Kottoor Patna Panchayat Chairman Vice-Chairman A, The, 31 fixed
ಕೊಟ್ಟೂರು: ಮಾನ್ಯ ಜಿಲ್ಲಾಧಿಕಾರಿಗಳು, ವಿಜಯನಗರ ಜಿಲ್ಲೆ, ಹೊಸಪೇಟೆ ಇವರು ಕೊಟ್ಟೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಚುನಾವಣಾಧಿಕಾರಿಯಾಗಿ ನೇಮಿಸಿ ಚುನಾವಣೆ ನಡೆಸಲು ಆದೇಶಿಸಿರುವ ಮೇರೆಗೆ ಕೊಟ್ಟೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆಯನ್ನು ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆಸಲು ದಿನಾಂಕ: 31.08.2024 ರ ಶನಿವಾರದಂದು ದಿನಾಂಕವನ್ನು ನಿಗಧಿಪಡಿಸಲಾಗಿರುತ್ತದೆ. ಈ ಸಂಬಂಧ ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರಿಗೆ ಚುನಾವಣೆ ನೋಟೀಸ್ ಗಳನ್ನು ನಿಯಮಾನುಸಾರ ಜಾರಿ ಮಾಡಲು ಕ್ರಮವಹಿಸಲಾಗಿದೆ ಎಂಬ ಮಾಹಿತಿಯನ್ನು ಪತ್ರಿಕಾ ಪ್ರಕಟಣೆಗಾಗಿ ಹೊರಡಿಸಿದೆ. ಎಂದುತಹಶೀಲ್ದಾರ್,ಕೊಟ್ಟೂರು ಅವರು ತಿಳಿಸಿದ್ದಾರೆ.