Breaking News

ಅಂಚೆ ಜನ ಸಂಪರ್ಕ ಅಭಿಯಾನಕ್ಕೆ ಅಂಚೆ ನಿಂಗನಗೌಡ್ರುಉದ್ಘಾಟನೆ,

Inauguration of Post Office Ningana Goudru for Post People Contact Campaign,

ಜಾಹೀರಾತು

ಗಂಗಾವತಿ,5, ಭಾರತೀಯ ಅಂಚೆ ಇಲಾಖೆ ಗದಗ್ ವಿಭಾಗ ಹಾಗೂ ಉಪ ವಿಭಾಗ ಗಂಗಾವತಿ ಇವರ ನೇತೃತ್ವದಲ್ಲಿ ಗುರುವಾರದಂದು ಪ್ರಶಾಂತ್ ನಗರದ, ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಆಯೋಜಿಸಲಾಗಿತ್ತು, ಸಮಾರಂಭದ ಉದ್ಘಾಟನೆಯನ್ನು ಗದಗ್ ಅಂಚೆ ವಿಭಾಗದ ನಿಂಗನಗೌಡ ಅಂಚೆ ಅಧಿಕ್ಷಕರು ಜ್ಯೋತಿ ಬೆಳಗಿಸುವುದರ ಮೂಲಕ ಮಾತನಾಡಿ ಭಾರತೀಯ ಅಂಚೆ ಇಲಾಖೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ, ಪ್ರಸ್ತುತ ಸಾರ್ವಜನಿಕರಿಗಾಗಿ ಹಲೋ ಉಪಯುಕ್ತ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಆರ್ಥಿಕ ಭದ್ರತೆಗೆ ನಾಂದಿಯಾಗಿದೆ, ಮನಿ ಆರ್ಡರ್, ಸ್ಪೀಡ್ ಪೋಸ್ಟ್, ಆರ್ ಡಿ ಸೌಲಭ್ಯ, ಎಂಐ ಸಿ ಯೋಜನೆ, ಸೇರಿದಂತೆ ಎಟಿಎಂ ಸೌಲಭ್ಯವನ್ನು ಗ್ರಾಹಕರಿಗೆ ಕಲ್ಪಿಸಲಾಗುತ್ತಿದ್ದು ಇದರ ಸೌಲಭ್ಯವನ್ನು ಪಡೆದುಕೊಳ್ಳುವುದರ ಮೂಲಕ ಆರ್ಥಿಕ ಉಳಿತಾಯಕ್ಕೆ ಗ್ರಾಹಕರು ಮುಂದಾಗಬೇಕೆಂದು ಕರೆ ನೀಡಿದರು,, ಈj ಸಂದರ್ಭದಲ್ಲಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಕೆಸಿ ಕುಲಕರ್ಣಿ ಸೋಮಶೇಖರ ಎಸ್ ಮುದ್ಗಲ್ ಅಂಚೆ ನಿರೀಕ್ಷಕರು ಉಷಾ ಕುಲಕರ್ಣಿ, ಅಂಚೆಪಾಲಕರು ಗಂಗಾವತಿ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಇಂಗಳಗಿ ನಾಗರಾಜ್ ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಅಂಚೆ ಇಲಾಖೆ ಗದಗ್ ಅಧೀಕ್ಷಕರಾದ ನಿಂಗನ ಗೌಡರಿಗೆ ಹಾಗೂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು

About Mallikarjun

Check Also

ಗುರುಪೌರ್ಣಮಿ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ: ಟಿ.ರಾಮಕೃಷ್ಣ

Special religious program on the occasion of Gurupournami: T. Ramakrishna ಗಂಗಾವತಿ, ಜು.08: ಹೊರವಲಯದ ಆನೆಗೊಂದಿ ರಸ್ತೆಯಲ್ಲಿರುವ …

Leave a Reply

Your email address will not be published. Required fields are marked *