Breaking News

ಕಛೇರಿಕೆಲಸದಸಮಯದಲ್ಲಿ ಹೊಟೆಲ್‌ನಲ್ಲಿ ಕಂಟ್ರಾಕ್ಟರ್‌ನೊಂದಿಗೆ ಪ.ಪಂ. ಇಂಜಿನಿಯರ್ ಮೋಜು ಮಸ್ತಿ..?

P.P. with contractor in hotel during office work. Engineer is fun..?

ಜಾಹೀರಾತು
20250108 145202 COLLAGE Scaled




ಕೊಟ್ಟೂರು ಪಟ್ಟಣದ ಪಟ್ಟಣ ಪಂಚಾಯಿತಿಯ ಇಂಜಿನಿಯರ್ ಕಛೇರಿ  ಬೆಳಿಗ್ಗೆ 11 ಗಂಟೆ ಕೆಲಸದ ಅವಧಿಯಲ್ಲಿ ಹೋಟೆಲ್‌ನಲ್ಲಿ ಕಂಟ್ರಾಕ್ಟರ್ ರಾಜನಾಯ್ಕ ಜೊತೆಗೆ ಯಾವ ಕಾರಣಕ್ಕೆ ಕೂತಿದ್ದರು? ಇತ್ತೀಚೆಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ  ಪುಟ್ಟರಾಜ ಗವಾಯಿ ಬಡಾವಣೆ, ಮುದುಕನಕಟ್ಟೆ, ಎಂ.ಎಂ.ಜೆ. ಹರ್ಷವರ್ಧನ್ ರವರ ಮನೆಯವರೆಗೂ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಕೆಲಸವನ್ನು ಕಂಟ್ರಾಕ್ಟರ್ ಪಡೆದಿರುವ ರಾಜನಾಯ್ಕರವರು ಅಧಿಕಾರಿಗಳೊಂದಿಗೆ ಯಾವ ಕಾರಣಕ್ಕಾಗಿ ಹೋಟೆಲ್‌ನಲ್ಲಿ ಕೂತಿದ್ದರು? ಕಛೇರಿ ಸಮಯದಲ್ಲಿ ಅಧಿಕಾರಿಗಳು ಕಛೇರಿಯಲ್ಲಿರಬೇಕು, ಇಲ್ಲವೋ ಕೆಲಸ ನಡೆಯುತ್ತಿರುವ ಸ್ಥಳದಲ್ಲಿರಬೇಕು ಅದು ಬಿಟ್ಟು ಹೋಟೆಲ್‌ನಲ್ಲಿ ಕೂತಿರುವುದನ್ನು ನೋಡಿದರೆ, ಕಂಟ್ರಾಕ್ಟ್ ಕೆಲಸದ ಪರ್ಸೆಂಟೇಜ್ ವ್ಯವಹಾರ ನಡೆಯುತ್ತಿರಬಹುದೆ? ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಮೂಡಿವೆ. ಇದು ಕರ್ತವ್ಯಲೋಪವೆಂದು ಮೇಲಾಧಿಕಾರಿಗಳಿಗೆ ಅನಿಸುವುದಿಲ್ಲವೇ? ಮತ್ತು ಗುತ್ತಿಗೆದಾರರಾದ ರಾಜನಾಯ್ಕ  ಅಧಿಕಾರಿಗಳ ಜೊತೆ ಶಾಮೀಲಾಗಿರುವುದು ಕಂಡುಬಂದಿದ್ದು?  ಇವರು ಕೊಟ್ಟೂರು ಪಟ್ಟಣದಲ್ಲಿ ಪಡೆದ ಗುತ್ತಿಗೆ ಕಾಮಗಾರಿಗಳೆಲ್ಲವನ್ನು ತನಿಖೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರಾದ  ಅಂಜಿನಿ, ರಮೇಶ್, ಚಂದ್ರಶೇಖರ್, ರಾಜು, ಮಂಜು ಪತ್ರಿಕೆಗೆ ತಿಳಿಸಿದರು.


ಕೆಲಸದ ಅವಧಿಯಲ್ಲಿ ಹೊಟೇಲ್ ನಲ್ಲಿ ಗುತ್ತಿಗೆದಾರರಾದ ರಾಜನಾಯ್ಕ ಜೋತೆ ಯಲ್ಲಿ ಪ್ರಭು ಬೀರಾದವರ  ಪ ಪಂ ಇಂಜಿನಿಯರ್ ಅವರು ಸಾರ್ವಜನಿಕರು ಆರೊಪಸಿದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ.
ಮನೋಹರ್ ಯೋಜನಾ ನಿರ್ದೇಶಕರು   ವಿಜಯನಗರ ಜಿಲ್ಲೆ


ಕೊಟ್ಟೂರು ಪಟ್ಟಣದ ಇಂಜಿನಿಯರ್ ಆದ ಪ್ರಭು ಬಿರಾದಾರ್ ರವರು ಗುತ್ತಿಗೆದಾರರಾದ ರಾಜನಾಯ್ಕ ಇವರೊಂದಿಗೆ ಹೋಟೆಲ್‌ನಲ್ಲಿ ಇರುವುದನ್ನು ನೋಡಿದರೆ, ಇವರಿಬ್ಬರ ಮಧ್ಯೆ ಪರ್ಸೆಂಟೇಜ್ ಮಾತುಕತೆ ನಡೆಯುತ್ತಿರಬಹುದೆ?
ಹೆಸರೇಳಲಿಚ್ಛಿಸದ ಸಾರ್ವಜನಿಕ

About Mallikarjun

Check Also

unnamed

ಕಟ್ಟಡ ಇತರೆ ನರ‍್ಮಾಣ ಕರ‍್ಮಿಕರ ಆನ್ಲೈನ್ ರ‍್ಜಿ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ. ರ‍್ಕಾರ ಘೋಷಿಸಿದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಜಾರಿ ಮಾಡಿ

ಕಟ್ಟಡ ಇತರೆ ನರ‍್ಮಾಣ ಕರ‍್ಮಿಕರ ಆನ್ಲೈನ್ ರ‍್ಜಿ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ. ರ‍್ಕಾರ ಘೋಷಿಸಿದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಜಾರಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.