
Talakal ITI: Application Invitation for Admission
ತಳಕಲ್ ಐಟಿಐ: ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೊಪ್ಪಳ ಏಪ್ರಿಲ್ 29 (ಕರ್ನಾಟಕ ವಾರ್ತೆ): ತಳಕಲ್‌ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2026-27 ನೇ ಸಾಲಿನ ವಿವಿಧ ವೃತ್ತಿಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ವಿದ್ಯುತ್ ಶಿಲ್ಪಿ, ವಿದ್ಯುನ್ಮಾನ ದುರಸ್ತಿಗಾರ, ಜೋಡಣೆಗಾರ, ಉದ್ಯೋಗ ಯೋಜನೆ ಅಡಿಯಲ್ಲಿ ಅಡ್ವಾನ್ಸ್ಡ್ ಸಿ.ಎನ್.ಸಿ. ಮಷಿನಿಂಗ್ ಟೆಕ್ನಿಷಿಯನ್, ಮೆಕ್ಯಾನಿಕ್ ಏಲೆಕ್ಟಿçಕ್ ವೆಹಿಕಲ್, ಬೇಸಿಕ್ ಡಿಸೈನರ್ ಮತ್ತು ವರ್ಚುವಲ್ ವೆರಿಫೈಯರ್, ಆರ್ಟಿಸಾನ್ ಯೂಸಿಂಗ್ ಅಡ್ವಾನ್ಸ ಟೂಲ್, ಮ್ಯಾನುಫೆಕ್ಟರಿಂಗ್ ಪ್ರೊಸೆಸ್ ಕಂಟ್ರೋಲ್ ಮತ್ತು ಆಟೋಮೆಷನ್ ಇಂಡಷ್ಟಿçಯಲ್ ರೋಬೊಟಿಕ್ಸ್ ಮತ್ತು ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಿಷಿಯನ್ ವೃತ್ತಿಗಳಲ್ಲಿ ಸೀಟುಗಳು ಲಭ್ಯವಿರುತ್ತವೆ.
ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಆಸಕ್ತ ಅಭ್ಯರ್ಥಿಗಳು ಮೇ 8 ರೊಳಗೆ ವೆಬ್‌ಸೈಟ್: www.cite.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅಥವಾ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಆಗಮಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪಿ.ಪಿ.ಪಿ ಅಡಿಯಲ್ಲಿ ಮೇಲೆ ತಿಳಿಸಿದ ಪ್ರತಿ ವೃತ್ತಿಗಳಿಗೆ 4 ಸೀಟುಗಳಂತೆ ನೇರವಾಗಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕವನ್ನು ಭರಿಸಿ ಪ್ರವೇಶ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಯಲ್ಲಪ್ಪ: 9902850748, ಹಿರೇಮಠ: 9902852362, ಪಂಪಾಪತಿ: 9538991007, ಮೊಹಮ್ಮದ ರಫಿ: 9741744109, ನೂರಬಾಷಾ: 8217063363, ಮಲ್ಲಿಕಾರ್ಜುನಪ್ಪ: 8147811887 ಇವರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
