Breaking News

ಗ್ರಾಮೀಣ ಪತ್ರಕರ್ತರು ಆಳವಾದ ಅಧ್ಯಯನದ ಜೊತೆಯಲ್ಲಿ,ಕ್ರಿಯಾಶೀಲರಾಗಿರಬೇಕು:ಡಾಕ್ಟರ್ ದತ್ತೇಶ್ ಕುಮಾರ್ .

Rural journalists should be proactive along with deep study: Dr Duttesh Kumar

ಜಾಹೀರಾತು


ವರದಿ : ಬಂಗಾರಪ್ಪ ಸಿ.
ಹನೂರು : ಗ್ರಾಮೀಣ ಭಾಗದಿಂದ ಬಂದಂತಹ ಪತ್ರಕರ್ತರು ಸರ್ಕಾರದಿಂದ ಯಾವುದೇ ಸವಲತ್ತುಗಳನ್ನು ಪಡೆಯದೆ ತಮ್ಮ ಸ್ವಂತ ಶ್ರಮದಲ್ಲಿ ಸಾಮಾಜಿಕ ಕಾರ್ಯಮಾಡುತ್ತಿರುವುದು ಬಹಳ ಸಂತೋಷದ ಸಂಗತಿ ಆದರೆ ಅವರ ಕುಟುಂಬ ನಿರ್ವಹಣೆ ಕೆಲವರಲ್ಲಿ ಸಾಕಷ್ಟು ಚಿಂತಜನಕವಾಗಿದೆ ತಮಗೆ ನೋವಿದ್ದರು ಯಾರಿಗೂ ತೋರ್ಪಡಿಸದೆ ಸಮಾಜದ ಸುದ್ದಿ ಮಾಡುವುದು ನಮಗೆ ಹೆಮ್ಮೇಯ ವಿಷಯವಾಗಿದೆ ಎಂದು ಮಾನಸ ಕಾಲೇಜಿನ ಕಾರ್ಯದರ್ಶಿಗಳಾದ ಡಾಕ್ಟರ್ ದತ್ತೇಶ್ ಕುಮಾರ್ ತಿಳಿಸಿದರು.

ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಾಲಯದ ಕಲ್ಯಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಪತ್ರಕರ್ತರ ದಿನಾಚರಣೆಯಲ್ಲಿ ಪತ್ರಕರ್ತರನ್ನೂದ್ದೇಶಿಸಿ ಮಾತನಾಡಿದ ಮಾಜಿ ಶಾಸಕಿ ಪರಿಮಳ ನಾಗಪ್ಪ ನವರು ನಮಲ್ಲಿ ಹೆಚ್ಚು ಪತ್ರಕರ್ತರು ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆಯದೆ ನೀವು ಬರೆಯುವ ಪ್ರತಿಯೋಂದು ಸುದ್ದಿಯು ಸಮಾಹಕ್ಕೆ ಮಾದರಿಯಾಗಬೇಕು, ಯುವಕರು ಹೆಚ್ಚು ಪತ್ರಕರ್ತರಾಗಿದ್ದಿರ ಮುಂದಿನ ದಿನಗಳಲ್ಲಿ ಎಲ್ಲಾರಿಗೂ ಶುಭವಾಗಲಿ ಎಂದರು .

