Breaking News

ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಲ್ಲಿ ನಮ್ಮ ಇಲಾಖೆ ಸದಾಸಿದ್ದ ಅಧೀಕ್ಷಕರಾದ ತಪಸುಮ ಅಪ್ಸ ಭಾನು ಸಭೆಯಲ್ಲಿ ಮಾಹಿತಿ.

Information from the meeting of Tapasuma Apsa Bhanu, the superintendent of our department, who is always committed to providing quality electricity.

ಜಾಹೀರಾತು


ವರದಿ: ಬಂಗಾರಪ್ಪ .ಸಿ .
ಹನೂರು :-ಗ್ರಾಹಕರಿಗೆ ಮತ್ತು ರೈತರಿಗೆ ಗುಣ ಮಟ್ಟದ ಟಿಸಿಗಳನ್ನು ಹೆಚ್ಚುವರಿಯಾಗಿ ಆಳವಡಿಸುವ ಮೂಲಕ ರಸ್ತೆಯಲ್ಲಿ ಹಲವೆಡೆ ಜೋತು ಬಿದ್ದಿರುವ ವೈರ್ ಗಳನ್ನು ಸರಿಪಡಿಸಬೇಕು. ಮತ್ತು ಐಪಿ ಸೆಟ್ ಗಳಿಗೆ ಹಣ ಕಟ್ಟಿರುವ ರೈತರಿಗೆ ಕೂಡಲೇ ಟಿ ಸಿಗಳ ಸೌಲಭ್ಯ ಒದಗಿಸಬೇಕು ಎಂದು ರೈತ ಮುಖಂಡರಾದ ಅಮ್ಜಾದ್ ಖಾನ್ ಒತ್ತಾಯಿಸಿದರು. 

ಪಟ್ಟಣದ ಉಪ ವಿಭಾಗ ಚೆಸ್ಕ್ಂ ಕಛೇರಿ ಆವರಣ ಕೊಳ್ಳೇಗಾಲ ವಿಭಾಗದ ಅಧೀಕ್ಷಕ ಇಂಜಿನಿಯರ್ ತಬಸುಮ ಅಫ್ಸ ಭಾನು ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ರೈತ ಮುಖಂಡರಾದ ಚೆಂಗಡಿ ಕರಿಯಪ್ಪ ಮಾತಾಡಿ ಗುಣ ಮಟ್ಟದ ಟಿಸಿಗಳನ್ನು ನೀಡುವ ನಿಟ್ಟಿನಲ್ಲಿ ಸಮರ್ಪಕ ನಿರ್ವಹಣೆ ಆಗಬೇಕು ನಿಗಧಿತ ಸಮಯದಲ್ಲಿ ಉತ್ತಮ ಸರ್ವಿಸ್ ಆಗಬೇಕು. ಲೈನ್ ಮ್ಯಾನ್ ಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಿಳಿಸಬೇಕೆಂದು ಹೇಳಿದರು.

ಎಇಇ ರಂಗಸ್ವಾಮಿ ಮಾತಾಡಿ ಕಳೆದ ಸಭೆಯಲ್ಲಿ ರೈತರಿಂದ ಬಂದಿದ್ದ ಸಮಸ್ಯೆಗಳ ದೂರುಗಳನ್ನು ಕ್ರಮ ವಹಿಸಿರುವ ಬಗ್ಗೆ ಸಭೆಯಲ್ಲಿ ಓದಿ ತಿಳಿಸಿದರು. ಅಲ್ಲದೆ ಈ ಬಾರಿ 22 ದೂರುಗಳು ಬಂದಿದ್ದು ನಿಗದಿತ ಅವಧಿಯೊಳಗೆ ಬಂದಿರುವ ವಿವಿಧ ದೂರುಗಳ ಸಮಸ್ಯೆಗಳನ್ನು ಬಗೆಹರಿಸಲು ತುರ್ತಾಗಿ ಕ್ರಮ ವಹಿಸಲಾಗುವುದು ಎಂದರು.

