Kitchen is science lab, mother is science teacher: Senior Scientist Mahantashivayogi

ಗಂಗಾವತಿ: ಮಕ್ಕಳಿಗೆ ಅಡುಗೆ ಮನೆಯೆ ವಿಜ್ಞಾನದ ಲ್ಯಾಬ್ ಇದ್ದಹಾಗೆ, ತಾಯಿಯೇ ವಿಜ್ಞಾನ ಕಲಿಯಲು ಒಬ್ಬ ವಿಜ್ಞಾನ ಗುರು ಎಂದು ಗಂಗಾವತಿಯ ಕೃಷಿ ವಿಜ್ಞಾನ ಮಹಾವಿದ್ಯಾಲಯದ ಹಿರಿಯ ವಿಜ್ಞಾನಿಗಳಾದ ಮಹಾಂತಶಿವಯೋಗಿಯವರು ಹೇಳಿದರು.
ಅವರು ಮಾರ್ಚ್-೩ ಸೋಮವಾರ ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಇವರು ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಈ ಶಾಲೆಯ ಮಕ್ಕಳು ಮಾಡಿದ ಸ್ಪೆçÃಯನ್ನು ಖಾಲಿ ಬೋರ್ಡ್ನಲ್ಲಿ ಸಿಂಪಡಿಸಿದಾಗ ವೆಲ್‌ಕಮ್ ಟು ಮಹಾನ್ ಸೈನ್ಸ್ ಡೇ ಎಂದು ಗೋಚರಿಸಿತು. ಮಹಾನ್ ಕಿಡ್ಸ್ ಶಾಲೆ ಮಕ್ಕಳು ಬಯೋಲಜಿ, ಫಿಸಿಕ್ಸ್, ಕೆಮಿಸ್ಟಿç, ಬಯೋಸೈನ್ಸ್ ಗಳ ಮಾಡೆಲ್‌ಗಳನ್ನು ಮಾಡಿ ಪ್ರದರ್ಶನಕ್ಕೆ ಇಟ್ಟಿದ್ದರು. ವಿಶೇಷವಾಗಿ ಫಾರಿನ್ ಸಿಕ್ ಲ್ಯಾಬ್‌ಗಳಲ್ಲಿ ಫಿಂಗರ್ ಪ್ರಿಂಟ್ ಹೇಗೆ ತೆಗೆಯಲಾಗುತ್ತದೆ ಹಾಗೂ ಡಿಎನ್‌ಎ ಟೆಸ್ಟ್ ಮತ್ತು ಗ್ಯಾಲಕ್ಸಿ, ತ್ರೀಡಿ ಪ್ರಾಜೆಕ್ಟರ್‌ಗಳು, ವಿಆರ್, ರಕ್ತಪರೀಕ್ಷೆ ಮಾಡೆಲ್‌ಗಳು, ಸ್ಟಾರ್ಚ್ಗಳನ್ನು ತೆಗೆಯುವುದು ತಮ್ಮ ವಯಸ್ಸಿಗೆ ಮೀರಿದ ವಿಜ್ಞಾನ ಪ್ರದರ್ಶನಗಳನ್ನು ಮಕ್ಕಳು ಮಾಡಿದ್ದರು.
ಇದೇ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನ ಮಠ ಮಾತನಾಡಿ, ನಮ್ಮ ಶಾಲೆಯಲ್ಲಿ ವಿಜ್ಞಾನವನ್ನು ಪ್ರತಿನಿತ್ಯ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹಲವಾರು ಪಾಲಕರು ಪಾಲ್ಗೊಂಡು ಮಾತನಾಡಿ, ಈ ಶಾಲೆಯಲ್ಲಿ ಮಕ್ಕಳು ತುಂಬಾ ಸಂತೋಷದಿAದ ಕಲಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಲವಾರು ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಮಾಡುತ್ತಿರುವುದರಿಂದ ಮಕ್ಕಳು ಸಂತೋಷದಿAದ ಪ್ರತಿಯೊಂದು ವಿಷಯದಲ್ಲೂ ಆಸಕ್ತಿಯನ್ನು ತೋರಿಸುತ್ತಿದ್ದಾರೆ ಹಾಗೂ ಕಲಿಯುತ್ತಿದ್ದಾರೆ ಎಂದು ತಮ್ಮ ಸಂತೋಷವನ್ನು ಹಂಚಿಕೊAಡರು.
ಈ ಸಂದರ್ಭಧಲ್ಲಿ ಶಿಕ್ಷಕರಾದ ಚಂಪರಾಣೆ, ತೇಜಸ್ವಿನಿ, ತಿಮ್ಮಪ್ಪ, ಸಿದ್ದೇಶ್, ಮುತ್ತ, ಕುಮುದಿನಿ, ವಿಜಯಲಕ್ಷಿö್ಮ, ಶಾಂತ, ಚಂದ್ರಶೇಖರ್ ಕುಂಬಾರ್, ಮಂಜುನಾಥ್ ತಳವಾರ್, ಮಂಜುನಾಥ್, ಪ್ರಸಾದ್, ಶ್ವೇತ, ತಿಮ್ಮಪ್ಪ, ಮಂಜುನಾಥ್, ಶ್ರೀದೇವಿ, ವೀರಯ್ಯ, ಅಸ್ಮ ಸೇರಿದಂತೆ ಇತರ ಶಿಕ್ಷಕರು ಇದ್ದರು.