ವಿಷಯಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು

H.Mallikarjun
H.Mallikarjun - Kalyanasiri
3 Min Read
ಜಾಹೀರಾತು
Legal awareness campaign as part of International Workers' Day




ವಿಷಯಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು

ಜಾಹೀರಾತು


  ಕೊಪ್ಪಳ: ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ದಿನಾಂಕ: ೦೨-೦೫-೨೦೨೬ ರಂದು ಕೊಪ್ಪಳ ತಾಲ್ಲೂಕಿನ ಶ್ರೀ ಆಂಜನೇಯ ದೇವಸ್ಥಾನ, ಹೂವಿನಾಳದಲ್ಲಿ ಹಮ್ಮಿಕೊಳ್ಳಲಾಯಿತು.

ಸದರಿ ಕಾರ್ಯಕ್ರಮವನ್ನು ಗೌರವಾನ್ವಿತ ಸನ್ಮಾನ್ಯ ಶ್ರೀ ಮಹಾಂತೇಶ ಎಸ್ ದರಗದ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೊಪ್ಪಳ ರವರು ಉದ್ಘಾಟಿಸಿ, ಉದ್ಘಾಟನಾ ಭಾಷಣ ನೆರವೇರಿಸಿದರು. ಅಂತರಾಷ್ಟೀಯ ಕಾರ್ಮಿಕ ದಿನ ಎನ್ನುವ ಬದಲು ಶ್ರಮಯೋಗಿ ದಿನ ಎಂದು ಕರೆಯುವುದು ಹೆಚ್ಚು ಸೂಕ್ತ, ಹಿಂದೆ ಶರಣಾಧಿ ಪ್ರಮಥರು ವಾಣಿಗಳಂತೆ ಕಾಯಕದ ಮಹತ್ವವನ್ನು ಬಸವಣ್ಣನವರು ಕಾಯಕವೇ ಕೈಲಾಸ ಎಂದು ನುಡಿದು ಕಾಯಕದ ಮಹತ್ವವನ್ನುö್ನ ಸಾರಿದ್ದಾರೆ. ಅದೇರೀತಿ ಡಾ: ಬಿ.ಆರ್.ಅಂಬೇಡ್ಕರ್ ರವರು ನೀನು ಅಧ್ಯಕ್ಷನಾಗಿರು, ಚಮ್ಮಾರನಾಗಿರು, ಕಮ್ಮಾನಾಗಿರು, ಎನೇ ಆಗಿದ್ದರೂ ಮೊದಲು ಶ್ರಮಯೋಗಿ ಆಗಿ ಕೆಲಸಗಾರನಾಗು, ಕಾರ್ಮಿಕನಾಗಿರು ಎಂದು ಹೇಳಿದ್ದಾರೆ. ಹಾಗಾಗಿ ಶ್ರಮಿಕವರ್ಗ ದೇಶದ ಅಭಿವೃದ್ಧಿ ಉನ್ನತಿಗೆ ಮುನ್ನುಡಿ ಎಂದರು. ಹಾಗಾಗಿ ಕಾರ್ಮಿಕರನ್ನು ಶ್ರಮಯೋಗಿಗಳನ್ನು ಸನ್ಮಾನಿಸಿದರು. ಈ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರಮೇಶ ಘೋರ್ಪಡೆ (ಅಧ್ಯಕ್ಷರು, ಕಲ್ಯಾಣ ಕರ್ನಾಟಕ ಜಿಲ್ಲೆಗಳ ನೋಂದಾಯಿತ ಕಾರ್ಮಿಕ ಸಂಘಗಳ ಒಕ್ಕೂಟ.): ಸದರಿಯವರು ಮಾತನಾಡುತ್ತಾ ಇಲಾಖೆಯಿಂದ ನಮ್ಮ ಕಾರ್ಮಿಕರಿಗೆ ಒಳ್ಳೆಯ ೨ನೇ ಪುಟಕ್ಕೆ . . .

