Breaking News

ಗಂಗಾವತಿಯ ಕಲ್ಯಾಣ ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ಗೆ ಕೂಡಲೇ ಕಾಂಪೌಂಡ್ ನಿರ್ಮಿಸಲು ಆಗ್ರಹಿಸಿ ಮನವಿ

A request to construct a compound immediately for pre-matric girls’ hostel in Kalyana Nagar, Gangavati.

ಜಾಹೀರಾತು
ಜಾಹೀರಾತು

ಗಂಗಾವತಿ:AIDYO ಸಂಘಟನೆಯ ನೇತೃತ್ವದಲ್ಲಿ ಇಂದು, ಗಂಗಾವತಿಯ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳನ್ನು ಭೇಟಿಮಾಡಲಾಯಿತು.. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಶರಣು ಗಡ್ಡಿ ಮಾತನಾಡಿ, ಕಲ್ಯಾಣ ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಸಮಸ್ಯೆಗಳನ್ನು ಅಧಿಕಾರಿಗಳು ಗಮನಕ್ಕೆ ತಂದರು..200 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ವಸತಿ ನಿಲಯಕ್ಕೆ ಕನಿಷ್ಠ ಕಾಂಪೌಂಡ್ ಇಲ್ಲದಿರುವುದು ಶೋಚನಿಯ , ಇದರಿಂದಾಗಿ ವಿದ್ಯಾರ್ಥಿನಿಯರು ನಿತ್ಯವೂ ಆತಂಕದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ವಸತಿ ನಿಲಯದ ಸುತ್ತಲೂ ದುರ್ವಾಸನೆ ಬರುತ್ತದೆ,ಬಟ್ಟೆಗಳನ್ನು ತೊಳೆಯಲುಮತ್ತು ಹಾಕಲು ಸಹ ಸರಿಯಾದ ವ್ಯವಸ್ಥೆ ಇಲ್ಲ, ಶುದ್ಧ ಕುಡಿಯುವ ನೀರು, ಗುಣಮಟ್ಟದ ಆಹಾರ, ಗ್ರಂಥಾಲಯದ ವ್ಯವಸ್ಥೆ ಹಾಗೂ ಇನ್ನಿತರ ಅವಶ್ಯಕತೆಗಳನ್ನು ಈ ಕೊಡಲೇ ಸರಿಪಡಿಸಬೇಕೆಂದು ಮನವಿ ಮಾಡಿದರು..
ಮನವಿ ಸ್ವೀಕರಿಸಿದ ತಾಲೂಕಾ ಕಲ್ಯಾಣಾಧಿಕಾರಿಗಳಾದ ಉಷಾ ಏನ್ ಮುಜಂದಾರರು ಸಕಾರಾತ್ಮಕವಾಗಿ ಸ್ಪಂದಿಸಿ, ಈಗಾಗಲೇ ಈ ಸಮಸ್ಯೆಯನ್ನು ಜಿಲ್ಲಾ ಪಂಚಾಯತ್ ಸಿ. ಈ. ಓ. ಅವರ ಗಮನಕ್ಕೆ ತರಲಾಗಿದೆ ಹಾಗೂ ಗಂಗಾವತಿಯ ಹಾಲಿ ಶಾಸಕರಲ್ಲಿ ಮನವಿ ಮಾಡಿ ಶೀಘ್ರದಲ್ಲಿ ಈ ಸಮಸ್ಯೆಗಳನ್ನು ಸರಿಪಡಿಸುತ್ತೇವೆ ಎಂದರು..
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಯಾದ ಶರಣು ಪಾಟೀಲ್ ಸಹ ಇದ್ದರು..

About Mallikarjun

Check Also

ತಿಪಟೂರಿನಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜ್ ರವರ 286ನೇಜಯಂತೋತ್ಸವದ ಅಂಗವಾಗಿ ಹಣ್ಣು ಮತ್ತು ಬ್ರೆಡ್ ವಿತರಣೆ.

Mahaguru Sant Sri Sewalal, who showed the right path to the Lambani community who was …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.