Breaking News

ವೀರ ಯೋಧರನ್ನು ಗೌರವಿಸುವುದು ನಮ್ಮ ಕರ್ತವ್ಯ – ಕೆ ಆರ್ ದೇವರಾಜು.

It is our duty to honor the brave warriors – KR Devaraj

ತಿಪಟೂರು– ತಾಲ್ಲೂಕಿನ ಕರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2024 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ವೀರ ಸೇನಾನಿ ಶಿವಣ್ಣ ಮಾಯಸಂದ್ರ ರವರಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಕೆ ಆರ್ ದೇವರಾಜು , ನಮ್ಮ ಯೋಧರು ನಮ್ಮ ಹೆಮ್ಮೆ. ದೇಶ ರಕ್ಷಣೆ ಹಾಗೂ ತಮ್ಮ ಕುಟುಂಬ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಾರೆ.ಶಿವಣ್ಣನವರು ವಿಶ್ವ ವಿಖ್ಯಾತ ಅಟ್ಟಾರಿ ವಾಘ ಗಡಿಯ ಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಏಕೈಕ ಕನ್ನಡಿಗ. ಇವರು ಕೇವಲ ನಮ್ಮ ದೇಶದಲ್ಲೇ ಅಲ್ಲದೆ ವಿಶ್ವ ಸಂಸ್ಥೆಯ ವಿಶ್ವ ಶಾಂತಿ ಸೇನಾ ಪಡೆಯಲ್ಲಿ ಅಮೇರಿಕಾದಲ್ಲಿ ಸೇವೆ ಸಲ್ಲಿಸಿದ್ದಾರೆ. ಏಷ್ಯಾ ಖಂಡದ ಅತಿ ಎತ್ತರದ ದ್ವಜ ಸ್ಥಂಭದ ಉಸ್ತುವಾರಿ ಇಂತಹ ವೀರ ಯೋಧರನ್ನು ಗೌರವಿಸುವುದು ನಮ್ಮಗಳ ಆಧ್ಯಕರ್ಥವ್ಯವಾಗಬೇಕು ಎಂದರು. ನಮ್ಮ ಸಂಘವು ಪ್ರತಿ ವರ್ಷ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳನ್ನು ಗೌರವಿಸುತ್ತಾ ಬಂದಿದ್ದೇವೆ. ಅದೇ ರೀತಿ ಬಿ ಎಸ್ ಎಫ್ ಕಮಾಂಡರ್ ಶಿವಣ್ಣನವರನ್ನು ಗೌರವಿಸುತ್ತಿರುವುದು ನಮಗೆ ಹೆಮ್ಮೆ ಎಂದು ತಿಳೊಸೊದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಎಸ್ಎಫ್ ಕಮಾಂಡರ್ ಶಿವಣ್ಣ ಮಾಯಸಂದ್ರ ರವರು ಮಾತನಾಡಿ ಸಂಘವು ಕೇವಲ ಸಾಲ ಹಾಗೂ ಪಡಿತರ ವಿತರಣೆಗೆ ಸೀಮಿತವಾಗದೆ ಅಧ್ಯಕ್ಷರಾದ ಕೆ ಆರ್ ದೇವರಾಜುರವರ ಮುಂದಾಳತ್ವದಲ್ಲಿ ಸದಸ್ಯರಿಗೆ ಅವಶ್ಯಕ ಸೇವೆಗಳನ್ನು ಒದಗಿಸುತ್ತಾ ಬಂದಿರುವುದು ಸಹಕಾರಿ ಚಳುವಳಿಯ ಬೆಳವಣಿಗೆಗೆ ಹಿಡಿದ ಕೈಗನಡಿ ಎಂದು ತಿಳಿಸಿದರು.

ಅತಿಥಿಗಳಾದ ಪುಟ್ಟಣ್ಣ ಮಾತನಾಡಿ ಸಂಘವು ಉತ್ತಮ ಲಾಭ ದೊಂದಿಗೆ ಹಲವು ಸೇವೆಗಳನ್ನು ನೀಡುತ್ತಿರುವುದು ಸಂತಸದ ವಿಚಾರ. ಇಂತಹ ಕಾರ್ಯ ನಡೆಸುತ್ತಿರುವ ಅಧ್ಯಕ್ಷರ ನಡೆ ಸ್ವಾಗತಾರ್ಹ ಹಾಗೂ ಅಭಿನಂದನಾರ್ಹ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷರಾದ ಡಿ ಲಿಂಗರಾಜು, ನಿರ್ದೇಶಕರಾದ ಶಿವಮೂರ್ತಿ, ಬಸವರಾಜು, ನಂಜುಂಡಯ್ಯ, ಶಿಡ್ಲಹಳ್ಳಿ ಜಯಣ್ಣ,ನ್ಯಾಕೇನಹಳ್ಳಿ ವೀರಣ್ಣ, ಶ್ರೀಮತಿ ಭಾರತಿ, ಶ್ರೀಮತಿ ಅಮೃತಶ್ರೀ ಸೇರಿದಂತೆ ನಿರ್ದೇಶಕರು ಸದಸ್ಯರುಗಳು ಹಾಜರಿದ್ದರು. ಸಂಘದ ಸಿಇಒ ಮನು ಎಸ್ ಎಂ ಸನ್ಮಾನಿತರಾದ ಶಿವಣ್ಣ ಮಾಯಸಂದ್ರ ರವರನ್ನು ಪರಿಚಯಿಸಿ, ಸ್ವಾಗತಿಸಿ, ವಂದಿಸಿದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.