Sri Ramanagara GrammnewPresident T. Shanthappa, Vice President Hussain B. Inauguration
ಶಿವರಾಜ್ ತಂಗಡಗಿ ಮಾರ್ಗದರ್ಶನದಲ್ಲಿ ಗ್ರಾಪಂ ಪಕ್ಷಾತೀತ ಅಭಿವೃದ್ಧಿ: ರೆಡ್ಡಿ ಶ್ರೀನಿವಾಸ್
ಗಂಗಾವತಿ: ತಾಲೂಕಿನ ಶ್ರೀರಾಮನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾದ ಟಿ.ಶಾಂತಪ್ಪ ಹಾಗೂ ಹುಸೇನ್ ಬಿ ಅವರು ಬುಧವಾರದಂದು ಅಧಿಕಾರ ಸ್ವೀಕರಿಸಿದರು.
ಗ್ರಾಮದ ಶ್ರೀ ಆಂಜನೇಯ, ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಕಾರ್ಯಕರ್ತರ ಪಟಾಕಿ, ಡೊಳ್ಳು ಸದ್ದಿನ ಮೂಲಕ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಭ್ರಮದ ಮೆರವಣಿಗೆಯೊಂದಿಗೆ ಪಂಚಾಯತಿಗೆ ತಲುಪಿ, ನವೀಕರಣಗೊಂಡ ಗ್ರಾಪಂ ಕಾರ್ಯಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಕೈಗೊಂಡು, ನಂತರ ಪದಗ್ರಹಣ ಮಾಡಲಾಯಿತು.
ನೂತನ ಅಧ್ಯಕ್ಷ ಟಿ ಶಾಂತಪ್ಪ ಮಾತನಾಡಿ, ಗ್ರಾಪಂ ಎಲ್ಲಾ ಸದಸ್ಯರ ಹಾಗೂ ಗ್ರಾಮದ ಮುಖಂಡರ ಸಲಹೆ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡರಾದ ರೆಡ್ಡಿ ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಅಧ್ಯಕ್ಷ ಟಿ.ಶಾಂತಪ್ಪ, ಉಪಾಧ್ಯಕ್ಷರಾದ ಹುಸೇನ್ ಬಿ ಅವರು ಗ್ರಾಪಂ ಎಲ್ಲಾ 24 ಸದಸ್ಯರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗ್ರಾಮಸ್ಥರ ಪರವಾಗಿ ಎಲ್ಲರಿಗೂ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.
ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಲು ಉತ್ಸುಕರಾಗಿದ್ದು. ಕಳೆದ ಬಾರಿ ಮಧ್ಯಾಂತರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ.ಲಕ್ಷ್ಮೀ ಚಿರಂಜೀವಿ ಅವರು ಪಕ್ಷಾತೀತವಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದು ಶ್ಲಾಘನೀಯವಾಗಿದೆ. ಆ ನಿಟ್ಟಿನಲ್ಲಿ ಗೆಲುವು ಯಾರದೇ ಇರಲಿ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಟ್ಟೊಟ್ಟಿಗೆ ಸಾಗುತ್ತೇವೆ ಎಂದರು.
ಇದಕ್ಕೂ ಮುನ್ನ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹಾಗೂ ಎಲ್ಲಾ ಗ್ರಾಪಂ ಸದಸ್ಯರಿಗೆ, ಮುಖಂಡರಿಗೆ, ಅಧಿಕಾರಿಗಳಿಗೆ ಗೌರವ ಸನ್ಮಾನ ಏರ್ಪಡಿಸಲಾಗಿತ್ತು.
ಈ ವೇಳೆ ನಾಗರಾಜ್ ತಂಗಡಗಿ, ನೂತನ ಉಪಾಧ್ಯಕ್ಷೆ ಹುಸೇನ್ ಬಿ, ಮುಖಂಡರಾದ ಕರಟೂರಿ ಶ್ರೀನಿವಾಸ್, ಮಹ್ಮದ್ ರಫಿ, ಚಂಟಿರಾಜು ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಉಪಾಧ್ಯಕ್ಷ ರೆಡ್ಡಿ ವೀರರಾಜು, ಮುಖಂಡರಾದ ಮನ್ಯ ಕೃಷ್ಣಮೂರ್ತಿ, ಪೊಪೊಪು ರಾಮಕೃಷ್ಣ, ಪೊಟ್ಲೂರೂ ವೆಂಕಟೇಶ್ವರರಾವ್, ಕರಿಯಪ್ಪ, ಯುವ ಮುಖಂಡ ಪವನ್ ಕುಮಾರು, ಚಿನ್ನಬಾಬು, ಗೋಪಾಲ್ ಚವಾಣ್ ಸೇರಿದಂತೆ ಗ್ರಾಪಂ ಸಮಸ್ಯರಾದ ಪಿಲ್ಲಿ ರಾಮಕೃಷ್ಣ, ಮೆಹಬೂಬ್, ರೇಣುಕಮ್ಮ ಜಿಂದಪ್ಪ, ಆರತಮ್ಮ, ಸಾಂಬಮೂರ್ತಿ, ಮತ್ತಿತರೆ ಗ್ರಾಪಂ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿ ವತ್ಸಲಾ, ಎಸ್ ಡಿಎ ಗಿರಿಧರ್ , ಸಿಬ್ಬಂದಿಗಳು, ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.