

Savalagi sizzling ganja in the hobli

ಸಾವಳಗಿ: ಸಾವಳಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಕಾನೂನ ಬಾಹಿರ ಚಟುವಟಿಕೆಗಳು. ರಾಜಾರೋಷವಾಗಿ ಕಾನೂನು ಕಣ್ಣಿಗೆ ಮಣ್ಣೇರಚಿ ಸಾಮಾನ್ಯ ಜನರ ಬದುಕು ಹಾಳುಗುತ್ತಿದ್ದರು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಾವಳಗಿ ಹೋಬಳಿಯಲ್ಲಿ ಮುಗ್ದ ವಿದ್ಯಾರ್ಥಿಗಳ ಗಾಂಜಾ, ಕಳ್ಳಬಟ್ಟಿ ಸಾರಾಯಿ ಹಾಗೂ ಶೇಂದಿ ಸೇವನೆಯಿಂದ ಬೆಳಗ್ಗಿನಿಂದ ಸಂಜೆಯವರೆಗೆ ನಶೆಯ ಅಮಲಿನಲ್ಲಿ ತೇಲಾಡುತ್ತಿದ್ದು. ಇದರಿಂದ ಅವರ ಅಮೂಲ್ಯವಾದ ಭವಿಷ್ಯ ಹಾಳಾಗುತ್ತಿದೆ ಎಂಬ ಪರಿಜ್ಞಾನವೂ ಅವರಿಗೆ ಇಲ್ಲದಂತೆ ದುಶ್ಚಟಗಳ ದಾಸರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಯಾರು ಹಾಳಾದರೇ ನಮಗೇನು ನಮ್ಮ ಹಪ್ತಾ ಸರಿಯಾದ ಸಮಯಕ್ಕೆ ಸೇರಿದರೇ ಸಾಕು ಎಂಬಂತೆ ದುಷ್ಟರ ಕೈ ಬಿಟ್ಟು ಕುಳತಿರುವು ವಿಪರ್ಯಾಸ ಸಂಗತಿ.
ಸಾವಳಗಿ ವಲಯದಲ್ಲಿ ಸಮಾಜ ಘಾತುಕರು ಮುಗ್ಧ ಜನರನ್ನು ಬಲಿ ಕೋಡುವ ಹಾಗೂ ನೇಣಿಗೆ ಶರಣಾಗುವಂತೆ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಮಟ್ಕಾ, ಜೂಜಾಟ, ಅಫೀಮು ಮಿಶ್ರಿತ ಮಾವಾ, ಕಳ್ಳ ಬಟ್ಟಿ ಮಿಶ್ರಿತ ಶಿಂಧಿ ಹಾಗೂ ಗಾಂಜಾ ತುಂಬಿದ ಸೀಗರೇಟ ಸಾವಳಗಿ ಪಟ್ಟಣವನ್ನು ಒಳಗೊಂಡಂತೆ ಎಲ್ಲಾ ಹಳ್ಳಿಗಳಲ್ಲಿ ಈ ಅಕ್ರಮ ದಂಧೆಗಳು ರಾಜಾರೋಷವಾಗಿ ಹಗಲು ಹೊತ್ತಿನಲ್ಲಿಯೇ ಎಗ್ಗಿಲ್ಲದೇ ನಡೆಯುತ್ತಿದೆ. ಇದನ್ನು ಸೇವನೆಯ ಮಾಡಿದ ಯುವ ಜನನಾಂಗದ ಪುಂಡಾಟಿಕೆಯು ಹೆಚ್ಚಾಗುತ್ತಿದೆ ಇದರಿಂದ ಸಾವಳಗಿ ಶಾಂತಾ ವಾತಾವರಣದ ಹಾಳಾಗುತ್ತಿದೆ. ಈ ಎಲ್ಲಾ ಅಕ್ರಮ ದಂಧೆಗಳಿಂದ ಎಜೆಂಟರ ಮೂಲಕ ಅಧಿಕಾರಿಗಳಿಗೆ ಲಕ್ಷಾಂತರ ರೂಪಾಯಿ ಲಂಚ ತಲುತ್ತಿದೆ ಇದರಿಂದ ಸಮಾಜದ ಸ್ವಾಶ್ಯ ಹಾಳಾಗುತ್ತಿದೆ. ಮುಗ್ಧ ಜನರ ಜೀವನದ ಜೊತೆ ಚೆಲ್ಲಾಟ ನಡರದರು ಯಾವ ಒಬ್ಬ ಅಧಿಕಾರಿಗಳು ಇಂತಹ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಯಾವ ಒಬ್ಬ ಅಧಿಕಾರಿಯು ಮುಂದು ಬರದೆಯಿರುವದರಿಂದ ಸಾವಳಗಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಮಾಜದ ಸ್ವಾಶ್ಯ ಹಾಳಾಗಿ ಮುದ್ಗ ಜನರು ಭಯದ ಹಾಗೂ ಆಂತಕದ ವಾತಾವರಣದಲ್ಲಿ ಬದುಕುವಂತಾಗಿದೆ.
ಈ ವಲಯದಲ್ಲಿರುವ ಅಧಿಕಾರಿಗಳನ್ನು ಮೇಲಿನ ನಂಬಿಕೆಯನ್ನು ಕಳೆದುಕೊಂಡ ಜನರು ಇಂದಲ್ಲಾ ನಾಳೆ ಈ ಸಮಾಜ ಘಾತುಕ ಹಾಗೂ ಅಕ್ರಮ ದಂಧೆಗಳು ನಿಲ್ಲಬಹುದೆಂದು ಅಸಾಹಯಕ ಸ್ಥಿತಿಯಲ್ಲಿ ಜನರು ಬದುಕುತ್ತಿದ್ದಾರೆ. ಜನರು ಅಸಹಾಯಕರೆಂದು ತಿಳಿದುಕೊಂಡಿದ್ದರೆ ಅದು ಅಧಿಕಾರಿಗಳ ಮೂರ್ಖತನ ಮುಗ್ದ ಜನರು ಬೀದಿಗಿಳಿದು ಹೋರಾಟ ಮಾಡುವ ಮುನ್ನ ಜಿಲ್ಲಾಡಳಿತವು ಭ್ರಷ್ಟ ಅಧಿಕಾರಗಳ ಹಾಗೂ ಸಮಾಜ ಘಾತುಕ ಚಟುವಟಿಕೆಗಳನ್ನು ನಡೆಸುತ್ತಿರುವ ದುಷ್ಟರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೋಳ್ಳಲು ಹಾಗೂ ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೋಳಿಸುವಂತೆ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ರಾಜ್ಯ ಸಂಚಾಲಕರಾದ ರಾಜು ಮೇಲಿನಕೇರಿ ಜಿಲ್ಲಾಡಳಿತ ಆಡಳಿತಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.
I need to to thank you for this very good read!! I absolutely enjoyed every bit of it. I have got you book-marked to check out new stuff you postÖ