Breaking News

ಮಕ್ಕಳ ಮನದಲ್ಲಿ ಮಾನವೀಯಮೌಲ್ಯಗಳನ್ನುತುಂಬುವಅವಶ್ಯಕತೆಇದೆ-ನೇತ್ರಾಜಗುರುವಿನ ಮಠ

There is a need to inculcate humane values ​​in the minds of children – Netrajaguru’s Math

ಗಂಗಾವತಿ:ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಮತ್ತು ಭವಿಷ್ಯದಲ್ಲಿ ಉತ್ತಮ ಜೀವನ ಸರಿಪಡಿಸುವುದರ ಬಗ್ಗೆ ಬಾಲ್ಯದಲ್ಲಿಯೇ ಅವರ ಮನ ಪರಿವರ್ತನೆಗಾಗಿ ನಮ್ಮ ಸಂಸ್ಥೆ ಶ್ರಮಿಸುತ್ತಿದೆ ಎಂದು ನೇತ್ರಾಜ್ ಗುರುವಿನ ಮಠ ರವರು ಇಂದು ಮಹಾನ್ ಕಿಡ್ಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜಯನಗರ ಸತ್ಯನಾರಾಯಣಪೇಟೆ ವಾಕಿಂಗ್ ಗ್ರೂಪ್ ನವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು
ವಿಜಯ ಕರ್ನಾಟಕ ಪತ್ರಿಕೆಯವರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ವಿಜಯ ಕರ್ನಾಟಕ ಎಕ್ಸಲೆನ್ಸಿ ಅವಾರ್ಡ್ 2023 ಪ್ರಶಸ್ತಿ ಪಡೆದಿದ್ದು ನಮ್ಮ ಸಂಸ್ಥೆ ಹಾಗೂ ಶಿಕ್ಷಕರು ಸುಮಾರು ವರ್ಷಗಳಿಂದ ಮಕ್ಕಳಲ್ಲಿ ಮಾನವೀಯ ಮೌಲ್ಯ ಹಾಗೂ ಪ್ರಾಮಾಣಿಕ ಜೀವನ ಪದ್ಧತಿ,ಜಾತಿ ಮತ, ಮೇಲು-ಕೀಳು ಎಂಬದೆ ಮಕ್ಕಳಲ್ಲಿ ಉತ್ತಮ ಶಿಕ್ಷಣ ಬೋಧಿಸಿ ಈ ಮಟ್ಟಕ್ಕೆ ಬಂದಿದೆ ಇದಕ್ಕೆಲ್ಲ ನಮ್ಮ ಮಕ್ಕಳ ಪಾಲಕರು/ಶಿಕ್ಷಕರು ಮತ್ತು ಹಿರಿಯರ ಮಾರ್ಗದರ್ಶನದಿಂದ ನಮ್ಮ ಸಂಸ್ಥೆ ಮಹಾ ಎತ್ತರಕ್ಕೆ ಬೆಳೆದು ಇಂದು ನನಗೆ ಎಕ್ಸಲೆನ್ಸಿ ಅವಾರ್ಡ್ 2023 ಪಡೆಯಲು ಕಾರಣವಾಗಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು
ಜೆ ಎಸ್ ಡಬ್ಲ್ಯೂ ಗ್ರೂಪ್ – ಜಯನಗರ ಸತ್ಯನಾರಾಯಣಪೇಟೆ ವಾಕಿಂಗ್ ಗ್ರೂಪ್ ಸಂಚಾಲಕರಾದ ಟಿ ಆಂಜನೇಯರವರು ನಮ್ಮ ನಗರದ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಹಾನ್ ಕಿಡ್ಸ್ ಸಂಸ್ಥೆ ನಾವು ನೋಡಿದ ಹಾಗೆ ಮೊದಲಿನಿಂದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು, ಮತ್ತು ಜೀವನದ ಪದ್ಧತಿ ಹಾಗೂ ಮಕ್ಕಳಲ್ಲಿ ಭೇದ-ಭಾವ, ಜಾತಿ -ಮತ ಎನ್ನದೆ ಎಲ್ಲರೂ ಸರಸ್ವತಿಯ ಆಧಾರಕರಾಗಿ ಮತ್ತು ಸೇವಕರಾಗಿ ಶಿಕ್ಷಣವನ್ನು ಪಡೆದಲ್ಲಿ ನಾವು ಸಮಾಜದಲ್ಲಿ ಎತ್ತರಕ್ಕೆ ಬೆಳೆಯುವ ಸುವರ್ಣ ಅವಕಾಶ ಇದೆ ಎಂದು ತಿಳಿಸಿದರು
