Breaking News

ಉಡುತೊರೆ ಜಲಾಶಯಕ್ಕೆ ಬೇಟಿ ನೀಡಿ ವಿಕ್ಷೀಸಿದ ಶಾಸಕ ಎಂ.ಆರ್ ಮಂಜುನಾಥ್.

MLA M.R. Manjunath, who has raised the stake for the Uduthore reservoir.

ಜಾಹೀರಾತು


ವರದಿ : ಬಂಗಾರಪ್ಪ .ಸಿ .

ಹನೂರು :ಪ್ರತಿಯೊಂದು ಬೆಳೆಗೂ ನೀರೆ ಮುಖ್ಯ ಹಾಗಾಗಿ ಉಡುತೊರೆ ಜಲಾಶಯ ಬಲದಂಡೆ ಗೇಟ್ ದುರಸ್ತಿ ಪಡಿಸಿರುವುದನ್ನು ಪರಿಶೀಲನೆ ನಡೆಸಲಾಗಿದೆ ಎಂದು ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು .

ಹನೂರು ತಾಲ್ಲೋಕಿನ ಅಜ್ಜಿಪುರ ಸಮೀಪದ ಉಡುತೊರೆ ಜಲಾಶಯ ಸಂಬಂಧಿಸಿದಂತೆ ಗೇಟ್ ಗಳ ದುರಸ್ತಿ ಕಾರ್ಯದ ನಿಮಿತ್ತವಾಗಿ ಸಂಬಂಧಿಸಿದ ನೀರಾವರಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ ಈ ಭಾಗದ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಸದುದ್ದೇಶದಿಂದ ಮಾಡಲಾಗಿರುವ ಜಲಾನಯನ ಅಚ್ಚು ಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಒದಗಿಸುವ ಹಿನ್ನೆಲೆಯಲ್ಲಿ ಇಲ್ಲಿನ ಸಮಸ್ಯೆಗಳನ್ನು ವಿಸ್ತಾರವಾಗಿ ಅಧಿಕಾರಿಗಳ ಜೊತೆ ಮತ್ತು ನೀರಾವರಿ ಸಚಿವರ ಜೊತೆ ಚರ್ಚಿಸಲಾಗಿದೆ ಮುಂದಿನ ದಿನಗಳಲ್ಲಿ ಈ ಭಾಗದ ರೈತರಿಗೆ ಇದರ ಸದ್ಬಳಕೆ ಮಾಡಿಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಮೂಲಕ ಯೋಜನೆ ಸಿದ್ಧಪಡಿಸಲಾಗಿದೆ ಎಂದರು .

ನಾಲೆಗಳ ದುರಸ್ತಿಗೆ ಕ್ರಮ: ಎಡದಂಡೆ ಬಲದಂಡೆ ನಾಲೆಗಳ ಒಳಭಾಗದಲ್ಲಿ ಮತ್ತು ಮೇಲ್ಭಾಗದಲ್ಲಿ ಗಿಡ ಗಂಟೆಗಳು ಬೆಳೆದು ನಿಂತಿದ್ದು ಈ ಹಿಂದೆ ಹಲವಾರು ವರ್ಷಗಳಿಂದ ನಾಲೆಯಲ್ಲಿರುವ ರಾಡಿಗಳನ್ನು ಸ್ವಚ್ಛಗೊಳಿಸದೆ ಹಾಗೆ ಇರುವುದರಿಂದ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಈ ಬಾರಿಯಾದರೂ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿ ಪ್ರವೀಣ್ , ಮುಖಂಡರುಗಳಾದ ಚಿನ್ನವೆಂಕಟ,ಬಾಬು,ಮುಸ್ತಪ್ಪ,ಡಿ.ಆರ್ ಮಾದೇಶ್,ವಿಜಯ್ ಕುಮಾರ್,,ಅತಿಕ್,ಶಿವರುದ್ರ, ಎಸ್.ಆರ್ ಮಹಾದೇವ್,ಸುರೇಶ್,ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು..

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.