
ಬಂಜಾರ ರಾಷ್ಟ್ರೀಯ ಹೋಳಿ ಉತ್ಸವ-೨೦೨೬ ನಿಮಿತ್ಯ ಅದ್ದೂರಿಯಾಗಿ ನಡೆದ ಬಂಜಾರ ಕವಿಗೋಷ್ಠಿ

Banjara Poetry Festival held on the occasion of Banjara National Holi Festival-2026


ಕೊಪ್ಪಳ: ಹೋಳಿ ಹುಣ್ಣಿಮೆಯಂದು ನಡೆಯುವ ಹೋಳಿ ಹಬ್ಬವು ಬಂಜಾರ ಸಮುದಾಯದ ಅತ್ಯಂತ ಪ್ರಮುಖ ಆಚರಣೆಯಾಗಿದೆಎಲ್ಲಾ ತಾಂಡಾಗಳಲ್ಲೂ ಮಹಿಳೆ ಹಾಗೂ ಪುರುಷರು ವಿಶಿಷ್ಟ ಶೈಲಿಯ ಉಡುಪುಗಳನ್ನು ಧರಿಸಿ ಕೋಲುಗಳನ್ನು ಹಿಡಿದು ಬಂಜಾರ ಜಾನಪದ ಹಾಡುಗಳನ್ನು ಹಾಡುತ್ತಾ ವೃತ್ತಾಕಾರದಲ್ಲಿ ನಗಾರಿ ಹಾಗೂ ತಮಟೆಯ ತಾಳಕ್ಕೆ ಕುಣಿದು ಉತ್ಸಾಹದಿಂದ ಆಚರಿಸುತ್ತಾರೆ
ಅದೇರೀತಿ ಕೊಪ್ಪಳದ ಐತಿಹಾಸಿಕ ಬಹಾದ್ದೂರ ಬಂಡೆಯಲ್ಲಿ ಇರುವ ಹಾತಿರಾಮ ಬಾವಾಜಿ ರವರ ಕಟ್ಟೆ ಆವರಣದಲ್ಲಿಮಾ-೩ ರಂದು ಮಹಿಳೆಯರ ಘೋಮರ್ ನೃತ್ಯ ಡೊಡೋ ನಂಗಾರ ನೃತ್ಯ ಪುರುಷರ ಲೆಹಂಗಿ ನೃತ್ಯ ವಾಜಾ-ಭಜನೆ ಅತ್ಯಂತ ಅದ್ಧೂರಿಯಾಗಿ ನಡೆದವು. ಇವರು ತಮ್ಮ ಹಾಡುಗಳಲ್ಲಿ ಹೋಳಿಯ ಹಿನ್ನೆಲೆ ಸಂಪ್ರದಾಯ ಪರಂಪರೆ ಕುರಿತು ಹೇಳುತ್ತಾ ಇಡೀ ರಾತ್ರಿ ಸಂಭ್ರಮಿಸಿ ಬೆಳಗಿನ ಜಾವ ಹೋಳಿ ದಹನ ಮಾಡಿ ಸಂಪನ್ನಗೊಳಿಸಿದರು. ಬಂಜಾರ ಸಮುದಾಯದ ವಿಶಿಷ್ಠ ಭಾಷೆ ಕಲೆ ಸಂಸ್ಕೃತಿ ಪರಂಪರೆ ಹಬ್ಬ ಹರಿದಿನಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋಳಿ ಹುಣ್ಣಿಮೆಯಂದುರಾಷ್ಟ್ರೀಯ ಹೋಳಿ ಉತ್ಸವ-೨೦೨೬ ರ ನಿಮಿತ್ಯ ರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು (ರಿ.) ರಾಜ್ಯ ಘಟಕದ ವತಿಯಿಂದ ಉತ್ಸವದ ವೇದಿಕೆಯಲ್ಲಿ ಬಂಜಾರರ ಸಾಹಿತ್ಯದ ರಾಜ್ಯ ಮಟ್ಟದ ಕವಿಗೋಷ್ಠಿ ರ್ಪಡಿಸಲಾಗಿತ್ತು”
ಈ ಕವಿಗೋಷ್ಠಿಯಲ್ಲಿ ರಾಜ್ಯದ ಮೂಲೆಮೂಲೆಯಿಂದ ಐವತ್ತಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಿದರು ಕರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಂಗಾವತಿಯ ಎಸ್ಆರ್ ಸರೋಜಮ್ಮ ಬಾಲಕಿಯರ ಪದವಿಪರ್ವ ಕಾಲೇಜಿನ ಪ್ರಾಂಶುಪಾಲರಾದ ಇತಿಹಾಸ ಸಂಶೋಧಕರಾದ ಡಾ. ರವಿ ಚವ್ಹಾಣ ರವರು ಮಾತನಾಡಿ ಬಂಜಾರರ ಮೂಲ ಇತಿಹಾಸ ಸಾಹಿತ್ಯ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಕವನಗಳ ಮೂಲಕ ಪ್ರಚುರಪಡಿಸಿದ್ದು ಬಹಳ ಹೆಮ್ಮೆಯ ವಿಷಯ ಸಮುದಾಯದ ಸಂಸ್ಕೃತಿ ಹಾಗೂ ಪರಂಪರೆಯನ್ನು ಸಾಹಿತ್ಯದ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವುದಕ್ಕಾಗಿ ಕವಿಗೋಷ್ಠಿಸಹಕಾರಿಯಾಗಿ ಇಂದಿನ ಯುವ ಪೀಳಿಗೆ ಮೊಬೈಲ್ ಹಾಗೂ ಡಿ.ಜೆ. ಹುಚ್ಚಿನಿಂದ ಹೊರಬಂದು ಉನ್ನತ ವಿದ್ಯಾಭ್ಯಾಸ ಪಡೆದು ಸಾಹಿತ್ಯದ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಲಿಂಗಸುಗೂರಿನ ವಿಜಯ ಮಹಾಂತೇಶ್ವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಕೊಪ್ಪಳದ ಶ್ರೀ ಗುರು ಗೋಸಾವಿ ಬಾವಾನವರು ಆಶರ್ವಚನ ನೀಡಿದರು.ರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀಕಾಂತ ಜಾಧವ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪಾಧ್ಯಕ್ಷರಾದ ಛತ್ರಪ್ಪ ತಂಬೂರಿರವರು ಆಶಯ ನುಡಿಗಳನ್ನು ಹೇಳಿದರು ಯಾದಗಿರಿಯ ಸುರ್ಣಬಾಯಿ ರಾಠೋಡ ಹಾಗೂ ಡಾ. ಮಿಟ್ಯಾ ನಾಯ್ಕ ರವರು ಕರ್ಯಕ್ರಮವನ್ನುನಿರೂಪಿಸಿದರು. ರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪ್ರಕಾಶ ರಾಠೋಡ ತರಲಕಟ್ಟಿ ಹಾಗೂ ಶಿವಾನಂದ ನಾಯ್ಕ ಮುಖ್ಯ ಅಭಿಯಂತರರು ರವರು ಸಾಮಾಜಿಕ ಹಾಗೂ ಶೈಕ್ಷಣಿಕ ಜಾಗೃತಿ ಕುರಿತು ಮಾತನಾಡಿ ವಂದಿಸಿದರು.
ಮಾಹಿತಿಗಾಗಿ ಛತ್ರಪ್ಪ ತಂಬೂರಿ
೨೨: ೯೯೭೨೪೮೭೩೨೦, ೯೪೮೦೭೬೫೭೨೦
ಕರ್ಯಕ್ರಮದಲ್ಲಿ ಬಂಜಾರ ಕವಿಗಳಾದ ಡಾ.ಎಲ್.ಪಿ. ಶಠಾರಿ ನಾಯ್ಕ ಕುಬೇರ ನಾಯ್ಕ ಜ್ಯೋತಿ ಕೃಷ್ಣನಾಯ್ಕ ಬಾಗಲಕೋಟೆ ಮೋತಿಲಾಲ್ ರಾಠೋಡ ಹುಬ್ಬಳ್ಳಿ ಪ್ರವೀಣಕಮಾರ ಹರಪನಹಳ್ಳಿ ಮರ್ತಿ ಎಲ್, ಸುರೇಶ ಕಲಾಪ್ರಿಯ ಲಕ್ಷಣ ನಾಯ್ಕ ಎ.ಐ.ಬಿ.ಎಸ್.ಎಸ್. ವಸಂತ್ ಚವ್ಹಾಣ ವಿಜಯಪುರ ದೀಪಾ ರಾಠೋಡ ಕಾರಟಗಿ ಪುಷ್ಪಾಬಾಯಿ ಹೂವಿನಹಡಗಲಿ ಶಂಕರ ನಾಯ್ಕ ಕುಮಾರ ರಾಠೋಡ ಕೂಪಳಗಡ್ ಬಹಾದ್ದೂರ ಬಂಡಾ ಟ್ರಸ್ಟನ ಅಧ್ಯಕ್ಷರಾದ ಭರತ ನಾಯ್ಕ ಗಂಗಾವತಿಯ ಶಿವಪ್ಪ ಜಾಗೊ ರವಿನಾಯ್ಕ ಚವ್ಹಾಣ, ಪಾಂಡುನಾಯ್ಕ ವೆಂಕಟೇಶ ನಾಯ್ಕ ಹಾಗೂ ಅನೇಕ ಕವಿಗಳು ಹಿರಿಯರು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
