Plant trees and save the environment: Sangamesh N. Javadi

.
ಬೀದರ : ಮರವಿದ್ದರೆ ಬದುಕು, ಮರವಿದ್ದರೆ ಆಯುಷ್ಯ, ಆರೋಗ್ಯ, ಉಸಿರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವ ಇಚ್ಛೆಯಿಂದ ಗಿಡ, ಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಿಸಬೇಕು
ಎಂದು ಸಾಹಿತಿ, ಪರಿಸರ ಸಂರಕ್ಷಕ ವೇದಿಕೆ ರಾಜ್ಯ ಕರ‍್ಯರ‍್ಶಿ ಸಂಗಮೇಶ ಎನ್ ಜವಾದಿ ಹೇಳಿದರು.
ತಾಲೂಕಿನ ಖೇಣಿ ರಂಜೋಳ ಗ್ರಾಮದ ರ‍್ಕಾರಿ ಪ್ರೌಢಶಾಲೆ ಆವರಣದಲ್ಲಿ ಪರಿಸರ ಸಂಗಮ ವೇದಿಕೆ ವತಿಯಿಂದ ಹಮ್ಮಿಕೊಂಡ ಎಸ್ ಎಸ್ ಎಲ್ ಸಿ ಮಕ್ಕಳ ಶೈಕ್ಷಣಿಕ ಕರ‍್ಯಾಗಾರ ಹಾಗೂ ಪರಿಸರ ಸಂರಕ್ಷಣೆ ಜಾಗೃತಿ ಕರ‍್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಸಂಗಮೇಶ ಎನ್ ಜವಾದಿ ರವರು ಪ್ರಕೃತಿ ನಮಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ನೀರು, ಗಾಳಿ, ಆಹಾರ ಸೇರಿದಂತೆ ಇನ್ನು ಅನೇಕ ಅಗತ್ಯ ವಸ್ತುಗಳನ್ನು ನೀಡುತ್ತಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.
ಪ್ರಕೃತಿಯಲ್ಲಿನ ಏರುಪೇರುಗಳಿಂದ ಭೂಮಿಯ ತಾಪಮಾನ ಹೆಚ್ಚಾಗಿದ್ದು. ಪ್ರಾಕೃತಿಕ ಅಸಮತೋಲನ ರ‍್ಪಟ್ಟಿದೆ. ತಾಪಮಾನವನ್ನು ನಿಯಂತ್ರಿಸಿ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಮರಗಿಡಗಳನ್ನು ಬೆಳೆಸುವುದು ನಮ್ಮೆಲ್ಲರ ರ‍್ತವ್ಯ ಎಂದು ಭಾವಿಸಿ ಕಾಡನ್ನು ಉಳಿಸಿ, ಬೆಳೆಸಿ ಆರೋಗ್ಯಕರ ಸಮಾಜ ನರ‍್ಮಾಣಕ್ಕೆ ಮುಂದಾಗಬೇಕು.ಅಭಿವೃದ್ಧಿ ಪರಿಸರಕ್ಕೆ ಪೂರಕವಾಗಿದ್ದರೆ ಒಳಿತು, ಇಲ್ಲದಿದ್ದರೆ ಶಾಪ ಅನ್ನುವ ಮಾತನ್ನು ಸರಿಯಾಗಿ ರ‍್ಥಮಾಡಿಕೊಂಡರೇ ಮಾತ್ರ ಮಾನವರ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.
ಪರಿಸರ ಸಂಗಮ ವೇದಿಕೆ ಜಿಲ್ಲಾಧ್ಯಕ್ಷ ಕಾಶಿನಾಥ್ ಪಾಟೀಲ ಅವರು ಮಾತನಾಡಿ ಪರಿಸರ ಸಂಗಮ ವೇದಿಕೆ ಬೀದರ ಜಿಲ್ಲಾದ್ಯಂತ ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ರ‍್ವರೂ ನಮ್ಮ ಜೊತೆ ಕೈ ಜೋಡಿಸುವ ಕೆಲಸ ಮಾಡಬೇಕು. ಸಮಾರಂಭಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು. ಅರಣ್ಯ ಸಂಪತ್ತು ಸಂರಕ್ಷಣೆ ಮಾಡುವಲ್ಲಿ ಎಲ್ಲರೂ ಪ್ರಯತ್ನ ಮಾಡಬೇಕು ಎಂದರು.
ಕರ‍್ಯಕ್ರಮದ ಕುರಿತು ಚಂದ್ರಶೇಖರ ತಂಗಾ, ರೇಣುಕಾ ಎನ್ ವಿ,ಬಸವರಾಜ್ ಪಾಟೀಲ್, ಆರ್ ಎಸ್ ಬಿರಾದಾರ್
ರವರು ಮಾತನಾಡಿದರು.
ಕರ‍್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ ಎನ್ ಆರ್ ರವರು ವಹಿಸಿ, ಮಾತನಾಡಿದರು.
ಕರ‍್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸರಸ್ವತಿ ಗುರುಲಿಂಗಪ್ಪ,
ಎಸ್ ಡಿ ಎಂ ಸಿ ಅಧ್ಯಕ್ಷರು ಶಶಿಧರ್ ಹಿಂದೋಡ್ಡಿ ಉಪಸ್ಥಿತರಿದ್ದರು.
ಮಧುಮತಿ ಸಹ ಶಿಕ್ಷಕರು ಪ್ರಾಸ್ತಾವಿಕವಾಗಿ ಮಾತನಾಡಿದರು.
ರೇಖಾ ಅತಿಥಿ ಶಿಕ್ಷಕರು ಸ್ವಾಗತಿಸಿದರು.
ಸತ್ಯನಾರಾಯಣ ಸಹ ಶಿಕ್ಷಕರು ನಿರೂಪಿಸಿದರು, ಶಿವರಾಮಕೃಷ್ಣ ಆಂಗ್ಲಭಾಷ ಶಿಕ್ಷಕರು ವಂದಿಸಿದರು.
ಇದೆ ಸಮಯದಲ್ಲಿ ಪರಿಸರ ಸಂರಕ್ಷಣೆ ಕುರಿತು ಮಕ್ಕಳಿಗೆ ವಿವಿಧ ಸ್ರ‍್ಧೆಗಳು ಆಯೋಜಿಸಿ, ವಿಜೇತರಾದ ಮಕ್ಕಳಿಗೆ
ಬಹುಮಾನ ವಿತರಣೆ ಮಾಡಲಾಯಿತು.
ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಈ ಸಂರ‍್ಭದಲ್ಲಿ ಕವಿತಾ ಮಂಜುನಾಥ್ ಮುಖ್ಯ ಗುರುಗಳು ರ‍್ಕಾರಿ ಪ್ರೌಢಶಾಲೆ ನಿಂಬೂರ ಸೇರಿದಂತೆ ಗಣ್ಯರು, ಮಾತೆಯರು, ಶಿಕ್ಷಕರು,ವಿಧ್ಯರ‍್ಥಿಗಳು, ಮಕ್ಕಳು ಹಾಜರಿದ್ದರು.