Chendayaya Jayanthotsava is a grand yarn festival in Kukanur town

ಕೊಪ್ಪಳ : ಕುಕನೂರು ಪಟ್ಟಣದಲ್ಲಿ ಕಾಯಕಯೋಗಿ ಶಿವಶರಣ ಶ್ರೀ ನೂಲಿಚೆಂದಯ್ಯ ಕೊರಮ ಸಮಾಜದ ವತಿಯಿಂದ 19ರ ಸೋಮವಾರದಂದು ಬೆಳಗ್ಗೆ 8 ಗಂಟೆಯಿಂದ ವಿಜೃಂಭಣೆಯಿಂದ ನೆರವೇರಿಸಲಾಗುವುದು.
ಅಂದು ಬೆಳಗ್ಗೆ 8 ಗಂಟೆಗೆ ಗಾಂಧಿ ನಗರದ ನೂಲಿಚೆಂದಯ್ಯನವರ ಗುಡಿಯಲ್ಲಿರುವ ನೂಲಿಚೆಂದಯ್ಯನವರ ಮೂರ್ತಿಗೆ ವಿಷೇಶ ಪೂಜಾ ವಿಧಿ, ವಿಧಾನಗಳು ಜರುಗುವವು.
ನಂತರ ಬೆಳಗ್ಗೆ 10ಗಂಟೆಯಿಂದ ಹಲಗೂರು ಮತ್ತು ಜಮಖಂಡಿ ಬ್ಯಾಂಡ್ ಕಂಪನಿ ಮತ್ತು ಆರ್ಕೇಸ್ಟ್ರಾ ಕಾರ್ಯಕ್ರಮದ ಮೂಲಕ ನೂಲಿಚೆಂದಯ್ಯನವರ ಭಾವಚಿತ್ರ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿ ಮರಳಿ ದೇವಸ್ಥಾನಕ್ಕೆ ಆಗಮಿಸುವುದು.
ನಂತರ ಮಧ್ಯಾಹ್ನ 1ಗಂಟೆಗೆ ಅನ್ನ ಸಂತರ್ಪಣಾ ಕಾರ್ಯಕ್ರಮಗಳು ಜರಗುವವು ಆದ್ದರಿಂದ ಸಕಲ ಸಧ್ಬಕ್ತರು ಅಭಿಮಾನಿಗಳು ಆಗಮಿಸಿ ತನು, ಮನ, ಧನದಿಂದ ಸೇವೆ ಸಲ್ಲಿಸಲು ಸಮಾಜದವರು ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
