Follow the ideals of Nulia Chandaiya: Additional District Collector Shivappa Yallappa Bhajantri
ಜಿಲ್ಲಾಡಳಿತದ ವತಿಯಿಂದ ಶ್ರೀನುಲಿಯ ಚಂದಯ್ಯ ಜಯಂತಿ ಆಚರಣೆ
ರಾಯಚೂರು,ಆ.19,:- 12ನೇ ಶತಮಾನದಲ್ಲಿ ನಡೆದ ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿಯನ್ನು ಮಾಡಿದವರಲ್ಲಿ ನುಲಿಯ ಚಂದಯ್ಯ ಸಹ ಒಬ್ಬರು ಇದುವರಿಗೆ ದೊರೆತ ವಚನಗಳಲ್ಲಿ 48ವಚನಗಳನ್ನು ನುಲಿಯ ಚಂದಯ್ಯನವು ಎಂದು ಗುರುತಿಸಲಾಗಿದೆ. ಅವರ ವಚನಗಳನ್ನು ಜೀವನದ ತಿರುಳುಗಳನ್ನು ಕಾಯಕ ನಿಷ್ಠೆಯನ್ನು ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿಗಳಾದ ಶಿವಪ್ಪ ಯಲ್ಲಪ್ಪ ಭಜಂತ್ರಿ ಅವರು ಹೇಳಿದರು.
ಅವರು ಆ.19ರ ಸೋಮವಾರ ದಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ನುಲಿಯ ಚಂದಯ್ಯ ಕಾಯಕಯೋಗಿ ಎಂದು ಪ್ರಸಿದ್ಧಿ ಪಡೆದವರು. ನುಲಿಯ ಚಂದಯ್ಯ ನುಲನ್ನು ಕೊಯ್ದು ಹಗ್ಗ ಎಣೆಯುವುದು ಇವರ ಕೆಲಸವಾಗಿತ್ತೆಂದರು.
ಈ ವೇಳೆ ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ ಅವರು ಮಾತನಾಡಿ, ಸರಳ ಸಜ್ಜನಿಕೆಯ ಶ್ರೇಷ್ಠ ವಚನಕಾರ ನುಲಿಯ ಚಂದಯ್ಯ ಇವರು ಅನೇಕ ಪವಡಗಳು ಸಹ ಮಾಡಿದ್ದಾರೆ. ಕೆಳ ಜಾತಿಯವರು ಎಂಬ ಕಾರಣಕ್ಕಾಗಿ ನೀರುಕೊಡದ ಕಾರಣ ಪ್ರತ್ಯೇಕ ಬಾವಿಯನ್ನು ಸಹ ತೊಡಿಕೊಂಡರು. ಅವರು ರಚಿಸಿದ ವಚನಗಳನ್ನು ವಿಮರ್ಶಿಸಿ ನೋಡಿದಾಗ ಪ್ರಸ್ತುತ ದಿನಗಳಿಗೆ ಅನ್ವಯವಾಗುವ ಅನೇಕ ಅಂಶಗಳಿವೆ. ಮುಂಬರುವ ಪೀಳಿಗೆಗಳಿಗೆ ಅವರ ತತ್ವಗಳು ಆದರ್ಶಪ್ರಾಯವಾಗಿದ್ದು, ಅವುಗಳನ್ನು ನಾವು ಪಾಲಿಸಬೇಕಾಗಿದೆ. ಯಾವುದೇ ಒಂದು ಸಮಾಜವು ಮುಂದುವರೆಯಬೇಕು. ಎಂದರೆ ಶಿಕ್ಷಣದಿಂದ ಮಾತ್ರ ಆದ ಕಾರಣ ಶಿಕ್ಷಿತರಾಗಿ ಮುಂದುವರೆಯಿರಿ ಎಂದರು.
ಕಾರ್ಯಕ್ರಮದ ಉಪನ್ಯಾಸಕರಾದ ಮರಿಯಪ್ಪ ತುರಡಗಿ ಅವರು ನುಲಿಯ ಚಂದಯ್ಯನವರು ಆರಂಬಿಕ ಜೀವನದ ಕುರಿತು ಮಾತನಾಡಿ, ಎಲ್ಲಾ ಶರಣರು ಕಾಯಕದ ಹೆಸರಿನ ಜೊತೆ ತಮ್ಮ ಹೆಸರನ್ನು ಸೇರಿಸಿದ್ದಾರೆ. ಮಡಿವಾಳ ಮಾಚಯ್ಯ, ಸಮಗಾರ ಹರಳಯ್ಯ, ನುಲಿಯ ಚಂದಯ್ಯ ಹೀಗೆ ತಾವು ಮಾಡುವ ಕಾಯಕದ ಹೆಸರಿನ ಮುಂದೆ ತಮ್ಮ ಹೆಸರು ಸೇರಿಸುವ ಮೂಲಕ ಕಾಯಕಕ್ಕೆ ಅಷ್ಟೊಂದು ಒತ್ತನ್ನು ನೀಡಿದರು. ಹಾಗೂ ದಾಸೋಹಕ್ಕೆ ಹೆಸರಾದವರು ಅವರು ನುಲಿಯ ಚಂದಯ್ಯನ ಕಾಯಕ ನಿಷ್ಟೆಯನ್ನು ಲಿಂಗವೇ ಪರೀಕ್ಷೆಯನ್ನು ಮಾಡಿದ ಘಟನೆ ಹಾಗೂ ಶರಣರಿಗೆ ಆಸೆಯೆಂಬುವುದು ವಿನಾಶಕ್ಕೆ ಕಾರಣ, ಕಾಯಕ ನಿರತನಾದರೆ ಗುರು ದರ್ಶನವು ಮರೆಯಬೇಕು. ಲಿಂಗಪೂಜೆಯನು ಮರೆಯಬೇಕು ಎಂಬ ಅನೇಕ ವಚನಗಳನ್ನು ಪ್ರಸ್ತುತ ಪಡಿಸಿ ಅವುಗಳ ವಿವರಣೆಯನ್ನು ನೀಡಿದರು.
ಇದಕ್ಕೂ ಮುಂಚೆ ನಗರದ ಟಿಪ್ಪು ಸುಲ್ತಾನ ಸರ್ಕಲ್ ನಿಂದ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮAದಿರದವರೆಗೆ ಮೆರವಣಿಗೆ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಹಾಗೂ ನಗರಸಭೆಯ ಸದಸ್ಯರು ಭಾಗಿಯಾದರು.
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಸಿಬ್ಬಂದಿ ಇಬ್ರಹಿಂ, ಅಲೆಮಾರಿ ಅನುಷ್ಠಾನ ಸಮಿತಿಯ ಸದಸ್ಯರಾದ ಪರಶುರಾಮ್, ನರಸಿಂಹಲು, ಹಿರಿಯ ಮುಖಂಡರರಾದ ನರಸಪ್ಪ ಮಾಣಿಕ್, ಹುಲಿಗಪ್ಪ, ಗುದುಪಾಸ ನರಸಪ್ಪ, ಮಾಲಾ ಭಜಂತ್ರಿ ಸೇರಿದಂತೆ ಇತರರು ಇದ್ದರು. ನಿರೂಪಣೆಯನ್ನು ಮುರಳಿ ಕುಲಕರ್ಣಿ ಮಾಡಿದರು.