Eranna Marlatti was elected as the new president of the JDS unit
ಮಾನ್ವಿ:ಪಟ್ಟಣದ ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ ಪಕ್ಷದ ಕಚೇರಿಯಲ್ಲಿ ತಾ.ಜೆ.ಡಿ.ಎಸ್ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೆ.ಡಿ.ಎಸ್. ಪಕ್ಷದ ಹಿರಿಯ ಮುಖಂಡರಾದ ಈರಣ್ಣ ಮರ್ಲಟ್ಟಿ ಪೋತ್ನಾಳ್ ಇವರಿಗೆ ಆಯ್ಕೆ ಅದೇಶ ಪತ್ರವನ್ನು ನೀಡಿ ರಾಜ್ಯ ಜೆ.ಡಿ.ಎಸ್.ಪಕ್ಷದ ಪ.ಪಂಗಡ ಮೋರ್ಚದ ರಾಜ್ಯಧ್ಯಕ್ಷರು ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ ಮಾನ್ವಿ ತಾಲೂಕಿನಲ್ಲಿ ಜೆ.ಡಿ.ಎಸ್. ಪಕ್ಷವನ್ನು ಸಮರ್ಥವಾಗಿ ಸಂಘಟಿಸುವುದಕ್ಕಾಗಿ ಜೆ.ಡಿ.ಎಸ್. ಪಕ್ಷದ ರಾಜ್ಯಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿರವರು ಪಕ್ಷದ ಹಿರಿಯ ಮುಖಂಡರಾದ ಈರಣ್ಣ ಮರ್ಲಟ್ಟಿ ಪೋತ್ನಾಳ್‌ರವರನ್ನು ನೂತನ ಅಧ್ಯಕ್ಷರನ್ನಾಗಿ ಅಯ್ಕೆಗೊಳಿಸಿ ಅದೇಶ ಮಾಡಿದ್ದಾರೆ ಎಂದು ತಿಳಿಸಿದರು.
ಜೆ.ಡಿ.ಎಸ್. ಮುಖಂಡರಾದ ಹೆಚ್.ಮೌನೇಶ್.ಪುರಸಭೆ ಸದಸ್ಯರಾದ ಶರಣಪ್ಪ ಮೇದಾ,ಹನುಮಂತ ಭೋವಿ, ಟಿ.ಮಲ್ಲಿಕಾರ್ಜುನ ಪಾಟೀಲ್ ಬಲ್ಲಟ್ಟಗಿ ಇದ್ದರು.