Bangalore-based model Badal Bist Rubaru wins Mr. India Perfect 2023 award: Nominated for Mr. Universe contest

ಬೆಂಗಳೂರು; ಗೋವಾದಲ್ಲಿ ನಡೆದ ಮಿಸ್ಟರ್ ಇಂಡಿಯಾ 2023 ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಮಾಡೆಲ್ ಬಾದಲ್ ಬಿಸ್ಟ್ ರುಬರುಗೆ ಮಿಸ್ಟರ್ ಇಂಡಿಯಾ ಫರ್ಪೆಕ್ಟ್ 2023 ಪ್ರಶಸ್ತಿ ದೊರೆಕಿದೆ.
ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಮೂಲತಃ ಗೂರ್ಖಾ ಸಮುದಾಯದ ಬಾದಲ್ ಬಿಸ್ತಾ ಅವರು ಶಿವರಾಜ್ ಧನ್ ಮತ್ತು ಲಕ್ಷ್ಮಿ ಬಿಸ್ತಾ ಅವರ ಪುತ್ರನಾಗಿದ್ದು, ಬಾಲ್ಯದಿಂದಲೂ ಮಾಡಲಿಂಗ್, ನಟನಾ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಜಮ್ಯಾಸ್ಟಿಕ್, ಶಾವೊಲಿನ್, ಚು-ಕುಂಗ್ಪು, ವುತು, ಟೇಕ್ವಾಂಡೋ, ನಟನೆ ಮತ್ತು ನೃತ್ಯವನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಗೂರ್ಖಾ ಸಮುದಾಯದ ಅಧ್ಯಕ್ಷ ಆರ್.ಜೋಗ್‌ಮಲ್. ಈ ಗೆಲುವಿನಿಂದ ಬಾದಲ್ ಬಿಸ್ಟ್ ರುಬರು ಇದೇ ಅಕ್ಟೋಬರ್ 3 ರಿಂದ 8 ರ ವರೆಗೆ ಅಮೆರಿಕದಲ್ಲಿ ನಡೆಯಲಿರುವ ಮಿಸ್ಟರ್ ಯೂನಿವರ್ಸ್ ಇಂಟರ್ನ್ಯಾಷನಲ್ ಸ್ಪರ್ಧೆಗೆ ನಾಮನಿರ್ದೇಶನಗೊಂಡಿದ್ದಾರೆ. ಮಿಸ್ಟರ್ ಕರ್ನಾಟಕ 2022 ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಬಾದಲ್ ಬಿಸ್ಟ್ ವಿಶ್ವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಸರ್ಕಾರ ಆರ್ಥಿಕ ನೆರವು ಮತ್ತು ಪ್ರೋತ್ಸಾಹ ನೀಡುಬೇಕೆಂದು ಮನವಿ ಮಾಡಿದ್ದಾರೆ.