
It is our fortune to celebrate the birth anniversary of the great man: MLA MR Manjunath.
ಮಹಾನಿಯರ ಜಯಂತಿಯನ್ನು ಆಚರಿಸುವುದೆ ನಮ್ಮ ಅದೃಷ್ಟ : ಶಾಸಕ ಎಮ್ ಆರ್ ಮಂಜುನಾಥ್ .


ವರದಿ: ಬಂಗಾರಪ್ಪ ,ಸಿ.
ಹನೂರು :ಕಾಲಜ್ಞಾನಿಗಳಾದ ಶ್ರೀ ಯೋಗಿ ನಾರಾಯಣ ಯತೀಂದ್ರರವರ ಜಯಂತಿಯನ್ನು ನಾಡಿನಾದ್ಯಂತ ಸರ್ಕಾರ ಹಾಗೂ ಎಲ್ಲಾ ಜನಾಂಗದವರು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿರುವುದು ನಮ್ಮೇಲ್ಲರಿಗೂ ಹೆಮ್ಮೇಯ ವಿಷಯ ,ಎಲ್ಲಾ ಸಮುದಾಯಗಳಿಗೂ ಗುರುಗಳಿದ್ದಾರೆ , ಅವರುಗಳನ್ನು ಅನುಸರಿಸುವ ಕಾರ್ಯವನ್ನು ಆಯಾ ಸಮುದಾಯದವರು ಮಾಡಿದರೆ ಸಮಾಜವು ಉತ್ತಮ ರೀತಿಯಲ್ಲಿ ಸಾಗುತ್ತದೆ ಎಂದರು.
ಹನೂರು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯವತಿಯಿಂದ ಹನೂರು ತಾಲ್ಲೂಕು ಕೇಂದ್ರದ ಲೋಕೋಪಯೋಗಿ ಇಲಾಖೆಯಲ್ಲಿನ ವಸತಿಗೃಹದಲ್ಲಿ ಮಾತನಾಡಿದ ಶಾಸಕರು ಗುರುಗಳು ಕಾಲ ಜ್ಞಾನದ ಮಾತು ಇಂದು ಅಕ್ಷರಶಃ ನಿಜವಾಗಿದೆ ನಿಮ್ಮ ಜನಾಂಗಕ್ಕೆ ಜಾತಿ ಪ್ರಮಾಣಪತ್ರದಿಂದ ಬಹು ದೊಡ್ಡ ಅನ್ಯಾಯವಾಗುತ್ತದೆ , ಮುಂದಿನ ದಿನಗಳಲ್ಲಿ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಹಾಗೂ ಶಾಸಕರ ಅನುದಾನದಲ್ಲಿ ಐವತ್ತು ಲಕ್ಷ ಹಣವನ್ನು ನೀಡಲಾಗುವುದು,ಎಲ್ಲಾ ಗ್ರಾಮಗಳಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು,ನಮ್ಮ ಭಾಗದ ಜಮೀನುಗಳಿಗೆ ನೀರು ಹರಿಸಲು ಪ್ರಯತ್ನ ಮಾಡಲಾಗುವುದು,
ಮುಖ್ಯ ಭಾಷಣಕಾರರಾದ ಬಣಜಿಗ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಗೋಪಾಲ್ ಮಾತನಾಡಿ ಕೈವಾರ ತಾತಯ್ಯ ರವರು ಕಾಲಜ್ಞಾನಿಯಾಗಿದ್ದವರು ,ಮುಂದಿನ ದಿನಗಳಲ್ಲಿ ನಡೆಯುವ ಸನ್ನಿವೇಶಗಳನ್ನು ಸವಿಸ್ತಾರವಾಗಿ ಬರೆದಿದ್ದಾರೆ ಅವರ ದೂರ ದೃಷ್ಟಿಗೆ ಪ್ರಪಂಚದಲ್ಲಿ ಹೆಚ್ಚುತಿರುವ ಜನಸಂಖ್ಯೆಯ ಸಂಖ್ಯೆಯು ಕಾರಣವಾಗಿದೆ ಅಲ್ಲದೆ ನಮ್ಮ ಮುಂದಿನ ಪೀಳಿಗೆಗೆ ಬೇಕಾದ ಜ್ಞಾನ ಕೋಶವನ್ನು ಸಹ ಬರೆದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಯುತ ಗೋಪಾಲ್ ರವರು ಶ್ರೀ ಯೋಗಿ ನಾರೇಯೆಣ ರವರ ಭಾವ ಚಿತ್ರವನ್ನು ಶಾಸಕರು,ಮತ್ತು ತಹಸಿಲ್ದಾರ್ ಚೈತ್ರ ರವರು ಹಾಗೂ ಇನ್ನಿತರರ ಜೋತೆಯಲ್ಲಿ ಅನಾವರಣ ಮಾಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಇ ರಂಗಸ್ವಾಮಿ ಮಾತನಾಡಿ ರವರು ಮುಂದಿನ ದಿನಗಳಲ್ಲಿ ಹನೂರು ಕ್ಷೇತ್ರದಲ್ಲಿ ವಿಶೇಷವಾಗಿ ರೈತರ ಹಿತದೃಷ್ಟಿಯಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ತಹಸಿಲ್ದಾರ್ ಶ್ರೀ ಮತಿ ಚೈತ್ರ, ಎಇ ರಂಗಸ್ವಾಮಿ , ಅಗ್ನಿ ಶಾಮಕ ಠಾಣೆಯ ಅಧಿಕಾರಿಗಳಾದ ಮಹೇಶ್ ,ಚನ್ನಪ್ಪಶೆಟ್ಟಿ, ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ರಾದ ರಂಗಸ್ವಾಮಿ ಶಿಕ್ಷಕರಾದ ಮಹೇಶ್,ಮಾದೇಶ್ , ರೈತ ಸಂಘದ ಅಧ್ಯಕ್ಷರಾದ ಹರೀಶ್ , ಶ್ರೀರಂಗಶೇಟ್ರು ,ಪ್ರಕಾಶ್ ,ಮಂಜು ,ಆರ್ ರಂಗಶೇಟ್ಟಿ ,ಜೈರಾಮ್ , ಬಸವರಾಜು,ಮುನಿಸ್ವಾಮಿ ,ಪ್ರಸನ್ನ ,ಚಂದ್ರ ,ನಾಗ,ಶಿವಣ್ಣ, ವಿಜಯಕುಮಾರ್ ,ವೆಂಕಟಾಚಲ,ಬಸವರಾಜು , ಸೇರಿದಂತೆ ಇನ್ನಿತರರು ಹಾಜರಿದ್ದರು ,
