Gana Kogile' Award for Pampapathi Ingalagi

ಪಂಪಾಪತಿ ಇಂಗಳಗಿಗೆ ಗಾನಕೋಗಿಲೆ ಪ್ರಶಸ್ತಿ

ಗಂಗಾವತಿ: ಪರಿಸರ ಸೇವಾ ಟ್ರಸ್ಟ್ ಹಾಗು ಹಿರೇಬೆಣಕಲ್ ಮೊರೇರ ಸಾಂಸ್ಕೃತಿಕ ಪ್ರತಿಷ್ಠಾನ ಗಂಗಾವತಿ ಸಹಯೋಗದೊಂದಿಗೆ ನಗರದ ಐಎಂಎ ಹಾಲ್‌ನಲ್ಲಿ ಜರುಗಿದ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಹಲವು ದಶಕಗಳಿಂದ ಗಾಯಕನಾಗಿ ಸೇವೆ ಸಲ್ಲಿಸುತ್ತಿರುವ ವಿಐಪಿ ಮೆಲೋಡಿಸ್ ಮಾಲಿಕರು, ಗಾಯಕರು ಆದ ಪಂಪಾಪತಿ ಇಂಗಳಗಿ ಇವರಿಗೆ ರಾಜ್ಯ ಮಟ್ಟದ ಕನ್ನಡ ಗಾನ ಕೋಗಿಲೆ ೨೦೨೬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಲವಾರು ವರ್ಷಗಳಿಂದಲೂ ಉತ್ತರ ಕರ್ನಾಟಕದಾದ್ಯಂತ ಬಿಡುವಿಲ್ಲದ ಸಂಗೀತ ಸಂಜೆಯ ಮೂಲಕ ಜನಮನಸೂರೆಗೊಂಡಿರುವ ಪಂಪಾಪತಿಯವರು, ಕಟ್ಟಡ ಕಾರ್ಮಿಕರ ಸಂಘನೆಯೊAದಿಗೆ ಬೆಸೆದುಕೊಂಡು ಕಾರ್ಮಿಕರ ಸೇವೆಯನ್ನು ಮಾಡುತ್ತಿದ್ದಾರೆ. ಅತ್ಯುತ್ತಮ ಧ್ವನಿವರ್ಧಕ ಗುಣಮಟ್ಟದ ಕಾರ್ಯಕ್ರಮಕ್ಕೆ ಹೆಸರುವಾಸಿಯಾಗಿರುವ ಇವರು, ಅತಿ ಕಡಿಮೆ ಅವಧಿಯಲ್ಲಿ ಅತ್ಯಂತ ಜನಪ್ರೀಯ ಗಾಯಕರಾಗಿ ಹೊರಹೊಮ್ಮಿರುವುದು ಸೋಜಿಗದ ಸಂಗತಿ. ಪರಿಸರ ಸೇವಾ ಟ್ರಸ್ಟ್ ಇವರನ್ನು ಗುರುತಿಸಿ ಇತ್ತೀಚಿಗೆ ಪ್ರಶಸ್ತಿ ಪ್ರದಾನ ಮಾಡಿತು. ಈ ಸಂದರ್ಭದಲ್ಲಿ ಹೆಸರಾಂತ ಹಾಸ್ಯ ಭಾಷಣಕಾರ ಬಿ.ಪ್ರಾಣೇಶ್, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಶಿವರಾಮಗೌಡ, ಪರಣ್ಣ ಮುನವಳ್ಳಿ, ರಾಜಮಾತೆ ಲಲಿತಾ ರಾಣಿ ಶ್ರೀರಂಗದೇವರಾಯಲು, ಶ್ರೀ ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ಹಾಗು ಪ್ರತಿಷ್ಠಾನ ಅಧ್ಯಕ್ಷ ಮಂಜುನಾಥ ಗುಡ್ಲಾನೂರು ಇತರರಿದ್ದರು.