ನೇತ್ರಾಜ್ ರವರು ತಮ್ಮ ಬಾಲ್ಯದಿಂದಲೂ ಶಿಕ್ಷಣದ ಬಗ್ಗೆ ಮಕ್ಕಳ ಬಗ್ಗೆ ಹಾಗೂ ಮಕ್ಕಳಲ್ಲಿ ಶಿಸ್ತು ಸಂಭ್ರಮ ಆರೋಗ್ಯ ಹಾಗೂ ಮಕ್ಕಳ ಮನದಲ್ಲಿ ಉತ್ತಮ ಪರಿಕಲ್ಪನೆಗಳನ್ನು ಬಿತ್ತುವ ಕೆಲಸವನ್ನು ಮಾಡಿದ್ದಾರೆ ಹಾಗಾಗಿ ಅವರಿಗೆ ವಿಜಯ ಕರ್ನಾಟಕ ನೀಡುವ 2023ರ ಎಕ್ಸಲೆನ್ಸಿ ಅವಾರ್ಡ್ ರಾಜ್ಯದ 29 ಸಾಧಕರಲ್ಲಿ ಇವರು ಒಬ್ಬರಾಗಿರುವುದು ನಮ್ಮ ಕಾಲೋನಿಗೆ ಹೆಮ್ಮೆಯ ವಿಷಯವಾಗಿದೆ
ಹಾಗಾಗಿ ನಮ್ಮ ವಾಕಿಂಗ್ ಗ್ರೂಪ್ ನ ಎಲ್ಲಾ ಸದಸ್ಯರು ಸೇರಿ ನಮ್ಮ ಧ್ಯೇಯ ವಾಕ್ಯದ ಆಧ್ಯಾತ್ಮ, ಆರೋಗ್ಯ, ಶಿಕ್ಷಣ ಮಹತ್ವದ ಉದ್ದೇಶ ಇಟ್ಟುಕೊಂಡು ನಾವು ಸಮಾಜದಲ್ಲಿ ಉತ್ತಮ ಸಾಧಕರು ಹಾಗೂ ಬಡ ಮಕ್ಕಳಿಗೆ ಶಿಕ್ಷಣದ ನೆರವು ನೀಡುವ ಸಣ್ಣ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು
ಈ ಸನ್ಮಾನ ಸಂದರ್ಭದಲ್ಲಿ ಜೆ ಎಸ್ ಡಬ್ಲ್ಯೂ ಗ್ರೂಪ್ ನ ಹಿರಿಯರಾದ ಸಿದ್ದರಾಮಪ್ಪ ಗೌಡ, ವೀರಣ್ಣ ಶೆಟ್ಟರ್, ಎಂ ಸಿ ಹಿರೇಮಠ ಮತ್ತು ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ಗುರುವಿನ ಮಠ ವೇದಿಕೆ ಮೇಲೆ ಉಪಸ್ಥಿತರಿದ್ದರು
ನಂತರದಲ್ಲಿ ಮಹಾನ್ ಕಿಡ್ಸ್ ಸಂಸ್ಥೆಯ ಶಿಕ್ಷಕ/ ಶಿಕ್ಷಕಿಯರಿಗೆ ವಾಕಿಂಗ್ ಗ್ರೂಪ್ ಸಂಸ್ಥೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅವರ ಸೇವೆಯನ್ನು ಗುರುತಿಸಿ ಕಿರು ಕಾಣಿಕೆ /ಸಿಹಿ ನೀಡಿ ಸತ್ಕರಿಸಿದರು
ಶಾಲೆಯ ಶಿಕ್ಷಕಿಯರಾದ ಶ್ರೀಮತಿ. ಮೇಘಾ ಸ್ವಾಗತಿಸಿದರು.
ಹಿರಿಯರಾದ ಡಾಕ್ಟರ್ ವೀರನಗೌಡ ಪಾಟೀಲ್ ವಂದಿಸಿದರು
ಈ ಕಾರ್ಯಕ್ರಮದಲ್ಲಿ ಗ್ರೂಪ್ ಸದಸ್ಯರಾದ S V ಮಗದಾಳ್, ರುದ್ರಗೌಡ N, ಪರಗಿ ನಾಗರಾಜ ,ಮರಳು ಸಿದ್ದಯ್ಯ ಸ್ವಾಮಿ, ವಿರೇಶ ಪವಾಡ ಶೆಟ್ಟಿ, ಚನ್ನಪ ಬಡಿಗೇರ ಮತ್ತು ನಾಗಪ್ಪ ಸುಲ್ತಾನಪುರ ಉಪಸ್ಥಿತರಿದ್ದರು
ಹಾಗೂ ಮಹಾನ್ ಕಿಡ್ಸ್ ಸ್ಕೂಲ್ ಮುಖ್ಯೋಪಾಧ್ಯಾಯರು ಸಿಬ್ಬಂದಿಗಳು ಉಪಸ್ಥಿತರಿದ್ದರು

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.