Darshan is worthwhile even in death. Parents who donated their son’s organs.

ವರದಿ :ಬಂಗಾರಪ್ಪ ಸಿ ಹನೂರು.
ಹನೂರು : ಪಟ್ಟಣದ ಯುವಕ ದರ್ಶನ್ ಅಪಘಾತದಲ್ಲಿ ಪೆಟ್ಟಾದ ಹಿನ್ನೆಲೆ ಮೆದಳು ನಿಷ್ಕ್ರಿಯ ಗೊಂಡಿದ್ದು ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಹನೂರು ಪಟ್ಟಣದ ನಿವಾಸಿಗಳಾದ ಶಶಿ ಮತ್ತು ಸುಶೀಲಾರವರ ದಂಪತಿಗಳ ಮಗನಾದ ದರ್ಶನ್ ರಸ್ತೆ ಅಪಘಾತದ ಹಿನ್ನಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು ಎನ್ನಲಾಗಿದ್ದು, ನಂತರ ಪೋಷಕರು ತಮ್ಮ ಪುತ್ರನ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿ ಮಾನವೀಯತೆ ಮೆರೆದಿದ್ದಾರೆ
ಇವರ ಸಾಮಾಜಿಕ ಕಾರ್ಯ
ಮೆರೆದು ಇತರರಿಗೆ ಮಾದರಿಯಾಗಿದೆ,
ದಾನ ಮಾಡಿದ ಅಂಗಾಂಗ:
ಮೈಸೂರಿನ ಅಪೋಲೋ ಆಸ್ಪತ್ರೆಗೆ ದರ್ಶನ್ ಹೃದಯ ಮತ್ತು ಹೃದಯದ ನಾಳ, ಶ್ವಾಸಕೋಸ ನಾಶಗಳು, ಪಿತ್ತಕೋಂಶ(ಲಿವರ್), ಮೂತ್ರಪಿಂಡ (ಕಿಡ್ನಿ), ಕಣ್ಣು, ದಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ .