
Young woman missing: Public urged to help find her

ಯುವತಿ ಕಾಣೆ: ಪತ್ತೆಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ

ಕೊಪ್ಪಳ ಜೂನ್ 04 (ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದ ಪವಿತ್ರಾ ತಂದೆ ಬಸವರಾಜ ಪಂಚಪುತ್ರ ಎಂಬ ಯುವತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಲು ಹನುಮಸಾಗರ ಪೊಲೀಸ್ ಠಾಣೆಯ ಪಿ.ಎಸ್.ಐ ಧನುಂಜಯ ಎಮ್. ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪವಿತ್ರಾ ತಂದೆ ಬಸವರಾಜ ಪಂಚಪುತ್ರ ವಯಸ್ಸು 18ವರ್ಷ ಎಂಬ ಯುವತಿಯು 2026ರ ಮೇ 21 ರಂದು ಬೆಳಿಗ್ಗೆ 5 ಗಂಟೆಗೆ ಸುಮಾರಿಗೆ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಹೊರಗಡೆ ಹೋಗಿದ್ದು, ವಾಪಸ್ ಬಂದಿರುವುದಿಲ್ಲ ಎಂದು ದ್ಯಾಮವ್ವ ಎಂಬುವವರು ದೂರು ನೀಡಿದ್ದು, ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಸಿಆರ್ ನಂ. 85-2026 ರಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯ ಚಹರೆ ಪಟ್ಟಿ: ಪವಿತ್ರಾ ತಂದೆ ಬಸವರಾಜ ಪಂಚಪುತ್ರ, ವಯಸ್ಸು 18 ವರ್ಷ, ಎತ್ತರ 5 ಅಡಿ, ದುಂಡು ಮುಖ, ಸಾದಾರಣ ಮೈ ಕಟ್ಟು,ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಯುವತಿಯು ಮನೆಯಿಂದ ಹೊರಡುವಾಗ ಚಾಕಲೇಟ್ ಬಣ್ಣದ ಟಾಪ್ ಹಾಗೂ ಗುಲಾಬಿ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಈ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಹನುಮಸಾಗರ ಪೊಲೀಸ್ ಠಾಣೆಯ ಮೊ ನಂ.9480803759 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಹನುಮಸಾಗರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