ಉದ್ಯಮಿ ರಂಗಸ್ವಾಮಿ ಮಾತನಾಡಿ
ನಿಮ್ಮ ಸಂಘದಿಂದ ಶಾಲಾ ಮಕ್ಕಳಿಗೆ ದಾನಿಗಳಿಂದ ಸಹಾಯ ಪಡೆದು ನೋಟ್ ಬುಕ್ ಗಳನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯವಾದುದ್ದು , ನಿಮ್ಮ ಕಾರ್ಯ ನಿರಂತರವಾಗಿ ನೆಡಯಲಿ ಪತ್ರಕರ್ತರಾದವರು ತಮ್ಮ ಬರವಣಿಗೆ ಅನ್ಯಾಯದ ವಿರುದ್ದ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜಿಡ್ಡುತನದ ವಿರುದ್ದವಾಗಿರಬೇಕು ,ಒಬ್ಬ ಪತ್ರಕರ್ತರು ಸತತವಾಗಿ ಹೋರಾಟ ಮಾಡಿದರೆ ಸರ್ಕಾರವೇ ಪತನವಾಗುತ್ತದೆ ಇನ್ನು ಸಮಸ್ಯೆಗಳು ಯಾವ ಲೆಕ್ಕ ಪ್ರಾಮಾಣಿಕ ಪತ್ರಕರ್ತರ ಜೊತೆಯಲ್ಲಿ ಸದಾಕಾಲವೂ ನಾವಿರುತ್ತೆವೆ ಎಂದು ಪತ್ರಕರ್ತರಿಗೆ ಅಭಯ ನೀಡಿದರು .
ಕಾರ್ಯಕ್ರಮವನ್ನೂದ್ದೇಶಿಸಿ ಮಾತನಾಡಿದ ಕರ್ನಾಟಕ ಪತ್ರಕರ್ತರ ಸಂಘದ ಹನೂರು ತಾಲ್ಲೂಕು ಘಟಕ ದ ಅಧ್ಯಕ್ಷರಾದ ಬಂಗಾರಪ್ಪ ಸಿ ರವರು ನಮ್ಮ ಸಂಘವನ್ನು ಆಕಸ್ಮಿಕವಾಗಿ ಪ್ರಾರಂಭಸಿದ್ದೆವು . ಪ್ರಾರಂಭದಿಂದಲೂ ನಮಗೆ ಒಂದಿಲ್ಲೊಂದು ರೀತಿಯಲ್ಲಿ ಹುರಿದುಂಬಿಸಿ ಪ್ರೋತ್ಸಾಹ ನೀಡುತ್ತಿರುವ ಶಾಸಕರಾದಿಯಾಗಿ ಎಲ್ಲಾರಿಗೂ ನಮ್ಮ ಸಂಘದವರು ಅಬಾರಿಯಾಗಿದ್ದೆವೆ ,ಸಮಾಜದಲ್ಲಿ ಒಳ್ಳೆಯ ಕಾರ್ಯದ ಹಿಂದೆ ಕೆಟ್ಟದಿರುತ್ತದೆ ಹಾಗೆಯೆ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿಗಳು ಸಮಾಜ ಒಳಿತಿಗಾಗಿ ನಿಂತಿರುವಾಗ ಅವರ ಕಾರ್ಯವನ್ನು ಗುರುತಿಸುವ ಕಾರ್ಯವಾಗಬೇಕು . ನಮ್ಮಲ್ಲಿರುವ ಪತ್ರಕರ್ತರು ವೃತ್ತಿಯಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸ್ವಂತ ಕೆಲಸ ಮಾಡುತ್ತಿದ್ದು ಪತ್ರಿಕ ವೃತ್ತಿಯನ್ನು ಪ್ರವೃತ್ತಿಯನ್ನಾಗಿ ಮಾಡುತ್ತಿದ್ದಾರೆ ನಮ್ಮ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಗಣ್ಯರಿಗೂ ನಮ್ಮ ಸಂಘದ ಪರವಾಗಿ ಧನ್ಯವಾದಗಳು ಎಂದು ತಿಳಿಸಿದರು .

ಮುಖ್ಯ ಅತಿಥಿಗಳಿಂದ
ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಗಳನ್ನು ಧಾನಿಗಳ ಸಹಾಯದಿಂದ ನೀಡಲಾಯಿತು