ಸೌಲಭ್ಯಗಳನ್ನು ಕಾರ್ಮಿಕ ಇಲಾಖೆಯಿಂದ ನೀಡುತ್ತಾ ಬಂದಿದ್ದಾರೆ. ನಮ್ಮ ಕಾರ್ಮಿಕರು ಉತ್ತಮ ಜೀವನ
ಕಟ್ಟಿಕೊಳ್ಳಲು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಮಂಜುಳಾ ವಿಶ್ವನಾಥ ರವರು ಮಾತನಾಡಿ ಪಾಶ್ಚಿಮಾತ್ಯ ದೇಶಗಳಲ್ಲಿ ಕಾರ್ಮಿಕರ ದಂಗೆಗಳು ೧೮೮೩ ರಲ್ಲಿ ಪ್ರಾರಂಭವಾದವು, ಚಿಕ್ಯಾಗೋದಲ್ಲಿ ಕಾರ್ಮಿಕ ಸಂಘಟನೆಗಳು ಹೋರಾಟವನ್ನು ಕೆಲಸದ ಅವಧಿ ನಿರ್ಧರಿಸುವ ಸಲುವಾಗಿ ಮತ್ತು ಅನೇಕ ಶೋಷಣೆಗಳ ವಿರುದ್ಧ ಪ್ರಾರಂಭಿಸಿದರು. ೧೮೮೬ ರಲ್ಲಿ ೮ ಗಂಟೆಗಳ ಕೆಲಸದ ಅವಧಿಯನ್ನು ನಿರ್ಣಯಿಸಲಾದ ಪ್ರಯುಕ್ತ ಮೇ ೧ ರ ೧೮೮೬ ರಿಂದ ಜಾಗತಿಕ ಮಟ್ಟದಲ್ಲಿ ಅಂತರಾಷ್ಟಿçÃಯ ಕಾರ್ಮಿಕ ದಿನವನ್ನು ಆಚರಣೆ ಮಾಡುತ್ತಾ ಬದಲಾಯಿತು. ಭಾರತದಲ್ಲಿ ೧೯೩೭ ರಲ್ಲಿ ಚೆನ್ನೆöÊನಲ್ಲಿ ಕಾರ್ಮಿಕ ಸಂಘಟನೆಗಳು ಹೋರಾಟದ ನೆನಪಿಗಾಗಿ ಭಾರತದಲ್ಲಿಯೂ ಕೂಡಾ ಕಾರ್ಮಿಕ ದಿನ ಆಚರಿಸುತ್ತಾ ಬರಲಾಯಿತು. ಈ ದಿನದಂದು ಕಾರ್ಮಿಕರ ಕುರಿತು ಕಾರ್ಯನಿರ್ವಹಿಸಿದ ಕಾರ್ಮಿಕ ಪ್ರತಿನಿಧಿ ಸಂಘಟನೆಗಳು, ಸಂಘಸAಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲು ಆಚರಿಸುತ್ತಾ ಬರುತ್ತಿದೆ ಎಂದು ಈ ದಿನ ಇತಿಹಾಸ ತಿಳಿಸುತ್ತಾ ಮುಂದುವರೆದು, ಕಾರ್ಮಿಕ ಇಲಾಖೆಯಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಡಿ ಕಟ್ಟಡಕ್ಕೆ ಸಂಬAಧಿಸಿದAತೆ ಕೆಲಸ ನಿರ್ವಹಿಸುತ್ತಿರುವವರು ನೋಂದಣಿಯಾಗಲು, ನೋಂದಣಿ ಪೂರ್ವದ ೧೨ ತಿಂಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ ೯೦ ದಿನಗಳು ಕೆಲಸ ನಿರ್ವಹಿಸಿರಬೇಕು, ೧೮ ರಿಂದ ೬೦ ವರ್ಷದೊಳಗಿರಬೇಕು. ಉದ್ಯೋಗ ದೃಢೀಕರಣ ಪತ್ರ ಅರ್ಜಿದಾರ ಹಾಗೂ ಅವಲಂಬಿತರ ಆಧಾರ ಕಾರ್ಡ್ ಪ್ರತಿ, ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್ ಪ್ರತಿ, ಅರ್ಜಿದಾರರ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ದೂರವಾಣಿ ಸಂಖ್ಯೆ, ಹೊಂದಿರಬೇಕೆAದು ತಿಳಿಸಿದರು ಹಾಗೂ ಮಂಡಳಿಯ ವತಿಯಿಂದ ನೋಂದಾಯಿತ ಫಲಾನುಭವಿಗಳಿಗೆ ನೀಡಲಾಗುವ ಸೌಲಭ್ಯಗಳಾದ, ಮದುವೆ ಧನಸಹಾಯ, ಹೆರಿಗೆ ಧನಸಹಾಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಧನಸಹಾಯ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ಸಹಾಯಧನ, ತಾಯಿ ಮಗು ಸಹಾಯ ಹಸ್ತ, ಪಿಂಚಣಿ ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ. ಈ ಸೌಲಭ್ಯಗಳನ್ನು ಪಡೆಯಲು ಫಲಾನುಭವಿಗಳು ಕಾಲ ಕಾಲಕ್ಕೆ ಗುರುತಿನ ಚೀಟಯ ನವೀಕರಣವನ್ನು ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು ಹಾಗೂ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿ ಅಡಿ ಸಿಗುವ ಸೌಲಭ್ಯಗಳ ಕುರಿತು ತಿಳಿಸಿದರು. ೩ನೇ ಪುಟಕ್ಕೆ . . .

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಬಸವರಾಜ ಹಿರೇಗೌಡ್ರ, ಯೋಜನಾ ನಿರ್ದೇಶಕರು, ಹೇಮಂತ್‌ಸಿAಗ್, ಕ್ಷೇತ್ರ ನಿರ್ವಾಹಕರು, ಮಹಿಬೂಬ ಮಣ್ಣೂರ, ಕಾರ್ಮಿಕ ಸಂಘದ ಅಧ್ಯಕ್ಷರು, ಬಹದ್ದೂರ ಬಂಡಿ, ಇಂದ್ರಾನಾಯಕ ಅಧ್ಯಕ್ಷರು, ಕಟ್ಟಡ ಕಾರ್ಮಿಕ ಸಂಘ, ಹೂವಿನಾಳ, ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು, ಕಾರ್ಮಿಕರು ಹಾಜರಿದ್ದರು.

Total Views: 0
Share This Article