Breaking News

ಅಭಿವೃದ್ಧಿಗೆಮತ್ತೋಂದು ಹೆಸರೆಆರ್ ದೃ ವನಾರಯಣ್ ಮೊದಲನೆ ವರ್ಷದ ಪುಣ್ಯಸ್ಮರಣೆಯಲ್ಲಿ ಆರ್ ನರೇಂದ್ರಾಭಿಮತ

Another name for development is Dru Vanarayan, who is first in the commemoration of the year, Narendra Abhima.


ವರದಿ : ಬಂಗಾರಪ್ಪ ಸಿ .
ಹನೂರು:ರಾಜ್ಯದ ಕೆಲಸ ಕಾರ್ಯಗಳಿಗೆ ಕೆಂದ್ರದಲ್ಲಿ ಸದಾ ಮುಂದಿದ್ದ ಅವರು ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಸಂಸದ ದಿವಂಗತ ಆರ್ ಧ್ರುವನಾರಾಯಣ್ ರವರ ಕೊಡುಗೆ ಅಪಾರವಾಗಿದೆ ಅವರ ನಿಧನದಿಂದ ರಾಜ್ಯಕ್ಕೆ ನಷ್ಟವಾಗಿದೆ ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.

ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದಿ. ಆರ್ ಧ್ರುವನಾರಾಯಣ್ ರವರ ಮೊದಲನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂಸತ್ತಿನ
ಎರಡು ಅವಧಿಗೆ ಆಯ್ಕೆಯಾಗಿದ್ದರು ಎಂದು ಸಹ ಅಗೌರವ ತರುವ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ. ಕಾರ್ಯಕರ್ತರು ಯಾವುದೇ ಸಮಯದಲ್ಲಿ ದೂರವಾಣಿ ಮೂಲಕ ಕರೆ ಮಾಡಿದರು ಅವರು ಸ್ಪಂದಿಸುವ ಗುಣ ಹೊಂದಿದ್ದರು ಇಡೀ ದೇಶದಲ್ಲಿಯೇ ಮಾದರಿ ಸಂಸದರಾಗಿದ್ದರು. ರಾಜ್ಯದ ನಂಬರ್ ಒನ್ ಸಂಸದರಾಗಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಸದಾ ಶ್ರಮಿಸುತ್ತಿದ್ದರು. ದೇಶದಲ್ಲಿಯೇ ಸದ್ದು ಮಾಡಿದ್ದ ಸುಳ್ವಾಡಿ ಮಾರಮ್ಮ ವಿಷಪ್ರಸಾದ ದುರಂತ ಪ್ರಕರಣ ನಡೆದ ಸಂದರ್ಭದಲ್ಲಿ ಸಂಸತ್ ಅಧಿವೇಶನದಲ್ಲಿ ಈ ವಿಚಾರದ ಬಗ್ಗೆ ಸುಧೀರ್ಘವಾಗಿ ಪ್ರಸ್ತಾಪಿಸಿ ಚರ್ಚೆ ಮಾಡಿ ಮೃತಪಟ್ಟಿದ್ದ ಕುಟುಂಬಸ್ಥರಿಗೆ 2 ಲಕ್ಷ ಪರಿಹಾರ ಕೊಡಿಸಿದ್ದರು. ಇದಲ್ಲದೆ ಚಿಕಿತ್ಸೆಗೆ ದಾಖಲಾಗಿದ್ದವರ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸಿ ಪ್ರತಿದಿನ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎಲ್ಲಾರಿಗೂ ಪರಿಹಾರ ಕೊಡಿಸಿದ್ದರು. ಇದಲ್ಲದೆ ಹನೂರು ವಿಧಾನಸಭಾ ಕ್ಷೇತ್ರದ ರಸ್ತೆ, ಸಮುದಾಯ ಭವನ ಗಳಿಗೆ ಹೆಚ್ಚಿನ ಅನುದಾನ ನೀಡಿ ನಮ್ಮ ಕ್ಷೇತ್ರವನ್ನು ಶೈಕ್ಷಣಿಕವಾಗಿ ಮುಂದೆ ತರಲು ಶ್ರಮಿಸಿದರಲ್ಲದೆ ಹೆಚ್ಚಿನ ವಸತಿ ಶಾಲೆಗಳನ್ನು ತರವಲ್ಲಿಯೂ ಪ್ರಮುಖ ಪಾತ್ರ ವಹಿಸುವಲ್ಲಿ ಪ್ರಮುಖರು .
ಪಕ್ಷ ನೀಡಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಹಿರಿಯರು ನನ್ನ ಆತ್ಮೀಯರಾಗಿದ್ದ ಧ್ರುವನಾರಾಯಣ ಇಲ್ಲ ಎಂಬುದನ್ನೇ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ? ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಉತ್ತಮ ಸಂಘಟನೆ ಮಾಡಿದ ಪರಿಣಾಮ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚಿನ ಸೀಟು ಗೆಲ್ಲಲು ಸಾಧ್ಯವಾಯಿತು. ಸದಾ ಕಾರ್ಯಕರ್ತರ ಕಷ್ಟ ಸುಖದಲ್ಲಿ ಭಾಗಿಯಾಗಿ ಸದಾ ಅವರ ಬೆನ್ನೆಲುಬಾಗಿದ್ದರು ಇವರ ಬರುವಿಕೆಗಾಗಿಯೆ ಹಲವಾರು ಕಾರ್ಯಕರ್ತರು ಕಾಯುತ್ತಿದ್ದರು ಇದೇ ಒಬ್ಬ ನಾಯಕನ ಸಂಪತ್ತು ಎಂದು ಗುಣಗಾನ ಮಾಡಿದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಈಶ್ವರ್, ಮುಕುಂದವರ್ಮ, ಚಾಮುಲ್ ನಿರ್ದೇಶಕರುಗಳಾದ ನಂಜುಂಡಸ್ವಾಮಿ, ಶಾಹುಲ್ ಅಹಮದ್, ತಾಪಂ ಮಾಜಿ ಸದಸ್ಯ ಜವಾದ್ ಅಹ್ಮದ್ . ಮುಖಂಡರುಗಳಾದ ಕೊಪ್ಪಳ ಮಹದೇವ ನಾಯಕ. ಮುರುಡೇಶ್ವರ ಸ್ವಾಮಿ, ಮಂಗಲ ಪುಟ್ಟರಾಜು, ಪೆದ್ದನ ಪಾಳ್ಯ ಮಣಿ ಉದ್ದನೂರು ಸಿದ್ದರಾಜು ,ನಟರಾಜು ,ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.