ಕಾರ್ಯಕ್ರಮದಲ್ಲಿ ಸಾಧಕರುಗಳಾದ ಪ್ರಜಾ ಪಿತಾ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾ ರಾಜಯೋಗಿನಿ ಬ್ರಹ್ಮಕುಮಾರಿ ಬಿಂದು ಅಕ್ಕನವರು , ಮುಖ್ಯ ಮಂತ್ರಿ ಪ್ರಶಸ್ತಿ ಪುರಸ್ಕೃತರು ಗಳಾದ
ಉಪ ವಲಯ ಅರಣ್ಯಾಧಿಕಾರಿ ಇಲಾಖೆ ಕೌದಳ್ಳಿ ಹಾಗೂ ಹನೂರಿನ ಶ್ರೀ ಅನಂತರಾಮು , ಜಿ .ಮತ್ತು ಪ್ರಸಾದ್ ಕೆ .ರವರು ,ಹಿರಿಯ ಪೌರ ಕಾರ್ಮಿಕರಾದ ಶ್ರೀಮತಿ ರಾಮಿ , ಯುವ ರೈತ ಮುಖಂಡರಾದ ಗಂಗನದೊಡ್ಡಿ ಲೋಕೇಶ್ ರವರಿಗೆ ಹಾಗೂ 2023-2024ನೇ ಸಾಲಿನ sslc ಯಲ್ಲಿ ತಾಲ್ಲೂಕು ಮಟ್ಟದಲ್ಲಿ ಗರಿಷ್ಟ ಅಂಕ ಗಳಿಸಿದ ಕ್ರಿಸ್ತರಾಜ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿನಿ ಕು ಸೃಜನ ಜೆ. ಸ್ವಾಮಿ. ಯವರಿಗೆ ಉದ್ಯಮಿ ಜಿ ನಾಗೇಶ್ ಪ್ರೋತ್ಸಾಹ ಧನ ನೀಡುವ ಮೂಲಕ ಪ್ರೋತ್ಸಾಹ ನೀಡಿದರು‌. ಕಾರ್ಯಕ್ರಮದಲ್ಲಿ ಸಾಧಕರಿಗೆ ಸಂಘದ ವತಿಯಿಂದ ಸನ್ಮಾನಗಳನ್ನು ಮಾಡಲಾಯಿತು .
ಇದೇ ಸಂದರ್ಭದಲ್ಲಿ ಶ್ರೀ ಸಾಲೂರು ಮಠದ ಕಿರಿಯ ಶ್ರೀ ಗಳಾದ ಆಲಂಬಾಡಿ ಮಠದ ಪೊನ್ನಾಚಿ ವೀರಪ್ಪ ಸ್ವಾಮೀಜಿಗಳು ಆಶೀರ್ವಚನ ನೀಡಿದರು . ಇದೇ ಸಮಯದಲ್ಲಿ ಜಿಲ್ಲಾ ಒಕ್ಕಲಿಗ ಅಧ್ಯಕ್ಷರಾದ ನಾಗೇಂದ್ರ ರೈತ ಮುಖಂಡರುಗಳಾದ ಅಮ್ಜಾದ್ ಖಾನ್ ,ಚಂಗಡಿ ಕರಿಯಪ್ಪ ,ಎಂ ಹರೀಶ್ ,ಡಾಕ್ಟರ್ ಪ್ರಕಾಶ್ ,
ಪಟ್ಟಣ ಪಂಚಾಯತಿ ಸದಸ್ಯರುಗಳಾದ
ಆನಂದ್ ಕುಮಾರ್ ,ಹರೀಶ್ ಕುಮಾರ್ ,ಪವಿತ್ರ ,ಉದ್ಯಮಿಗಳಾದ ,ಜಿ ನಾಗೇಶ್ , ಸೇರಿದಂತೆ ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಸತೀಶ್ ಕುಮಾರ್ ,ಖಜಾಂಚಿ ಚೇತನ್ ಕುಮಾರ್ ,ಕಾರ್ಯದರ್ಶಿ ಬಸವರಾಜು ಕಾಂಚಳ್ಳಿ .ಸಂಘಟನೆ ಕಾರ್ಯದರ್ಶಿ ಶಾರುಖ್ ,ನಿರ್ದೇಶಕರು ಹಾಗೂ ಸದಸ್ಯರುಗಳಾದ ನಾಗೇಂದ್ರ ಎನ್ . ಪ್ರಸನ್ನ ಕುಮಾರ್ ,ಅಜಿತ್ ,ರವಿಗೌಡ,ಕಾರ್ತಿಕ್ ,ವಿಲಿಯಂ, ಇನ್ನಿತರರು ಹಾಜರಿದ್ದರು .

About Mallikarjun

Check Also

ದಸರಾ ಮಹೋತ್ಸವದ ಅಂಗವಾಗಿ ಕಲ್ಮಠದಲ್ಲಿ ಸರ್ವಧರ್ಮ ಸಮ್ಮೇಳನ

Interfaith conference in Kalmath as part of Dussehra celebrations ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.