Clean the grass where thorn plants are growing on the side of the road
ಕಾನ ಹೊಸಹಳ್ಳಿ :- ಸಮೀಪದ ಗುಂಡು ಮುಣು ಗು ಗ್ರಾಮ ಪಂಚಾಯಿತಿಗೆ ಸೇರಿದ ಸಿದ್ದಾಪುರ ಗ್ರಾಮದ ದಲಿತ ಕಾಲೋನಿಯ ಪಕ್ಕದ ಸಾರ್ವಜನಿಕರ ರಸ್ತೆ ಸಿದ್ದಾಪುರ ಗ್ರಾಮದಿಂದ ಹೊಸಹಳ್ಳಿ ಕಡೆಗೆ ಹೋಗುವ ಸಾರ್ವಜನಿಕರ ರಸ್ತೆಯ ಪಕ್ಕದಲ್ಲಿ ಮುಳ್ಳಿನ ಗಿಡಗಳು ದಟ್ಟವಾಗಿ ಹುಲ್ಲು ಬೆಳೆದು ನಿಂತಿರುವುದರಿಂದ ರಸ್ತೆಯಲ್ಲಿ ಓಡಾಡುವವರಿಗೆ ವಿಷ ಜಂತುಗಳ ಭಯ ಎದುರಾಗಿದೆ ಇಲ್ಲಿ ವಿಷ ಜಂತುಗಳ ತಾಣವಾಗಿದೆ ದಿನದ 24 ಗಂಟೆಗಳ ಕಾಲ ಸಾರ್ವಜನಿಕರು ಮಕ್ಕಳು ಓಡಾಡುವ ಈ ರಸ್ತೆ ಪಕ್ಕದಲ್ಲಿ ಕಸದ ರಾಶಿಗಳಂತೂ ನೋಡುವಂತಿಲ್ಲ ಕೆಲವರು ದಿನನಿತ್ಯ ಕಸವನ್ನು ರಸ್ತೆಯ ಪಕ್ಕದಲ್ಲಿ ಸುರಿಯುತ್ತಿದ್ದಾರೆ ಇದರಿಂದ ವಿಪರೀತ ಸೊಳ್ಳೆಗಳು ಉತ್ಪತ್ತಿಯಾಗಿ ಜನರು ಸಾಂಕ್ರಾಮಿಕ ರೋಗಗಳ ಹರಡುವ ಭೀತಿಯಲ್ಲಿದ್ದಾರೆ ರಸ್ತೆಯ ಪಕ್ಕದಲ್ಲಿ ಕೆಲವು ಕುಟುಂಬದವರು ವಾಸ ಮಾಡುತ್ತಿದ್ದಾರೆ. ಇಲ್ಲಿನ ವ್ಯವಸ್ಥೆ ಸರಿಪಡಿಸುವಂತೆ ಸ್ವಚ್ಛತೆ ಮಾಡಿಸುವಂತೆ ಅನೇಕ ಬಾರಿ ಸಂಬಂಧ ಪಟ್ಟ ಗ್ರಾಮ ಪಂಚಾಯತಿಯವರಿಗೆ ತಿಳಿಸಲಾಗಿದೆ ಆದರೂ ಏನು ಪ್ರಯೋಜನವಾಗಿಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳೀಯ ಸದಸ್ಯರು ಈ ಬಗ್ಗೆ ಗಮನ ಹರಿಸಬೇಕಾಗಿದೆ ಈ ರಸ್ತೆ ಪಕ್ಕದಲ್ಲಿ ಬೆಳೆದ ನಿಂತಿರುವ ಮುಳ್ಳಿನ ಗಿಡಗಳು ಹುಲ್ಲು ಹಾಗೂ ಕಸದ ರಾಶಿಗಳಿಂದ ಜನರು ಬೇಸತ್ತು ಹೋಗಿದ್ದಾರೆ ಜನರ ಆರೋಗ್ಯ ಮತ್ತು ಹಿತ ದೃಷ್ಟಿಯಿಂದ ಈಗಲಾದರೂ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿ ಸ್ವಚ್ಛತೆ ಮಾಡಿಸಿ ಇಲ್ಲಿ ವಾಸ ಮಾಡುತ್ತಿರುವ ಹಾಗೂ ಈ ರಸ್ತೆಯಲ್ಲಿ ಪ್ರಯಾಣಿಸುತ್ತಿರುವ ಸಾರ್ವಜನಿಕರಿ ಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