Breaking News

ಗಂಗಾವತಿ:ಅಕ್ರಮವಾಗಿ ಮರಂ ಸಾಗಾಣಿಕೆ ಮಾಡಲು ಹಣ ಪಡೆದು ಡೀಲ್ ಮಾಡಿಕೊಂಡು ೫೦ ಸಾವಿರ ಪಡೆದ ಆರೋಪದಲ್ಲಿತಹಶೀಲ್ದಾರ್ ಮಂಜುನಾಥ ಸ್ವಾಮಿಹಾಗುಖಾಸಗಿಕಂಪ್ಯೂಟರ್ ಆಪರೇಟರ್ ರಾಜುಎಂಬುವರುಲೋಕಾಯುಕ್ತ ಪೋಲೀಸರ ಬಲೆಗೆ

Gangavati: Tehsildar Manjunatha Swamihagukhasagi computer operator Raju was caught by Lokayukta police on the charge of getting 50,000 after making a deal by getting money for illegally transporting maram.

ಗಂಗಾವತಿ: ವೆಂಕಟಗಿರಿ ಭಾಗದಲ್ಲಿ ಮರಂ ಅಕ್ರಮವಾಗಿ ಸಾಗಾಣಿಕೆ ಮಾಡಲು ಹಣ ಪಡೆದು ಡೀಲ್ ಮಾಡಿಕೊಂಡು ೫೦ ಸಾವಿರ ಪಡೆದ ಆರೋಪದಲ್ಲಿ ತಹಶೀಲ್ದಾರ್ ಮಂಜುನಾಥ ಸ್ವಾಮಿ ಭೋಗಾವತಿ ಹಾಗೂ ಖಾಸಗಿ ಕಂಪ್ಯೂಟರ್ ಆಪರೇಟರ್ ರಾಜು ಎಂಬುವರನ್ನು ಲೋಕಾಯುಕ್ತ ಪೋಲೀಸರು ನ.೧೮ರ ಶನಿವಾರ ತಡರಾತ್ರಿ ಬಂಧಿಸಿ ಅವರಿಂದ ಹಣ ಹಾಗೂ ಕೆಲ ದಾಖಲೆ ವಶಕ್ಕೆ ಪಡೆದ ಪ್ರಕರಣ ಶನಿವಾರ ರಾತ್ರಿ ನಡೆದಿದೆ.

ತಾಲೂಕಿನ ವೆಂಕಟಗಿರಿ ಭಾಗದಲ್ಲಿ ಮರಂ(ಕೆಂಪುಮಣ್ಣು) ಸಾಗಾಣಿಕೆ ಮಾಡಲು ವ್ಯಕ್ತಿಯರ‍್ವನಿಂದ ಖಾಸಗಿ ಕಂಪ್ಯೂಟರ್ ಆಪರೇಟರ್ ರಾಜು ಎಂಬ ವ್ಯಕ್ತಿ ಒಂದು ಲಕ್ಷ ರೂ.ಡೀಲ್ ಮಾಡಕೊಂಡು ಇದರಲ್ಲಿ ೫೦ ಸಾವಿರ ರೂ.ಗಳನ್ನು ಪಡೆದು ತಹಶೀಲ್ದಾರ್ ಮಂಜುನಾಥ ಸ್ವಾಮಿ ಭೋಗಾವತಿ ಅವರಿಗೆ ಕೊಡುವ ಸಂರ‍್ಭದಲ್ಲಿ ದೂರುದಾರ ನೀಡಿದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಡಿವೈಎಸ್ಪಿ ಸಲೀಂ ಪಾಷಾ ನೇತೃತ್ವದಲ್ಲಿ ದಾಳಿ ನಡೆಸಿ ಹಣದ ಸಮೇತ ತಹಶೀಲ್ದಾರ್ ಮಂಜುನಾಥ ಸ್ವಾಮಿ ಭೋಗಾವತಿ ಹಾಗೂ ಕಂಪ್ಯೂಟರ್ ಆಪರೇಟರ್ ರಾಜು ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.


About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.