Breaking News

ನೀರನ್ನು ಹಿತ ಮಿತವಾಗಿ ಬಳಸಿ : ಸಂಸದ ರಾಜಶೇಖರ್ ಹಿಟ್ನಾಳ,

Use water sparingly: MP Rajasekhar Hitnala

ಜಾಹೀರಾತು

( ಆರೋಗ್ಯ ಪೂರ್ಣ ಬದುಕಿಗೆ ಸ್ವಚ್ಚತೆ ಅವಶ್ಯ…!

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಕೊಳಾಯಿಗಳ ಮೂಲಕ ಬರುವ ನೀರನ್ನು ಹಿತ ಮಿತವಾಗಿ ಬಳಸಿಕೊಂಡು ನೀರನ್ನು ಉಳಿಸಲು ಮುಂದಾಗುವ ಜೊತೆಗೆ ಬಯಲು ಮುಕ್ತ ಶೌಚವನ್ನು ತೊರೆದು ಪ್ರತಿಯೋಬ್ಬರು ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಆರೋಗ್ಯ ಪೂರ್ಣ ಬದಕನ್ನು ಕಟ್ಟಿಕೊಳ್ಳಿ ಎಂದು ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ ಹೇಳಿದರು.

ಅವರು ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಶುಕ್ರವಾರದಂದು ಹಮ್ಮಿಕೊಂಡ ಜಲಜೀವನ್ ಮಿಷನ ಯೋಜನೆಯಡಿ ಗ್ರಾಮದ ಪ್ರತಿಯೊಂದು ಮನೆಗೆ ಶುದ್ದ ಕುಡಿಯುವ ನೀರು ಸರಬರಾಜು ಕಾರ್ಯಕ್ರಮದಲ್ಲಿ ನಾಡಗೀತೆಯೊಂದಿಗೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಂತರದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇ ಮಾತನಾಡಿ ನೀರು ಮತ್ತು ನೈರ್ಮಲ್ಯದ ಬಗ್ಗೆ ಮಕ್ಕಳು ಜಾಗೃತರಾಗಿರಬೇಕು, ಕುಡಿಯುವ ನೀರನ್ನು ಹಿತ ಮಿತವಾಗಿ ಬಳಸುವ ಮೂಲಕ, ಗ್ರಾಮಗಳ ಸ್ವಚ್ಚತೆಗೆ ಮುಂದಾಗಬೇಕು ಜೊತೆಗೆ ಬಯಲು ಶೌಚವನ್ನು ತ್ಯಜಿಸಿ, ಗ್ರಾಮ ಪಂಚಾಯತಿಯಿಂದ ನೀಡುವ ಅನುದಾನದಿಂದ ಮನೆಯಲ್ಲಿಯೇ ಶೌಚಾಲಯ ನಿರ್ಮಿಸಿಕೊಂಡು ಗ್ರಾಮದ ಸ್ವಚ್ಚತೆ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದು ಸಾರ್ವಜನಿಕರೀಗೆ ಮನವಿ ಮಾಡಿದರು..

ನಾವು ನಿಮಗೆ ಸರಕಾರದಿಂದ 24 x7 ದಿನಗಳು ಶುದ್ದ ಕುಡಿಯುವ ನೀರನ್ನು ನೀಡುತ್ತಿದ್ದು ಅದರ ನಿರ್ವಹಹಣೆ ಮಾಡುವ ಮೂಲಕ, ನೀರು ರಾಜ್ಯಕ್ಕೆ ಈ ಜಿಲ್ಲೆ ಮಾದರಿಯಾಗಬೇಕು ಎಂದರು.

