ಪ್ರಥಮ ಪ್ರಯತ್ನದಲ್ಲೇ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ: ಸಂತೋಷ್ ಬೆಳಗೋಡ್‌ಗೆ ಗಂಗಾವತಿಯಲ್ಲಿ ಭವ್ಯ ಸನ್ಮಾನ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Selected as a civil judge in the first attempt: Santosh Belagode receives grand honours at Gangavathi




ಪ್ರಥಮ ಪ್ರಯತ್ನದಲ್ಲೇ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ: ಸಂತೋಷ್ ಬೆಳಗೋಡ್‌ಗೆ ಗಂಗಾವತಿಯಲ್ಲಿ ಭವ್ಯ ಸನ್ಮಾನ

ಜಾಹೀರಾತು

ಗಂಗಾವತಿ: ಕರ್ನಾಟಕ ಉಚ್ಚ ನ್ಯಾಯಾಲಯ ನಡೆಸಿದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಸಂತೋಷ್ ಬೆಳಗೋಡ್ ಅವರನ್ನು ಗಂಗಾವತಿ ತಾಲೂಕ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಗೌರವಿಸಲಾಯಿತು.

ಗಂಗಾವತಿ ತಾಲೂಕ ಸರ್ಕಾರಿ ಪಡಿತರ ವಿತರಕರ ಸಂಘದ ಕೋಶ ಅಧ್ಯಕ್ಷರಾದ ಶ್ರೀ ರಾಜಶೇಖರ್ ಬೆಳಗೋಡ್ ಅವರ ಹಿರಿಯ ಸಹೋದರರಾದ ಬಸವರಾಜ್ ಬೆಳಗೋಡ್ ಅವರ ಪುತ್ರ ಸಂತೋಷ್ ಬೆಳಗೋಡ್ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿರುವುದು ತಾಲೂಕಿನ ಹೆಮ್ಮೆಯ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಸಂತೋಷ್ ಬೆಳಗೋಡ್ ಅವರ ಸ್ವಗ್ರಾಮ ಚಿಕ್ಕಜಾಂತಕಲ್‌ನ ನಿವಾಸಕ್ಕೆ ಭೇಟಿ ನೀಡಿ, ಶುಭಾಶಯ ಕೋರಿದರು ಹಾಗೂ ಸನ್ಮಾನಿಸಿ ಗೌರವಿಸಿದರು.

ಸಂಘದ ಅಧ್ಯಕ್ಷರಾದ ಕೆ. ಮಂಜುನಾಥ್ ಮಾತನಾಡಿ, “ಸಂತೋಷ್ ಬೆಳಗೋಡ್ ಅವರು ಕಿರಿಯ ವಯಸ್ಸಿನಲ್ಲಿ ನ್ಯಾಯಾಂಗದ ಅತೀ ಗೌರವಾನ್ವಿತ ಹುದ್ದೆಯಾದ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಅನೇಕ ಕಿರಿಯ ವಕೀಲರಿಗೆ ಮಾದರಿಯಾಗಿದೆ. ಅವರು ನ್ಯಾಯದಾನದ ವ್ಯವಸ್ಥೆಯಲ್ಲಿ ಶೋಷಿತ, ಹಿಂದುಳಿದ ಹಾಗೂ ಬಡ ಜನರಿಗೆ ನ್ಯಾಯ ಒದಗಿಸುವ ಕಾರ್ಯದಲ್ಲಿ ತೊಡಗಿ, ಭವಿಷ್ಯದಲ್ಲಿ ಇನ್ನೂ ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಟಿ.ಎಂ. ಚನ್ನಬಸವ ಶಾಸ್ತ್ರಿ, ಅಧ್ಯಕ್ಷರಾದ ಕೆ. ಮಂಜುನಾಥ್, ಸಹ ಕಾರ್ಯದರ್ಶಿ ಹೆಚ್. ವೀರಭದ್ರಪ್ಪ, ಕೋಶ ಅಧ್ಯಕ್ಷರಾದ ರಾಜಶೇಖರ್ ಬೆಳಗೋಡ್, ಹಾಗೂ ಪದಾಧಿಕಾರಿಗಳಾದ ವಸಂತಗೌಡ, ಅಯಾಜ್, ಮಸೂಮ್ ಶರೀಫ್, ಸಲೀಂ ಖಾನ್, ಮೆಹಬೂಬ್ ಸೇರಿದಂತೆ ಅನೇಕ ಪಡಿತರ ವಿತರಕರು ಉಪಸ್ಥಿತರಿದ್ದರು.

Total Views: 0
Share This Article