳೆದ ಬುಧವಾರ, ಗುರುವಾರ ಮತ್ತು ಶುಕ್ರವಾರ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕೇವಾ ಕೈಪೋ ಆಯುರ್ವೇದ ಕಂಪನಿಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಧ ಬೆಲೆಗೆ ಆಯುರ್ವೇದ ಔಷಧ ಮತ್ತು ಫ಼ುಡ್ ಪ್ರೊಡಕ್ಟಗಳನ್ನು ನೀಡಲಾಯಿತು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಕಾರ್ಯಕ್ರಮವನ್ನು ಉದ್ಘಾಟಿಸಿ,ಉಚಿತ ಆರೋಗ್ಯ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ನೀಡಲಾಗುವ ಔಷಧಗಳ ಪ್ರಯೋಜನ ಪಡೆಯಲು ಕರೆ ನೀಡಿದರು.

ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಮತ್ತು ನ್ಯಾಯವಾದಿ ಅಶೋಕಸ್ವಾಮಿ ಹೇರೂರ ದೇಹದಲ್ಲಿನ ಲವಾಣಾಂಶಗಳ ಕೊರತೆಯನ್ನು ಪತ್ತೆ ಹಚ್ಚುವ ಹೆಲ್ತ ಅನೈಲಜರ್ ಯಂತ್ರದ ತಪಾಸಣೆಯಿಂದ ಮುಂಬರುವ ರೋಗಗಳ ಸಮಸ್ಯೆಯಿಂದ ಪರಿಹಾರ ಕಂಡು ಕೊಳ್ಳಬಹುದು ಎಂದು ವಿವರಿಸಿದರು.

ಸೈಕಲಾಜಿಸ್ಟ ಮತ್ತು ಔಷಧ ತಜ್ಞ ವಿಜಯಕುಮಾರ್ ಯಾದವ್ ಮತ್ತು ಆಹಾರ ತಜ್ಞ ಅಜಯ ಕುಮಾರ್ ಅವರು ಆರೋಗ್ಯ ತಪಾಸಣೆ ನಡೆಸಿದರು.ರಕ್ತ ಪರೀಕ್ಷೆ ಹಾಗೂ ರಕ್ತದೊತ್ತಡವನ್ನು ಸಹ ಪರೀಕ್ಷಿಸಲಾಯಿತು.

300 ಕ್ಕೂ ಹೆಚ್ಚು ನ್ಯಾಯವಾದಿಗಳು,ನ್ಯಾಯಾಲಯದ ಸಿಬ್ಬಂದಿ ಮತ್ತು ನ್ಯಾಯಾಧೀಶರು ಸಹ ಚಿಕಿತ್ಸೆಗೆ ಒಳಪಟ್ಟರು.ಕೇವಾ ಕೈಪೋ‌ ಆಯುರ್ವೇದ ಕಂಪನಿಯ ತರಬೇತುದಾರರಾದ ರಮೇಶ್ ಬಾಬು,ಶ್ರೀಮತಿ ಮಂಜುಳಾ ಕಂಪ್ಲಿ ,ಔಷಧ ವಿತರಕರಾದ ಕಲ್ಯಾಣರಾವ್,ರಾಜಶೇಖರಯ್ಯ ಭಾನಾಪೂರ ಮತ್ತು ಸಿ.ಚಿದಾನಂದ ಔಷಧಗಳನ್ನು ವಿತರಿಸಿದರು.

ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ,
ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ , ಪ್ರಧಾನ ಸಿವಿಲ್ ನ್ಯಾಯಾಧೀಶರಾದ
ಶ್ರೀಮತಿ ಶ್ರೀದೇವಿ ದರ್ಬಾರೇ, ನೋಟರಿ ಸುಭಾಷ ರಾಠೋಡ, ಹಿರಿಯ ನ್ಯಾಯವಾದಿಗಳಾದ ನಾಗನಗೌಡ,ಕನಕರಾಯ,ಎಚ್.ಬಸನಗೌಡ, ಎಚ್.ಪ್ರಭಾಕರ, ನಾಗರಾಜ ಜವಳಿ, ನಿವೃತ್ತ ಡೆಪ್ಯುಟಿ ಡೈರೆಕ್ಟರ್ ಆಫ಼್ ಪ್ರಾಸ್ಯೂಕೂಷನ್ ಗಂಜಿಗಟ್ಟಿ,ಶಿರಸ್ತೆದಾರ್ ಶ್ರೀಧರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

About Mallikarjun

Check Also

ಸುವರ್ಣ ಸಾಧಕಿ ಪ್ರಶಸ್ತಿಗೆ ಭಾಜನರಾದ. ರೂಪರಾಣಿ ಲಕ್ಷ್ಮಣ್

Winner of the Golden Achievement Award. Rooprani Laxman. ಗಂಗಾವತಿ. ನಗರದ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಶ್ರೀಮತಿ ರೂಪಾರಾಣಿ …

Leave a Reply

Your email address will not be published. Required fields are marked *