Power outage in Gangavati city and surrounding villages! JESCOM instructs not to do any electrical work.

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಗಂಗಾವತಿ : ಜನೇವರಿ 02ರ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಕೈಗೊಳ್ಳುತ್ತಿರುವ ಪ್ರಯುಕ್ತ 110/11ಕೆವಿ ವಿದ್ಯುತ್ ವಿತರಣಾ ಉಪ-ಕೇಂದ್ರ ಗಂಗಾವತಿಯಿಂದ ಸರಬರಾಜಾಗುವ ಎಲ್ಲಾ ಫೀಡರ್ ನ ವಿದ್ಯುತ್‌ನಲ್ಲಿ ವ್ಯತ್ಯಯವಾಗುವುದರಿಂದ ಗಂಗಾವತಿ ನಗರ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಆದ್ದರಿಂದ ಸಾರ್ವಜನಿಕರು ಮತ್ತು ರೈತರು ಸಹಕರಿಸಬೇಕೆಂದು ಹಾಗೂ ಈ ದಿನದಂದು ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕಾರ್ಯ ಪೂರ್ವಾನುಮತಿ ಇಲ್ಲದೆ ಮಾಡಬಾರದು ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಜೆಸ್ಕಾಂ ಕಂಪನಿ ಜವಬ್ದಾರಿಯಾಗಿರುವುದಿಲ್ಲಾ ಎಂದು ಈ ಮೂಲಕ ತಿಳಿಸಲಾಗಿದೆ.