ಹೈದರಾಬಾದ್ ಪಟಂಚೆರು ರೀತಿ ಮಾಲಿನ್ಯ ಮಾಡುವ ಕಾರ್ಖಾನೆ ಬಂದ್ಆಗಲಿ:ಕೆ.ಲಕ್ಷ್ಮೀನಾರಾಯಣ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Hyderabad Patancheru polluting factories should be closed: K. Lakshminarayana




ಹೈದರಾಬಾದ್ ಪಟಂಚೆರು ರೀತಿ ಮಾಲಿನ್ಯ ಮಾಡುವ ಕಾರ್ಖಾನೆ ಬಂದ್ ಆಗಲಿ: ಕೆ. ಲಕ್ಷ್ಮೀನಾರಾಯಣ

ಜಾಹೀರಾತು

194ನೇ ದಿನದ ಬಲ್ಡೋಟ ತೊಲಗಿಸಿ ಧರಣಿ ಯಶಸ್ವಿ

ಕೊಪ್ಪಳ: ನಗರಸಭೆ ಆವರಣದಲ್ಲಿ 194ನೇ ದಿನದಿಂದ ಬಲ್ಡೋಟ ಹಟಾವೋ ಧರಣಿಗೆ ಬೆಂಬಲಿಸಿ ಕೊಪ್ಫಳ ಮೂಲದ ಹೈದರಾಬಾದ್ ನಿವಾಸಿ, ನಿವೃತ್ತ ಹೈದರಾಬಾದ್ ಕೇಂದ್ರೀಯ ವಿವಿ ಪ್ರಾಧ್ಯಾಪಕ ಕೆ. ಲಕ್ಷ್ಮೀನಾರಾಯಣ ಮಾತನಾಡಿ, ಗ್ರೇಟರ್ ಹೈದರಾಬಾದ್ ವ್ಯಾಪ್ತಿಯ ಪಟಂಚೆರು ಪ್ರದೇಶದಲ್ಲಿ ಈ ರೀತಿ ಸಾಕಷ್ಟು ಮಾಲಿನ್ಯ ಮಾಡುವ ಕಾರ್ಖಾನೆಗಳಿದ್ದವು. ಅಲ್ಲಿನ ಜನರು ದೊಡ್ಡಮಟ್ಟದಲ್ಲಿ ಬೀದಿಗಿಳಿದು ಹೋರಾಡಿದಾಗ ಅಲ್ಲಿ ಮಾಲಿನ್ಯದ ಅಧ್ಯಯನ ನಡೆಯಿತು. ಇದನ್ನು ಇಟ್ಟು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದಾಗ ಸುಪ್ರೀಂ ಕೋರ್ಟ್ ಆ ಕಾರ್ಖಾನೆಗಳ ಕಾರ್ಯಾಚರಣೆಗೆ ಶಾಶ್ವತವಾಗಿ ಮುಚ್ಚಲು ಆದೇಶ ಮಾಡಿತು. ಈ ಪ್ರಯತ್ನವನ್ನು ಇಲ್ಲಿಯೂ ಮಾಡಿದರೆ ಖಂಡಿತಾ ಜನರ ಪರವಾಗಿ ಸುಪ್ರೀಂ ಕೋರ್ಟ್ ನಿಲ್ಲುತ್ತದೆ ಎಂದರು.
ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್ ಮಾತನಾಡಿ, ಇಲ್ಲಿ ಜೀವ, ಆರೋಗ್ಯಕ್ಕಿಂತ ಮೊದಲು ಯಾವ ಉದ್ಯೋಗವೂ ದೊಡ್ಡದಲ್ಲ. ಕಾರ್ಖಾನೆಗಳ ಮಾಲೀಕರು ಹಣ ಮಾಡುವ ಧಾವಂತದಲ್ಲಿ ಬೇರೆಯವರ ಆರೋಗ್ಯ ಕಸಿದುಕೊಳ್ಳುವುದು ಸರಿಯಲ್ಲ ಎಂದರು. ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, 200ನೇ ದಿನದ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಭಾಗವಹಿಸಬೇಕು ಎಂದರು.
ಧರಣಿಯಲ್ಲಿ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಕಾಶಕ ಡಿ.ಎಂ.ಬಡಿಗೇರ, ಮಾನವ ಬಂಧುತ್ವ ವೇದಿಕೆಯ ಮುಖಂಡ ಟಿ.ರತ್ನಾಕರ, ಶುಕರಾಜ ತಾಳಕೇರಿ, ಶಂಭುಲಿಂಗಪ್ಪ ಹರಗೇರಿ, ರವಿ ಕಾಂತನವರ, ಸಾವಿತ್ರಿ ಮುಜುಮದಾರ, ರಾಜಶೇಖರ ಏಳುಬಾವಿ, ಪಂಪಣ್ಣ ಚಿಂತಪಲ್ಲಿ, ಶರಣು ಶೆಟ್ಟರ್, ಮಹಾದೇವಪ್ಪ ಮಾವಿನಮಡು, ವಿಜಯ ಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ಟಿ. ಚಂದನ್, ಟಿ. ಶ್ರೇಯಸ್, ಮಂಜುನಾಥ ಕವಲೂರು, ಗಂಗಮ್ಮ ಕುರುಗೋಡು, ಗಾಳೆಪ್ಪ ಪೂಜಾರ ಹೂವಿನಾಳ, ಭೀಮಪ್ಪ ಯಲಬುರ್ಗಾ, ಬಸವರಾಜ ಹುಬ್ಬಳ್ಳಿ, ಪಾಲ್ಗೊಂಡರು.

Total Views: 0
Share This Article