ಕೊಳ್ಳೇಗಾಲ ಇಇ ತಬಸುಮ ಅಫ್ಸ ಭಾನು ಮಾತನಾಡಿ ಈ ಭಾಗದಲ್ಲಿ ಲೈನ್ ಡ್ಯಾಮೇಜ್ಗಳು ಶೇಕಡ 90ರಷ್ಟು ಕೆಲಸ ಮುಗಿದಿದೆ ಎಲ್ಲಾ ಕಡೆ ಹೆಚ್ಚುವರಿ ಟಿಸಿಗಳಿಗೆ ರೈತರು ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಕೆಲವು ರೈತರು ಜಮೀನಿನ ಮಧ್ಯ ಭಾಗದಲ್ಲಿ ಲೈನ್ಗಳು ಹೋಗಿರುವ ಬಗ್ಗೆ ದೂರುಗಳು ನೀಡಿದ್ದಾರೆ. ಕೆಲವು ಕಡೇಗಳಲ್ಲಿ ಕಂಬಗಳಿಗೆ ಗಿಡಗಳು ಸುತ್ತುಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ದೂರುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಹನೂರು ವ್ಯಾಪ್ತಿಯಲ್ಲಿನ ಭಾಗದಲ್ಲಿ ಬಹುತೇಕ ಗ್ರಾಮಗಳು ಅರಣ್ಯ ಪ್ರದೇಶದಲ್ಲಿ ಬರುವುದರಿಂದ ವಿದ್ಯುತ್ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಂದ ಸಹಕಾರ ಪಡೆದು ಸರ್ಕಾರ ಮಟ್ಟದಲ್ಲಿ ಸಮಸ್ಯೆಗಳನ್ನು ಗಮನಕ್ಕೆ ತಂದು ಆಲಂಬಾಡಿ ಮಾರಿಕೋಟೆ ಜಂಬೂಪಟ್ಟಿ ಇನ್ನಿತರ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಈಗಾಗಲೇ ಸಾಮಗ್ರಿ ಖರೀದಿ ಮಾಡಲಾಗಿದೆ. ಅರಣ್ಯ ಇಲಾಖೆಯ ತೊಡಗಿನಿಂದ ಕೆಲಸ ವಿಳಂಬವಾಗುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಂಬಂಧಪಟ್ಟಿ ಇಲಾಖೆ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು. ಎಂದರು

ಇದೆ ವೇಳೆ ರಾಮಪುರ ಭಾಗದಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಟರಾಜು ಎನ್ನುವವರ ವಿರುದ್ಧ ಹಲವಾರು ರೈತ ಮುಖಂಡರು ಅವರ ನಡವಳಿಕೆ ಬಗ್ಗೆ ಅಸಮರ್ಪಕ ಮಾತುಗಳನ್ನು ಆಡಿ ಅವರನ್ನು ಬದಲಾಯಿಸುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪಂಧಿಸಿ ಎಎ ತಬಸುಮ ಅಫ್ಸ ಭಾನು ರವರು ಕಳೆದ ಸಭೆಯಲ್ಲೂ ನಟರಾಜು ಲೈನ್ ಮ್ಯಾನ್ ವಿರುದ್ದ ರೈತರಿಂದ ಅಪಸ್ವರ ಕೇಳಿಬಂದಿತ್ತು ಹಾಗಾಗಿ ಈ ಕೂಡಲೇ ಅವರನ್ನು ಬದಲಾಯಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಇಇ ಬಿ. ರಂಗಸ್ವಾಮಿ ಜೆಇಗಳಾದ ಎಂ.ಮಹೇಶ್ ವೆಂಕಟೇಶ್ ನಾಯ್ಡು ಮಹದೇವಸ್ವಾಮಿ ಹೆಚ್.ಮಾದೇಶ ರಘುನಂದನ್ ವೆಂಕಟೇಶ್ ಮೂರ್ತಿ ಮತ್ತು ರೈತ ಮುಖಂಡರು ಹಾಜರಿದ್ದರು.

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *