
Sriramanagar: Man arrested for writing Matka

ಗಂಗಾವತಿ: ತಾಲೂಕಿನ ಶ್ರೀರಾಮನಗರದಲ್ಲಿ ಮಟ್ಕಾ ದಂಧೆಗೆ ಸಾರ್ವಜನಿಕರು ರೋಸಿಹೊಗಿದ್ದರು.

ಗ್ರಾಮೀಣ ಠಾಣೆ ಸಿಪಿಐ ರಂಗಪ್ಪ ದೊಡ್ಡಮನಿ ವರದಿ ಆಧರಿಸಿ ದಾಳಿ ನಡೆಸಿ ಮಟ್ಕಾ ಬುಕ್ಕಿಯೊಬ್ಬನನ್ನ ಕಸ್ಟಡಿಗೆ ಪಡೆದು ಎಫ್‌ಐಆರ್ ದಾಖಲಿಸಿದ್ದಾರೆ.
ಶ್ರೀರಾಮನಗರದಲ್ಲಿ ಮಟ್ಕಾ ದಂಧೆ ಜೋರಾಗಿ ನಡೆಸುತ್ತಿದ್ದ ಸಂತೋಷ ತಂದೆ ದುರುಗಪ್ಪ ಸಣ್ಣ ಗೊಂಗಾಡಿ(೨೪) ಮತ್ತು ಸಿದ್ದಾಪುರದ ಪರಶುರಾಮ ಎಂಬ ಆರೋಪಿತರನ್ನು ದಸ್ತಗಿರಿ ಮಾಡಿ ಅವರ ವಿರುದ್ಧ ಗುನ್ನೆ ನಂ. ೨೨೭/೨೦೦೨೫-ಕಲ ೭೮(೩)ರ ಅನ್ವಯ ಕೋರ್ಟ್‌ಗೆ ಎಫ್‌ಐಆರ್ ದಾಕಲಿಸಿದ್ದಾರೆ.

ಆರೋಪಿತರು ಶ್ರೀರಾಮನಗರದ ದುರ್ಗಾದೇವಿ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮೀಣ ಠಾಣೆಯ ಸಿಪಿಐ ದೊಡ್ಡಮನಿ ಅವರು, ಪಂಚರಾದ ನಾಗನಗೌಡ ಸಂಗನಾಳ (೩೪),ವಿಷ್ಣುಕುಮಾರ್ ಚವ್ಹಾಣ (೨೯) ಇವರ ಸಮ್ಮುಖ ಠಾಣೆಯಲ್ಲಿ ವಿಚಾರಣೆ ನಡೆಸಿ ಆಪಾದಿತರಾದ ಸಂತೋಷ್ ಮತ್ತು ಪರಶುರಾಮ್ ಇವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಸಿಪಿಐ ಇವರ ಸಮಯೋಚಿತ ದಾಳಿಯಿಂದ ಮಟ್ಕಾ ಬುಕ್ಕಿಗಳಿ ಅಂದರ್ ಆಗುವ ಮೂಲಕ ಸಾರ್ವಜನಿಕರು ಪೋಲಿಸರ ಕಾರ್ಯಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.
