Breaking News

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದನಾಡಿನ ಕಲೆ,ಸಾಹಿತ್ಯ,ಸಂಸ್ಕೃತಿಯ ಬೆಳವಣಿಗೆ.

From Department of Kannada and Culture Development of art, literature and culture of the country.

ಗಂಗಾವತಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ನಾಡಿನ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುತ್ತಿದೆ ಎಂದು ಹಣವಾಳ ಗ್ರಾಮದ ಮುಖಂಡರು ಹಾಗೂ ಗ್ರಾ.ಪಂ ಮಾಜಿ ಸದಸ್ಯರಾದ ದುರ್ಗಪ್ಪ ಗೊಲ್ಲಾರಿಯವರು ಹರ್ಷ ವ್ಯಕ್ತಪಡಿಸಿದರು.
ಅವರು ಗಂಗಾವತಿ ತಾಲೂಕಿನ ಹಣವಾಳ ಗ್ರಾಮದ ಶ್ರೀ ಆದಿದೇವತೆ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಡಿಸೆಂಬರ್-೨೨ ಶುಕ್ರವಾರದಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ಶ್ರೀ ನುಲಿಚಂದಯ್ಯ ಕೊರಮ ಸೇವಾ ಟ್ರಸ್ಟ್ (ರಿ) ಹಣವಾಳ ಇವರ ವಿಶೇಷ ಘಟಕ ಯೋಜನೆ ಅಡಿಯಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಳ್ಳಿಯಲ್ಲಿದ್ದ ಕಲಾವಿದರನ್ನು ಗುರುತಿಸಿ ಕನ್ನಡ ಸಂಸ್ಕೃತಿ ಇಲಾಖೆಯು ಕಾರ್ಯಕ್ರಮಗಳು ನೀಡುತ್ತಿರುವುದು ತುಂಬಾ ಸಂತೋಷದಾಯಕವಾಗಿದೆ ಎಂದು ಇಲಾಖೆಗೆ ಧನ್ಯವಾದಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಭಜಂತ್ರಿ ವಿರುಪಾಕ್ಷಿ, ಚಿದಾನಂದಪ್ಪ, ನಿಂಗಪ್ಪ, ನ್ಯಾಯಬೆಲೆ ಅಂಗಡಿ ವರ್ತಕ ವಿರುಪಣ್ಣ, ಗುರಣ್ಣ ಪೋಸ್ಟ್ ಮ್ಯಾನ್, ಭಜಂತ್ರಿ ದೊಡ್ಡ ಭೀಮಪ್ಪ, ಹಿರಿಯ ಕಲಾವಿದರಾದ ಖಾಜಾ ಹುಸೇನಸಾಬ್, ತಬಲ ವಾದಕರಾದ ಪುಟ್ಟರಾಜ ಸೇರಿದಂತೆ ಇನ್ನು ಮುಂತಾದ ಊರಿನ ಮುಖಂಡರು ಭಾಗವಹಿಸಿದ್ದರು.
ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಣ್ಣ ಭೀಮಪ್ಪ ಮತ್ತು ತಂಡದವರು ಸುಗಮ ಸಂಗೀತದಲ್ಲಿ ಕ್ಲಾರಿಯೋನೆಟ್ ವಾದನವನ್ನು ನುಡಿಸಿ ನೆರೆದಿದ್ದವರಿಗೆ ಸಂಗೀತದ ರಸದೌತಣವನ್ನು ಉಣಬಡಿಸಿದರು.
ಎರಿಸ್ವಾಮಿ ಇಬ್ರಾಹಿಂಪುರ ಕಾರ್ಯಕ್ರಮವನ್ನು ನಿರೂಪಿಸಿದರೆ, ದೇವರಾಜ್ ಭಜಂತ್ರಿ ವಂದಿಸಿದರು.

About Mallikarjun

Check Also

BJP ಸೋಲಿಸಿ ಭಾರತ ಉಳಿಸಿ-ಎಸ್.ಎಫ್.ಐ

ಹೊಸಪೇಟೆ: ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಮಾಡುವ ಸಂದರ್ಭದಲ್ಲಿ ನಾವಿದ್ದೇವೆ. ಇದಕ್ಕೆ ಬಹುಮುಖ್ಯ ಕಾರಣವೇ ಸಾರ್ವತ್ರಿಕ ಲೋಕಸಭಾ ಚುನಾವಣೆ ಆದ್ದರಿಂದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.