
Woman missing: Request for assistance in finding her

ಮಹಿಳೆ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಜೂನ್ 04 (ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕಿನ ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಲಗೇರಿ ಗ್ರಾಮದ 29 ವರ್ಷದ ವಿವಾಹಿತ ಮಹಿಳೆಯೊಬ್ಬರು ಕಳೆದ ಏಪ್ರಿಲ್ ತಿಂಗಳಿಂದ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಸಹಕರಿಸಲು ಹನುಮಸಾಗರ ಪೊಲೀಸ್ ಠಾಣೆಯ ಪಿ.ಎಸ್.ಐ ಧನುಂಜಯ ಎಮ್. ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಹೂಲಗೇರಿ ಗ್ರಾಮದ ನಿವಾಸಿಯಾದ ಈರಮ್ಮ ಗಂಡ ಪರಸಪ್ಪ ಮಾಟಿಗೇರಿ ವಯಸ್ಸು 29 ವರ್ಷ ಎಂಬ ಮಹಿಳೆಯು 2026ರ ಏಪ್ರಿಲ್ 16 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದು, ಇಲ್ಲಿಯವರೆಗೆ ವಾಪಸ್ ಬಂದಿರುವುದಿಲ್ಲ ಎಂದು ಸಂಬಂಧಿಕರಾದ ಲಕ್ಷ್ಮವ್ವ ಅವರು ನೀಡಿದ ದೂರಿನ ಮೇರೆಗೆ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಸಿ.ಆರ್. ನಂ. 81-2026 ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಹಿಳೆಯ ಚಹರೆ ಪಟ್ಟಿ: ನಾಪತ್ತೆಯಾದ ಈರಮ್ಮ ಸುಮಾರು 5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು ಹಾಗೂ ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ. ಮನೆಯಿಂದ ಹೊರಡುವ ವೇಳೆ ಕೆಂಪು ಬಣ್ಣದ ಪ್ಯಾಂಟ್ ಹಾಗೂ ಚಾಕಲೇಟ್ ಬಣ್ಣದ ಚೆಕ್ಸ್ ಟಾಪ್ ಧರಿಸಿರುತ್ತಾಳೆ. ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಹನುಮಸಾಗರ ಪೊಲೀಸ್ ಠಾಣೆಯ ಮೊ.ನಂ. 9480803759 ಗೆ ಸಂಪರ್ಕಿಸುವAತೆ ಹನುಮಸಾಗರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
