Breaking News

ಹಿಂದುಳಿದ ವರ್ಗಗಳ ವಿಭಾಗ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ : ಸನ್ಮಾನ

Election as State Vice President of Backward Classes Section : Hon

ಜಾಹೀರಾತು
ಜಾಹೀರಾತು


ಗಂಗಾವತಿ:ನಗರದ ಆನೆಗೊಂದಿ ರಸ್ತೆಯಲ್ಲಿರುವ ಎಚ್‌ಆರ್ ಶ್ರೀನಾಥ ಅವರ ನಿವಾಸಿದಲ್ಲಿ ರಾಜ್ಯ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜಶೇಖರ ಮುಸ್ಟೂರು ಅವರನ್ನು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌ಆರ್ ಶ್ರೀನಾಥ ಅವರು ಶನಿವಾರ ಸನ್ಮಾನ ಮಾಡಿ, ಆದೇಶ ಪ್ರತಿಯನ್ನು ವಿತರಣೆ ಮಾಡಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌ಆರ್ ಶ್ರೀನಾಥ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಯುತ್ತಿರುವ ಕಾಂಗ್ರೆಸ್ ಪಕ್ಷವು ಜನಪರವಾಗಿರುವ ಆಡಳಿತವನ್ನು ನೀಡುವ ಮೂಲಕ ಜನ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕೂ ಸಹ ಪಕ್ಷವು ಮುತುವರ್ಜಿಯನ್ನು ವಹಿಸಿದ್ದು, ಅದಕ್ಕಾಗಿಯೇ ಹಿಂದುಳಿದ ವರ್ಗಗಳ ನಾಯಕರನ್ನು ಗುರುತಿಸಿ, ಅವರಿಗೆ ಅಧಿಕಾರ ನೀಡುವ ಮೂಲಕ ಹಿಂದುಳಿದ ಸಮಾಜಗಳ ಕಲ್ಯಾಣಕ್ಕೂ ಮುಂದಾಗಲಾಗುತ್ತಿದೆ. ಸದ್ಯ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರನ್ನಾಗಿ ರಾಜಶೇಖರ ಮುಸ್ಟೂರು ಅವರನ್ನು ಆಯ್ಕೆ ಮಾಡಲಾಗಿದೆ. ಅದರ ಜೊತೆಗೆ ಅವರಿಗೆ ವಿಜಯನಗರ ಜಿಲ್ಲೆಯನ್ನು ಉಸ್ತುವಾರಿಯನ್ನಾಗಿ ನೀಡಲಾಗಿದೆ. ರಾಜಶೇಖರ ಅವರು ವಿಜಯನಗರ ಜಿಲ್ಲೆಯ ಪ್ರತಿ ತಾಲೂಕುಗಳಿಗೆ ಸಂಚಾರವನ್ನು ನಡೆಸಿ, ಹಿಂದುಳಿದ ಸಮಾಜಗಳನ್ನು ಒಗ್ಗೂಡಿಸಿಕೊಂಡು ಕಾಂಗ್ರೆಸ್ ಪಕ್ಷದ ಏಳಿಗೆಗೆ ಶ್ರಮಿಸಬೇಕು ಎಂದು ಹೇಳಿದರು. ನಂತರ ಆದೇಶ ಪ್ರತಿಯನ್ನು ನೀಡಿ ನಂತರ ಸನ್ಮಾನಿಸಿ, ಗೌರವಿಸಲಾಯಿತು.
ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ರಾಜಶೇಖರ ಮುಸ್ಟೂರು ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದ ದುಡಿದುಕೊಂಡು ಬಂದಿರುವ ಕಾರಣಕ್ಕೆ ಪಕ್ಷವು ಗುರುತಿಸಿ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದೆ. ಪಕ್ಷವು ನೀಡಿರುವ ಹುದ್ದೆಯನ್ನು ಸರಿಯಾಗಿ ನಿಭಾಯಿಸುವ ಮೂಲಕ ಪಕ್ಷಕ್ಕೆ ದುಡಿಯುವೆ. ಜೊತೆಗೆ ಪ್ರತಿ ತಾಲೂಕುಗಳಿಗೆ ಭೇಟಿಯನ್ನು ನೀಡುವ ಮೂಲಕ ಹಿಂದುಳಿದ ಸಮಾಜದಗಳಾದ ಗಂಗಾಮತ, ಮಡಿವಾಳ, ಆರ್ಯ ಈಡಿಗ, ಉಪ್ಪಾರ, ಕುಂಬಾರ, ಕಮ್ಮಾರ ಸೇರಿದಂತೆ ನಾನಾ ಸಮಾಜಗಳ ಏಳಿಗೆಗೆ ಶ್ರಮಿಸಲಾಗುವುದು.
ಗಂಗಾಮತ ಸಮಾಜದ ಮುಖಂಡರಾದ ಯಮನಪ್ಪ, ಆರ್.ಕೆ.ಯರಿಸ್ವಾಮಿ, ಚಂದ್ರಶೇಖರ, ಲಕ್ಷö್ಮಣ, ವಿರುಪಣ್ಣ, ಹೇಮಂತ, ಮಂಜುನಾಥ, ರಾಘವೇಂದ್ರ, ಗಂಗಣ್ಣ ಹೇರೂರು, ಶರಣಪ್ಪ, ಐಯ್ಯಪ್ಪ ಸಂಗಟಿ, ಶರಣಪ್ಪ ಸಂಗಣ, ಮೋಹನ್, ವೀರೇಶ, ಶ್ರೀನಿವಾಸ್, ಸಿದ್ದು, ಶ್ರೀನಾಥ, ಮರಿಯಪ್ಪ, ಕನಕರಾಯ ಹಾಗೂ ಇತರರಿದ್ದರು.

ಕೆಪಿಎಲ್೧೫ಸಿಎಂ,೦೧. ಗಂಗಾವತಿಯ ಆನೆಗೊಂದಿ ರಸ್ತೆಯಲ್ಲಿರುವ ಎಚ್‌ಆರ್ ಶ್ರೀನಾಥ ಅವರು ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜಶೇಖರ ಮುಸ್ಟೂರು ಅವರನ್ನು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌ಆರ್ ಶ್ರೀನಾಥ ಅವರು ಶನಿವಾರ ಸನ್ಮಾನ ಮಾಡಿ, ಆದೇಶ ಪ್ರತಿಯನ್ನು ವಿತರಣೆ ಮಾಡಿದರು.

About Mallikarjun

Check Also

ಪುರುಷೋತ್ತಮ ದಾಸ್ ಹೆಗ್ಗಡೆ ಅವರ  “ಯಯಾತಿ” ಕಾದಂಬರಿ ಬಿಡುಗಡೆ 

Purushottam Das Heggade’s novel “Yayati” released ಅತಿ ಕಾಮ ಅತಿರೇಖವಾದ್ದು, ಮನಷ್ಯನ ಶ್ರೇಯಸ್ಸಿಗೆ ಪೂರಕವಲ್ಲ ; ಸಂಸ್ಕೃತಿ ಚಿಂತಕ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.