Breaking News

ಇಂದಿರಾಗಾಂಧಿಜನ್ಮದಿನ : ಆಹಾರ ವಿತರಿಸಿ ಸ್ಮರಣೆ

Indira Gandhi Birthday: Distribute food and remember

ಜಾಹೀರಾತು

ಕೊಪ್ಪಳ: ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ 106ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್​ನಿಂದ ಭಾನುವಾರ ನಗರದ ಇಂದಿರಾ ಕ್ಯಾಂಟೀನ್​ ಮುಂಭಾಗದಲ್ಲಿ ಆಚರಿಸಲಾಯಿತು.
ಜಿ.ಪಂ. ಮಾಜಿ ಅಧ್ಯಕ್ಷ ರಾಜಶೇಖರ್​ ಹಿಟ್ನಾಳ ಮಾತನಾಡಿ, ಇಂದಿರಾ ಅವರು ದೇಶ ಕಂಡ ಅದ್ಭುತ ಪ್ರಧಾನಿ. ಅನೇಕ ಮಹತ್ತರ ನಿರ್ಧಾರ ಕೈಗೊಳ್ಳುವ ಮೂಲಕ ದೇಶವನ್ನು ಮುನ್ನಡೆಸಿದವರು. ಇಂದಿನ ಅನೇಕ ಮಹಿಳೆಯರಿಗೆ ಅವರು ಮಾದರಿ ಎಂದರು.
ಜಿಲ್ಲಾ ಕಾಂಗ್ರೆಸ್​ ಮಹಿಳಾ ಅಧ್ಯಕ್ಷೆ ಮಾಲತಿ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್​ ಪಾಷಾ ಪಲ್ಟನ್​, ಸದಸ್ಯರಾದ ಅರುಣ ಅಪ್ಪುಶೆಟ್ಟಿ, ಅಜೀಮ್​ ಅತ್ತಾರ, ವಿರುಪಾಕ್ಷಪ್ಪ ಮೋರನಾಳ, ಪಕ್ಷದ ಪ್ರಮುಖರಾದ ಕಿಶೋರಿ ಬೂದನೂರ, ರವಿ ಕುರಗೋಡ, ಮಹಿಳಾ ಬ್ಲಾಕ್ ಅಧ್ಯಕ್ಷೆ ರೇಷ್ಮಾ ಖಾಜಾವಲಿ, ನಗರ ಅಧ್ಯಕ್ಷೆ ಸವಿತಾ ಗೋರಂಟ್ಲಿ, ಗವಿಸಿದ್ದಪ್ಪ ಚಿನ್ನೂರ, ಸುಮಂಗಲಾ ನಾಯಕ, ಸೌಭಾಗ್ಯ ಗೊರವರ್, ಪದ್ಮಾ ಬಸ್ತಿ, ಉಮಾ ಪಾಟೀಲ್, ಕಾವೇರಿ ರಾಗಿ, ಯುವ ಕಾಂಗ್ರೆಸ್ ಅಧ್ಯಕ್ಷ ಗವಿಸಿದ್ದನಗೌಡ, ಶ್ರೀನಿವಾಸ್ ಪಂಡಿತ್, ಎನ್.ಎಸ್.ಯು.ವೈ ಹನುಮೇಶ್ ಬೆಣ್ಣಿ ಇತರರಿದ್ದರು.

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.