Vangeri Toll: Agni Avaghada
ಕುಷ್ಟಗಿ ತಾಲೂಕಿನ ವಣಗೇರಿ ಟೋಲ್ ಪ್ಲಾಜಾದಲ್ಲಿ ದಿನಾಂಯಕ 12 ರ ಬೆಳೆಗ್ಗೆ 10:02 ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿ ಉರಿಯತೊಡಗಿದೆ ನಂತರ ಟೋಲ್ ಸಿಬ್ಬಂದಿಯವರು ಅಗ್ನಿಶಾಮಕ ಕೇಂದ್ರಕ್ಕೆ ಕರೆ ಮಾಡಿದ್ದಾರೆ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಅರಿಸಲಾಗಿದೆ. ಯಾವುದೇ ಪ್ರಾಣಹಾನಿಗಳು ಸಂಭವಿಸಿಲ್ಲ. ಈ ಬೆಂಕಿ ಅವಘಡದಿಂದ ಟೋಲ್ ಪಾಜಾ ದಲ್ಲಿನ 10 ಲೋಡ್ ಸೆಲ್ಸ್, 01 AC ಮತ್ತು ಇನ್ನಿತರ ಉಪಕರಣಗಳು ಸಂಪೂರ್ಣ ಸುಟ್ಟು ಹೋಗಿದೆ. ಇದರಿಂದ ಟೋಲ್ ಕಂಪೆನಿಯವರಿಗೆ ತುಂಬಾ ಹಾನಿಯಾಗಿದೆ ಎಂದು ಟೋಲ್ ವ್ಯವಸ್ಥಾಪಕರಾದ ಅವಿನಾಶ್ ಶುಕ್ಲಾ ತಿಳಿಸಿದರು.