Breaking News

ಸೋಮವಾರ ಕೊಳ್ಳದ ಅಮರೇಶ್ವರ ಮಹಾ ರಥೋತ್ಸವ.

Amareshwar Maha Rathotsava, which is not sold on Monday.


ಕುಷ್ಟಗಿ/ತಾವರಗೇರಾ: ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ ಜುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಕ್ಷೇತ್ರ ಅಡವಿಭಾವಿ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಕೊಳ್ಳದ ಅಮರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ದಿ.ಮಾ.೨೫ ರಂದು ಮಹಾರಥೋತ್ಸವ ಜರುಗಲಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರಗುಂಟ ಅಮರೇಶ್ವರ ದೇವಸ್ಥಾನದ ಧಾರ್ಮಿಕ ವಿಧಿವಿಧಾನ ಪ್ರಕ್ರಿಯೆಯಂತೆ ಪ್ರತಿ ವರ್ಷದಂತೆ ಈ ವರ್ಷವು ಕೂಡ ದಿ.೨೪ ರಂದು “ಉಚ್ಚಯೋತ್ಸವ” ದಿ.೨೫ ರಂದು ಸೋಮವಾರ ಬೆಳಿಗ್ಗೆ ಅಮರೇಶ್ವರ ಲಿಂಗಕ್ಕೆ ಮಹಾರುದ್ರಾಭಿಷಕ ನಂತರ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಡೊಳ್ಳು ಕುಣಿತ ಬಾಜಾಭಜಂತ್ರಿಯೊಂದಿಗೆ ನಂದಿಧ್ವಜ ಮತ್ತು ಅಮರೇಶ್ವರನ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆ, ಭಕ್ತರಿಂದ ದೀಡ ನಮಸ್ಕಾರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಮಧ್ಯಾಹ್ನ ಗಣಂಗಳ ಪಂಕ್ತಿಯೊಂದಿಗೆ ಅನ್ನ ಸಂತರ್ಪಣೆ ನಡೆಸಲಾಗುವುದು. ತದನಂತರ ಕುಷ್ಟಗಿ ಮದ್ದಾನಿ ಶ್ರೀಗಳು ಹಾಗೂ ಅಂಕಲಿಮಠದ ಶ್ರೀ ಗಳು ಆಶಿರ್ವಚನ ನೀಡುವ ಮೂಲಕ ಮಹಾರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡುವರು ಸಾಯಂಕಾಲ ೬ಘಂಟೆಗೆ ಮಹಾರಥೋತ್ಸವ ಜರುಗಲಿದೆ.
ದಿ.೨೬ ರಂದು ಕಡಬಿನ ಕಾಳಗ ಧಾರ್ಮಿಕ ವಿಧಿವಿಧಾನ ಪ್ರಕ್ರಿಯೆ ನಡೆಯುತ್ತಿದೆ. ಅಂದು ಸಂಜೆ ಗ್ರಾಮದ ಎಲ್ಲಾ ದೇವಾನುದೇವತೆಗಳ ದೇವಸ್ಥಾನಗಳಿಗೆ ಕಾಯಿ ಕರ್ಪೂರ ಮಾಡುವ ಮೂಲಕ ಪೂಜೆ ಸಲ್ಲಿಸಲಾಗುತ್ತದೆ. ಜಾತ್ರಾ ಮಹೋತ್ಸವದಲ್ಲಿ ಕುಷ್ಟಗಿ ಮತ ಕ್ಷೇತ್ರದ ಹಾಗೂ ಇತರೆ ಕ್ಷೇತ್ರಗಳ ಗಣ್ಯರು ಭಕ್ತಾದಿಗಳು ಭಾಗವಹಿಸುವರು.
ಪೌರಾಣಿಕ ಹಿನ್ನೆಲೆ: ರಾಯಚೂರು ಜಿಲ್ಲೆಯ ಗುರಗುಂಟ ಅಮರೇಶ್ವರ ದೇವಸ್ಥಾನದ ಇತಿಹಾಸದಂತೆ ಸಾಮ್ಯತೆ ಹೊಂದಿದೆ ಆದರೆ ಅಡವಿಭಾವಿ ಗ್ರಾಮದ ಹಾಗಲ್ದಾಳ ಗ್ರಾಮಕ್ಕೆ ತೆರಳುವ ಹಳೆ ರಸ್ತೆಯಲ್ಲಿ ಬರುವ ಸಣ್ಣ ಹನುಮಂತ ಸಿಂಗ್ರಿ ಹಾಗೂ ಹನಮನಗೌಡ ಮಾಲಿಪಾಟೀಲ ರವರ ಜಮೀನು ಮಧ್ಯದ ಹಳ್ಳದಲ್ಲಿ ಉದ್ಭವ ಲಿಂಗ ಇದೆ. ಲಿಂಗ ಉದ್ಬವಕ್ಕಿಂತ ಮುಂಚೆ ಈ ಸ್ಥಳದಲ್ಲಿ ಗಿಡಗಂಟಿಗಳು ದೇಬಳ್ಳಿ ಸಾಲಿನಿಂದ ಕೂಡಿತ್ತಲ್ಲದೆ ಜನ ಸಂಚಾರಕ್ಕೆ ಹೆದರುತ್ತಿದ್ದರು ಎಂಬ ಐತಿಹ ಹೊಂದಿದೆ. ಇಂದು ಅಮರೇಶ್ವರ ಮಹಾ ದೇವಸ್ಥಾನ, ಆದಯ್ಯ ಮಾಳಗುಂಡಮ್ಮ ದೇವಸ್ಥಾನಗಳು ವಿಜ್ರಂಭಣೆಯಿಂದ ಕಂಗೊಳಿಸುತ್ತಿವೆ.

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.