ತದನಂತರ ದದೆಗಲ್ ಆತ್ಮಾನಂದ ಸ್ವಾಮೀಜಿ ಮಾತನಾಡಿ ಪ್ರತಿಯೊಂದು ಜೀವಿಗೆ ನೀರು ಅವಶ್ಯವಾಗಿದ್ದು, ಮನುಷ್ಯ ಆಹಾರವಿಲ್ಲದೇ ಮೂರು ದಿನ ಬದುಕಬಲ್ಲ ಆದರೆ ನೀರಿರದೇ ಅರೆಕ್ಷಣವು ಬದುಕಲಾರ ಆದ್ದರಿಂದ ನೀರನ್ನು ಫೋಲು ಮಾಡಿ ಹರಿಸದಂತೆ ಪ್ರತಿಜ್ಞೆ ಮಾಡಿ ನೀರನ್ನು ಸಂರಕ್ಷಣೆ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು.

ನಂತರದಲ್ಲಿ ಪಿಲ್ಡ್ ಬ್ಯಾಂಕ್ ಸಿಇಒ ಅಜೇಯ್ ಸಿನ್ಹಾ ಮಾತನಾಡಿ ಜಲಜೀವನ ಮಿಷಿನ್ ಯೋಜನೆಯಲ್ಲಿ ಕರ್ನಾಟಕದ 3 ನೇ ಗ್ರಾಮ ಕೋಳೂರು, ಬೀದರ್, ಕಲಬುರ್ಗಿಗಳಲ್ಲಿ ಈ ಯೋಜನೆ ಆಯ್ಕೆಯಾಗಿದ್ದು ಇದು ಜನ ಪ್ರತಿನಿಧಿಗಳ ಇಚ್ಚಾಸಕ್ತಿಗೆ ಹಿಡಿದ ಕೈ ಗನ್ನಡಿಯಾಗಿದೆ ಇದರಿಂದ ಈ ಗ್ರಾಮಕ್ಕೆ 24×7 ನೀರು ಪೂರೈಕೆಗೆ ಅನೂಕೂಲವಾಗಿದ್ದು ಗ್ರಾಮಸ್ಥರು ಸಧ್ಬಳಕೆ ಮಾಡಿಕೊಳ್ಳಿ ಎಂದರು.

ಈ ಗ್ರಾಮದಲ್ಲಿ 400 ನಲ್ಲಿಗಳಿದ್ದರು ಎಲ್ಲರು ಕೊಳಾಯಿಗಳಲ್ಲೂ ಒಂದೇ ರೀತಿಯಲ್ಲಿ ನೀರು ಬರುತ್ತದೆ ಇದರಲ್ಲಿ ಯಾರಿಗೂ ತಾರತಮ್ಯವಿಲ್ಲಾ ಎಂದರು.

ಈ ರೀತಿಯಾದ ನೀರಿನ ಯೋಜನೆಗಳು ಹಳ್ಳಿ ಪ್ರದೇಶಗಳ ಜನತೆಗೆ ನೀಡುವದರಿಂದ ಮುಂದಿನ ದಿನ ಮಾನಗಳಲ್ಲಿ ಪಟ್ಟಣದ ಜನತೆಯು ನೀರಿಗಾಗಿ ಹಳ್ಳಿಯತ್ತ ಮುಖ ಮಾಡುವ ಪರಸ್ಥಿತಿ ನಿರ್ಮಾಣವಾಗಲಿದೆ ಎಂದರು.

ನೀವು ಶುದ್ದ ಕುಡಿಯುವ ನೀರಿನ ಬಾಟಲಿಗಳನ್ನು ಹತ್ತು, ಇಪ್ಪತ್ತು ರೂಪಾಯಿಕೊಟ್ಟು ಖರೀದಿಸುತ್ತಿರಿ, ಆದರೆ ನಿಮ್ಮ ಮನೆ, ಮನೆಗೂ ಪ್ರತಿಯೋಬ್ಬ ವ್ಯಕ್ತಿಗೆ 55ಲೀಟರ್ ಶುದ್ದ ನೀರು ನೀಡಲಾಗುತ್ತದೆ.

