Breaking News

ಮಾರ್ಚ 3ರಂದು ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿ: ಡಾ.ಲಿಂಗರಾಜ ಟಿ ಮನವಿ

Give pulse polio vaccination to children on March 3 without fail: Dr. Lingaraja T appeals

ಗಂಗಾವತಿ.03 ರಾಷ್ಟ್ರೀಯ ಪಲ್ಸ್ ಕಾರ್ಯಕ್ರಮದ ಅಂಗವಾಗಿಮಾರ್ಚ್ 3ರಿಂದ 6ರವರೆಗೆ ಜಿಲ್ಲೆಯ ಐದುವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸ ಬೇಕೆಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ ಟಿ ಸೂಚಿಸಿದರು.

  ಆನೆಗೊಂದಿ ರಸ್ತೆಯಲ್ಲಿ  ಇರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 

ಜಿಲ್ಲೆಯ ಅರ್ಹ 1,ಲಕ್ಷ 74 ಸಾವಿರ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಇದ್ದು, ಯಾವುದೇ ಮಗು ಲಸಿಕೆ ಯಿಂದ ವಂಚಿತವಾಗದಂತೆ ವ್ಯವಸ್ಥಿತವಾಗಿ ಲಸಿಕಾ ಕಾರ್ಯಕ್ರಮಯಶಸ್ವಿಗೊಳಿಸಬೇಕು. ಇದರೆಡೆ ಹೆಚ್ಚಿನ ಅರಿವು ಮೂಡಿಸಲು ಗ್ರಾ ಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜಾಥಾ ಏರ್ಪಡಿಸ ಬೇಕು. 

ಈ ನಿಟ್ಟಿನಲ್ಲಿ ಆರೋಗ್ಯ,ಶಿಕ್ಷಣ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯೊಂದಿಗೆ ಕೆಲಸ ಮಾಡಬೇಕೆಂದರು.

ಉಪವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಈಶ್ವರ ಶಿ.ಸವಡಿ ಅವರು ಮಾತನಾಡಿ,5 ವರ್ಷದೊಳಗಿನ ನಗರ ಪ್ರದೇಶದ ಮಕ್ಕಳು,ಹಾಗೂ ಗ್ರಾಮೀಣ ಪ್ರ ದೇಶದ  ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದೆ. ಇದಕ್ಕಾಗಿ ಗಂಗಾವತಿ ತಾಲ್ಲೂಕಿನಲ್ಲಿ  ಒಟ್ಟು 56  ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.66  ಲಸಿಕಾ ಕಾರ್ಯಕರ್ತರ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. 3ರಂದು ಕೇಂದ್ರಗಳಲ್ಲೇ ಶೇ.95 ಲಸಿಕೆ ಹಾಕಲಾಗುವುದು.

 ನಂತರದ ದಿನಗಳಲ್ಲಿ ಮನೆ,ಮನೆ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು  ಭೇಟಿ ಮೂಲಕ ಲಸಿಕೆ ಹಾಕಲಾಗುವುದು ಹಾಗಾಗಿ ನಾವು ಪೋಲಿಯೋ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕಿದೆ. ನಮ್ಮ ರಾಜ್ಯದಲ್ಲಿ 2007ರ ನಂತರ ಇಲ್ಲಿಯವರೆಗೂ ಯಾವುದೇ ಪೋಲಿಯೋ ಪ್ರಕರಣ ಕಂಡುಬಂದಿಲ್ಲ ಎಂದು ತಿಳಿಸಿದರು. ಪಲ್ಸ್ ಪೋಲಿಯೋ ಕಾರ್ಯಕ್ರಮ ಕಳೆದ ಬಾರಿ ಜಿಲ್ಲೆಯಲ್ಲಿ ಶೇ.95 ರಷ್ಟು ಸಾಧನೆಯಾಗಿದೆ ಈಗಾಗಲೇ ಪೋಲಿಯೋ ಮುಕ್ತ ಭಾರತವೆಂದು ಘೋಷಣೆಯಾಗಿದ್ದು, ಒಂದು ಪ್ರಕರ ಪತ್ತೆಯಾದರೂ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಸುದ್ದಿಯಾಗಲಿದೆ. ಆದ್ದರಿಂದ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸ ಬೇಕಿದೆ ಎಂದರು.ಮಾರ್ಚ್ 3ರಿಂದ 6ರವರೆಗೆ ಯಾವುದೇ ಕಾರಣಕ್ಕೂ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಬೆಸ್ಕಾಂ ಅಧಿಕಾರಿಗಳು ಕ್ರಮ ವಹಸಬೇಕೆಂದು ಹೇಳಿದರು.

 ಈ ಸಂದರ್ಭದಲ್ಲಿ ಕೊಪ್ಪಳ ತಾಯಿ ಮಕ್ಕಳ ಆರೋಗ್ಯದ್ಯಾಧಿ ಡಾ.ಪ್ರಕಾಶ,ಕುಷ್ಠ ರೋಗ ನಿರ್ವಾಣಾಧಿಕಾರಿ ಡಾ.ಪ್ರಕಶ,ಆರೋಗ್ಯ ಸಿಬ್ಬಂದಿಗಳಾದ ಜ್ಯೋತಿ, ಲಕ್ಷ್ಮೀದೇವಿ, ಸೇರಿದಂತೆ ಇತರರು ಇದ್ದರು

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.