Harsh condemnation for mutilation of cow udders; Bangalore environmentalists Silent protest by lighting candles from the stage.

ಬೆಂಗಳೂರು; ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿರುವ ದುಷ್ಕರ್ಮಿಗಳ ನಡೆ ವಿರೋಧಿಸಿ ನಮ್ಮ ಬೆಂಗಳೂರು ಪರಿಸರವಾದಿಗಳ ವೇದಿಕೆ ವತಿಯಿಂದ ವಿಲ್ಸನ್ ಗಾರ್ಡನ್, ಹೊಂಬೇಗೌಡ ನಗರದ ಗಾಂಧಿ ಪ್ರತಿಮೆ ಮುಂಭಾದಲ್ಲಿ ಮೇಣಬತ್ತಿ ಹಚ್ಚಿ ಮೌನ ಪ್ರತಿಭಟನೆ ನಡೆಸಲಾಯಿತು.
ವೇದಿಕೆಯ ಮುಖ್ಯಸ್ಥ ವಕೀಲ ಉಮೇಶ್ ಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಹಸುಗಳ ಮೊಲಗಳನ್ನು ಕತ್ತರಿಸುವ ವಿಕೃತಿ ಮೆರೆಯಲಾಗಿದೆ ಇದು ಅತ್ಯಂತ ಖಂಡನೀಯ, ಇಂತಹ ಕೃತ್ಯವನ್ನು ಯಾರೇ ಮಾಡಿದರೂ ತಪ್ಪು,ಬೇರೆ ಬೇರೆಊರುಗಳಿಂದ,ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ವಾಸವಾಗಿರುವ ನಿವಾಸಿಗಳು ಬೆಂಗಳೂರು ಪರಿಸರವನ್ನು ಹಾಳು ಮಾಡುತ್ತಿದ್ದಾರೆ.ಇದರಿಂದ ಬೆಂಗಳೂರಿನ ಮೂಲ ನಿವಾಸಿಗಳಿಗೆ ಬಾರೀ ತೊಂದರೆಯಾಗಿದೆ. ಬೆಂಗಳೂರು ಪರಿಸರವನ್ನು ಹಾಳು ಮಾಡಿ ಬೇರೆ ಊರುಗಳಿಗೆ ತೆರಳುತ್ತಾರೆ ಆದರೆ ಮೂಲ ನಿವಾಸಿಗಳು ಯಾವ ರೀತಿ ಬದುಕಬೇಕು ಎಂದು ಪ್ರಶ್ನಿಸಿದರು.
ವೇದಿಕೆಯ ಸದಸ್ಯರಾದ ಮುಖೇಶ್,ಸೋಮಣ್ಣ ಮಾತನಾಡಿ,ಹಸುಗಳ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿರುವ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು,ಅವರಿಗೆ ಪೋಲಿಸ್ ಇಲಾಖೆ ಕ್ರೂರವಾದ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಮೌನ ಪ್ರತಿಭಟನೆಯಲ್ಲಿ ವೇದಿಕೆ ಸದಸ್ಯರಾದ ಮಾಜಿ ಪಾಲಿಕೆ ಸದಸ್ಯ ರವಿಚಂದ್ರ,ಮಾವಳ್ಳಿ ಶ್ರೀನಿವಾಸ್, ಅಮರ್ ನಾಥ್, ಬೈರಪ್ಪ, ನಿರಂಜನ್,ಭುವನ, ಸೋಮಣ್ಣ ಮತ್ತಿತರರು ಭಾಗವಹಿಸಿದ್ದರು.