800 ಸಾವಿರ ಲೀಟರ್ ಗೆ 800 ಪೈಸೆ ಆಗುತ್ತದೆ. 1ಲೀಟರ್ ಗೆ ಒಂದು ಪೈಸೆ ಆಗುತ್ತದೆ. ಇಂತಹ ನೀರನ್ನು ಸಧ್ಬಳಕೆ ಮಾಡಿಕೊಳ್ಳಿ, ತೆರೆದ ನೀರಿನ ಕೊಳಾಯಿಗಳಿದ್ದರೇ ನೀರು ಪೋಲಾಗುವುದನ್ನು ತಡೆಯಲು ಸ್ವತಃ ಸಾರ್ವಜನಿಕರು ಬಂದ್ ಮಾಡಿ, ಈ ರೀತಿ ಗ್ರಾಮದಲ್ಲಿ ಯಾರದೇ ನಳದ ನೀರು ಪೋಲಾಗುತ್ತಿದ್ದರೇ ನಿಮ್ಮ ಗ್ರಾಮ ಪಂಚಾಯತಿಯಲ್ಲಿ ನೀರು ಸರಬರಾಜು ಮಾಡುವವರಿಗೆ ದೂರು ನೀಡಿ ನೀರು ಪೋಲಾಗುವುದನ್ನು ತಡೆಯಿರಿ ಎಂದರು.

ಕಾರ್ಯಕ್ರಮದ ನೇತೃತ್ವವನ್ನು ಆತ್ಮಾನಂದ ಭಾರತಿ ಸ್ವಾಮಿಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಶಿವಮ್ಮ ಗಾಳೇಪ್ಪ ಪೂಜಾರ ವಹಿಸಿದ್ದರು.

ವೇದಿಕೆಯಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇ,
ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಮಾಜಿ ಜಿಪಂ ಅಧ್ಯಕ್ಷ ಹನಮೇಶ ನಾಯಕ್, ಮಾಜಿ ಅಧ್ಯಕ್ಷ ಎಸ್. ಬಿ ನಾಗರಳ್ಳಿ,
ಜಲಜೀವನ್ ಕೋ ಆರ್ಡಿನೆಟರ್ ಮನು, ಪಿಲ್ಡ್ ಬ್ಯಾಂಕ್ ನ ಸಂಜಯ ಶುಕ್ಲಾ, ಅಪೇಕ್ಷಾ ಭಟ್, ಕೊಪ್ಪಳ ಕಾರ್ಯಪಾಲಕ ಅಭಿಯಂತರ ಮಹೇಶ ಶಾಸ್ತ್ರೀ, ಗಾಳೇಪ್ಪ ಪೂಜಾರ, ಶಿವಪ್ಪಜ್ಜ ಕಾತರಕಿ, ವಿಲಾಸರಾವ್ ಬೋಸ್ಲೆ, ಸದಸ್ಯರಾದ ಮೈಲಾರಪ್ಪ, ಹನುಮಂತಪ್ಪ ಕರೆಕುರಿ, ಗೌರಮ್ಮ, ಲಕ್ಕಮ್ಮ, ಮಾರುತಿ ವಾಲಿಕಾರ ಇನ್ನೀತರರು ಇದ್ದರು.ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಶೇಖರಪ್ಪ ನಿರ್ವಹಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಜಲಜೀವನ್ ಮಿಷಿನ್ ಯೋಜನೆಯಡಿಯಲ್ಲಿ ನಿರ್ಮಿಸಿದ ಕೊಳಾಯಿಗಳಿಗೆ ಚಾಲನೆ ನೀಡಲಾಯಿತು.

About Mallikarjun

Check Also

ಕೂಕನಪಳ್ಳಿಯಲ್ಲಿ ಕುರಿಸಂತೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಪಷ್ಟನೆ

There is no cow in Kookanapalli; MLA Raghavendra Hitnal clarifies ಕೊಪ್ಪಳ ಎಪ್ರಿಲ್ 23 : ತಾಲೂಕಿನ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.