SV Gopalakrishna appointed as State Honorary Legal Adviser and Spokesperson of Kalyan Karnataka Dalit Sangharsh Samiti.

ಗಂಗಾವತಿ: ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಗೌರವಾಧ್ಯಕ್ಷರಾದ ನರಸಿಂಹಲು ಚಿಂತಲಕುAಟ, ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ ಇವರುಗಳ ನೇತೃತ್ವದಲ್ಲಿ ಜನವರಿ-೮ ಗುರುವಾರ ಗಂಗಾವತಿ ನಗರದ ಸರ್ಕೀಟ್ ಹೌಸ್‌ನಲ್ಲಿ ರಾಜ್ಯ ಸಮಿತಿಗೆ ಗೌರವ ಕಾನೂನು ಸಲಹೆಗಾರರು ಹಾಗೂ ಸಂಘದ ವಕ್ತಾರರನ್ನಾಗಿ ಎಸ್.ವಿ ಗೋಪಾಲಕೃಷ್ಣ ಅವರನ್ನು ನೇಮಕ ಮಾಡಲಾಯಿತು.
ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿಯವರು ನೇಮಕಾತಿ ಆದೇಶ ಪತ್ರ ನೀಡಿ, ನಮ್ಮ ರಾಜ್ಯ ಸಮಿತಿಗೆ ಸಲಹೆ, ಸೂಚನೆ, ಮಾರ್ಗದರ್ಶನ ಮತ್ತು ಸಂಘಟನಾ ಕೌಶಲ್ಯ ಇತ್ಯಾದಿಗಳ ಬಗ್ಗೆ ಕಲ್ಯಾಣ ಕರ್ನಾಟಕದ ಯಾವತ್ತೂ ಜಿಲ್ಲಾ ಮತ್ತು ತಾಲ್ಲೂಕ ಕೇಂದ್ರಗಳಿಗೆ ಪ್ರವಾಸ ಮಾಡಿ ಅಥವಾ ಪತ್ರಿಕಾ ಪ್ರಕಟಣೆಯ ಮೂಲಕ ಸಂಘಟನೆ ಬಲಪಡಿಸಲು ಸೂಕ್ತ ನೆರವು ನೀಡಬೇಕೆಂದು ಆಶಿಸಿದರು.