Farmer leader Goude Gowda started Sante Mala for farmers on Farmers Nal Road.
ವರದಿ : ಬಂಗಾರಪ್ಪ ಸಿ ಹನೂರು .
ಹನೂರು : ರೈತರೆ ಪ್ರಾರಂಭಿಸಿದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನ ಉದ್ಘಾಟನೆ ಮಾಡಿದ ರೈತ ಸಂಘಟನೆ ಮುಖಂಡ ಗೌಡೇಗೌಡರು .
ನಂತರ ಮಾತನಾಡಿದ ಅವರು
ತಾಲೂಕಿನ ಗಡಿ ಭಾಗವದ ನಾಲ್ ರೋಡ್ ಗ್ರಾಮದಲ್ಲಿ 25 ವರ್ಷಗಳ ಹಿಂದೆ ನೆನೆಗುದಿಗೆ ಬಿದ್ದಿದ್ದ ಮಾರುಕಟ್ಟೆಯನ್ನ ಗುರುವಾರ ರೈತ ಸಂಘಟನೆ ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದರು.
ಇಂದು ಮಾರುಕಟ್ಟೆ ಉದ್ಘಾಟನೆ ಮಾಡಿದ ನಂತರ ಗ್ರಾಹಕರು ದಿನ ನಿತ್ಯ ಬಳಕೆಗೆ ಬೇಕಾದಂತಹ ತರಕಾರಿ, ಸಾಂಬಾರ ಪದಾರ್ಥಗಳ ಖರೀದಿಗೆ ಗ್ರಾಹಕರು ಮುಗಿಬಿದ್ದರು.
ಮಾರುಕಟ್ಟೆಯಲ್ಲಿ ತರಕಾರಿ, ಸಾಂಬಾರ ಪದಾರ್ಥಗಳು, ಟೀ, ಕೋಳಿ, ಹಸು, ಮೀನು, ಮೇಕೆ ಮುಂತಾದವುಗಳನ್ನ ಮಾರಾಟ ಮಾಡಲಾಗಿತ್ತು.
ಇದೇ ವೇಳೆ ಮಾತನಾಡಿದ ಹನೂರು ತಾಲೂಕಿನ ರೈತ ಘಟಕದ ಅಧ್ಯಕ್ಷ ಅಮ್ಜಾದ್ ಖಾನ್ ಅಕ್ಕ ಪಕ್ಕದ ಸಂವಿಷ್ಟ ಕಾರ್ಯದರ್ಶಿ ಬಸವರಾಜ್ ರೈತರು ಬೆಳೆದಂತಹ ತರಕಾರಿ ಹಣ್ಣು, ದವಸ ದಾನ್ಯಗಳನ್ನ ಕೃಷಿ ಮಾರುಕಟ್ಟೆ ಮಾರಾಟ ಮಾಡಬೇಕು ಅದರಂತೆ ಗ್ರಾಹಕರು ಕೂಡ ತೆಗೆದು ಕೊಳ್ಳಬೇಕು, ಇಲ್ಲಿನ ಮಾರುಕಟ್ಟೆ ಸ್ವಚ್ಛತೆ ಮಾಡಲು ಸ್ವತಃ ರೈತರ ಹಣ ಹಾಕಿ ಸ್ವಚ್ಛತೆ ಮಾಡಿ ನಡೆಸಲಾಗುತ್ತದೆ ಎಂದರು.
ಈ ಮಾರುಕಟ್ಟೆ ದಿವಂಗತ ನಾಗಪ್ಪ ರವರು 25 ವರ್ಷಗಳ ಹಿಂದೆ 2 ಎಕರೆ ಜಾಗ ನೀಡಿ ಮಾರುಕಟ್ಟೆ ಮಾಡಿದ ಪುಣ್ಯತ್ಮ. ಅವರ ಕನಸನ್ನ 25 ವರ್ಷ ಗಳ ಬಳಿಕ ಇಂದು ರೈತ ಸಂಘಟನೆ ಮಾಡುತ್ತಿದೆ.ಯಾವುದೇ ತೊಂದರೆ ಇಲ್ಲದೆ ಪ್ರತಿ ಗುರುವಾರ ಮಾರುಕಟ್ಟೆಯಲ್ಲಿ ಬೆಳೆದ ತರಕಾರಿ, ಹಣ್ಣುಗಳಣ್ಣ ಮರಾಟಮಾಡಬೇಕು.ಯಾವುದೇ ಕಾರಣಕ್ಕೂ ಮಾರುಕಟ್ಟೆ ಮುಚ್ಚಬಾರದು
ಬಂದ್ ಗೆ ಕರೆ :ನಾಳೆ ನಡೆಯಲಿರುವ ಕರ್ನಾಟಕ ಬಂದ್ ಗೆ
ಮಾರ್ಟಳ್ಳಿ, ಜಲ್ಲಿಪಾಳ್ಯ, ನಾಲ್ ರೋಡ್ ಗ್ರಾಮದಲ್ಲಿನ ಅಂಗಡಿ ಮುಂಗಟ್ಟು ಬಂದ್ ಮಾಡಿ ಹನೂರಿಗೆ ಬಂದು ಎಲ್ಲ ರೈತರು ಭಾಗವಹಿಸ ಬೇಕೆಂದು ಕೊಳ್ಳೇಗಾಲ ರೈತ ಸಂಘದ ಮಾಜಿ ಅಧ್ಯಕ್ಷ ಗೌಡೇಗೌಡ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾರ್ಟಳ್ಳಿ ಗ್ರಾಮ ಘಟಕದ ಅಧ್ಯಕ್ಷ ಸೊಸೈ ಮಾಣಿಕ್ಂ, ಹನೂರು ಗ್ರಾಮ ಘಟಕದ ಮಹಿಳೆ ಅಧ್ಯಕ್ಷ ರಾಜಮಣಿ,ಕುಮಾರ್,ಅಪುರ್ದ್ ರಾಜ್,ಕಾರ್ಯದರ್ಶಿ ಅರೋಗ್ಯ ರಾಜ್,ದಾಮಣಿ,ಮರಿಯಾ ಜೋಸೆಫ್ (ಮಾಜಿ ಸೈನಿಕ ),ಪುಂಗೋಡಿ, ಶಿವ ಕುಮಾರ್, ವೇಲುಸ್ವಾಮಿ, ವಿವಿಧ ಗ್ರಾಮ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.