Salur Devotees witnessing the birthday of Shri
.
ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ಭಕ್ತಿಯ ಮುಕ್ತಿ ಪಡೆಯಲು ಶ್ರೇಷ್ಠವಾದ ಆಗರ ಸಾಲೂರುಮಠ, ಕಾಯಕ ಮಾಡಿ ಕೈಲಾಸ ಕಾಣುವ ಹನೂರು ತಾಲ್ಲೊಕಿನ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಗುರುಸ್ವಾಮಿಗಳು. ಶ್ರೀಗಳಿಗೆ ಜನ್ಮದಿನದಶುಭಾಶಯಗಳನ್ನು ಎಲ್ಲಾ ಭಕ್ತರು ಆಚರಿಸಿದರು.
ಭಕ್ತಕೋಟಿಯನ್ನು ಸೃಷ್ಟಿಸಿ, ಹರಸಿ ಹಾರೈಸುವ ಶ್ರೀಗಳು.
ಜ್ಞಾನ, ಅನ್ನದಾಸೋಹವನ್ನು ನಿತ್ಯ ನಿರಂತರವಾಗಿ ಮಾಡಿಕೊಂಡು ಬಂದ ಶ್ರೀಗಳು.
ಅನೇಕ ದುರ್ಜನರುಗಳನ್ನು ಸಜ್ಜನರಾಗಿ ಮಾಡಿದರು ಶ್ರೀಗಳು.
ನಾಸ್ತಿಕರನ್ನು ಆಸ್ತಿಕರನ್ನಾಗಿ ಮಾಡಿ,
ಅನೇಕರಿಗೆ ಲಿಂಗಧಾರಣೆ ಮಾಡಿ, ದೀಕ್ಷೆ ನೀಡಿ ಮೋಕ್ಷಕ್ಕೆ ಎಡೆ ಮಾಡಿಕೊಟ್ಟರು ಶ್ರೀಗಳು,
ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದಗಳಲ್ಲಿ ನಿಷ್ಠೆಯುಳ್ಳವರು.
ಸತ್ಯ ಸಂಧರು, ಪರೋಪಕಾರಿಗಳು ನಮ್ಮ ಶ್ರೀಗಳು.
ಕಾಯಕ ಪ್ರಿಯರು, ದೀನದಲಿತರಲ್ಲಿ ಅನುಕಂಪ ಉಳ್ಳವರು, ಅತಿಥಿ ಅಭ್ಯಾಗತರ ಸೇವೆಯಲ್ಲಿ ಎತ್ತಿದ ಕೈನವರು, ದಾನಧರ್ಮ ಮನೋಭಾವವುಳ್ಳವರು, ಶಾಂತ ಮನೋಭಾವವುಳ್ಳವರು,
ಶ್ರೀಗಳಿಲ್ಲದ ಹಬ್ಬವಿಲ್ಲ, ಜಾತ್ರೆಯಿಲ್ಲ, ಮದುವೆ, ನಾಮಕರಣ, ಲಿಂಗದೀಕ್ಷೆಗಳಿಲ್ಲ.
ಶ್ರೀ ಮಠದ ರುಚಿಯುಂಡ
ಘಟಗಳೆಷ್ಟೋ,
ಬುದ್ಧಿ ಬೆಳೆಸಿಕೊಂಡ ಮರುಳರೆಷ್ಟೋ, ಗುರುಕಾರುಣ್ಯಕ್ಕೆ ಕಾತುರ ಪಟ್ಟು ಪಡೆದ ಮನುಜರೆಷ್ಟೋ..ಕಷ್ಟಜೀವಿಗಳು ಗುರುವಿನ ಆಶೀರ್ವಾದದಿಂದ ಸುಖ ಕಂಡವರು ಸಾವಿರಾರು ವಿದ್ಯಾರ್ಥಿಗಳು ಎಂದು ಭಕ್ತರೊಬ್ಬರು ತಿಳಿಸಿದರು.ಇದೇ ಸಮಯದಲ್ಲಿ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ,ಆಲಂಬಾಡಿ ಮಠದ ಸ್ವಾಮೀಜಿ ಗಳು ಸೇರಿದಂತೆ ಭಕ್ತರು ಹಾಜರಿದ್ದರು .