
ಹನೂರು : ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ದಲ್ಲಾಳಿಗಳ ಹಾವಳಿಯನ್ನು ತಡೆಗಟ್ಟಲು ಸಾಕಷ್ಟು ಪ್ರಮಾಣದಲ್ಲಿ ಪ್ರಯತ್ನ ಮಾಡಲಾಗಿದೆ ಆದರೆ ಸಾರ್ವಜನಿಕರಿಗಿಂತ ಹೆಚ್ಚಾಗಿ ದಲ್ಲಾಳಿಗಳೆ ತಮ್ಮ ಕೆಲಸ ಕಾರ್ಯಮಾಡಿಸಿಕೊಂಡು ನೌಕರ ವರ್ಗದವರ ಮೇಲೆ ಮೇಲಾಧಿಕಾರಿಗಳಿಗೆ ದೂರುತ್ತಾರೆ .ಯಾವುದೇ ಕಛೇರಿಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಮಾಡಲು ನೈಜ ದಾಖಲೆಗಳು ಬಹು ಮುಖ್ಯವಾಗಿದೆ ಆದರೆ ಹನೂರು ಪಟ್ಟಣದಲ್ಲಿ ದಲ್ಲಾಳಿಗಳು ತರುವ ಕಡತಗಳಲ್ಲಿ ಮೂಲ ಕಡತಗಳೆ ಇರುವುದಿಲ್ಲ ಅಧಿಕಾರಿಗಳಾಗಿ ಕಾನೂನು ರೀತಿಯಲ್ಲಿ ಕೆಲಸ ಮಾಡಲು ಬಹಳ ತೊಂದರೆಯಾಗುತ್ತದೆ ನಾವುಗಳು ಸ್ಥಳೀಯ ಮಟ್ಟದಲ್ಲಿ ದಲ್ಲಾಳಿಗಳ ಹಾವಳಿಯನ್ನು ಸ್ವಲ್ಪ ಮಟ್ಟಿಗೆ ತಡೆಯಲು ಪ್ರಯತ್ನಿಸಿದ್ದೆವೆ ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸರೆಳದ ಸದಸ್ಯರೊಬ್ಬರು ತಿಳಿಸಿದರು.